ಹಲವು ಕೆಲಸಗಳು ಬಾಕಿ ಉಳಿದು, ಒತ್ತಡಕ್ಕೆ ಕಾರಣವಾಗುತ್ತದೆ. ಆರೋಗ್ಯದಲ್ಲೂ ಏರುಪೇರು ಕಾಣಿಸಿಕೊಳ್ಳುವುದರಿಂದ ಚುರುಕಾಗಿ ಏನನ್ನೂ ಮಾಡುವುದಕ್ಕೆ ಆಗುವುದಿಲ್ಲ. ದೂರದ ಊರಿಂದ ಬಂಧುಗಳು ಬರುವ ಸಾಧ್ಯತೆ ಇದೆ. ಅವರಿಗೆ ಅಗತ್ಯ ಇರುವ ಮಾಹಿತಿ, ವಿಷಯ, ವಸ್ತುಗಳನ್ನು ಒಗ್ಗೂಡಿಸುವುದಕ್ಕೆ ನಿಮ್ಮ ಸಮಯ, ಹಣ ಮೀಸಲಾಗುತ್ತದೆ. ಆ ಕಾರಣಕ್ಕೆ ನಿಮ್ಮ ಕೆಲಸಗಳು ಮುಂದಕ್ಕೆ ಸಾಗಲ್ಲ.
ವಿವಾಹ ವಯಸ್ಕರಿಗೆ ಸೋದರ ಸಂಬಂಧದಲ್ಲಿ ಪ್ರಸ್ತಾವ ಬರುವ ಸಾಧ್ಯತೆ ಇದೆ. ನೀವು ಬಹಳ ಗೌರವದಿಂದ ನೋಡುವ ವ್ಯಕ್ತಿಯೊಬ್ಬರು ಮಧ್ಯಸ್ಥಿಕೆ ವಹಿಸಬಹುದು. ತಂದೆಯ ಆರೋಗ್ಯ ವಿಚಾರದಲ್ಲಿ ಎಚ್ಚರಿಕೆಯನ್ನು ವಹಿಸಿ. ಆಪ್ತರ ಜತೆಗೆ ಹಣಕಾಸಿನ ಬಗ್ಗೆ ಮಾತನಾಡುವ ಮುನ್ನ ದಾಖಲೆ- ಪತ್ರಗಳನ್ನು ಪರಿಶೀಲಿಸಿಕೊಳ್ಳಿ.
ಇತರರಿಂದ ದೊಡ್ಡ ನಿರೀಕ್ಷೆಗಳು ಬೇಡ. ನಿಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗುವುದು ಸಹ ಕಷ್ಟವಾಗುತ್ತದೆ. ಯಾವುದೋ ಮುಖ್ಯ ವಿಚಾರವನ್ನು ಮುಚ್ಚಿಡಲಾಗುತ್ತದೆ. ಆ ಕಾರಣಕ್ಕೆ ನಿಮ್ಮ ನಿರ್ಧಾರಗಳಲ್ಲಿ ತಪ್ಪಾಗುವ ಸಾಧ್ಯತೆ ಇದೆ. ಆದ್ದರಿಂದ ಸಂಪೂರ್ಣವಾಗಿ ವಿಚಾರ ತಿಳಿದ ಮೇಲೆ ಮುಂದಕ್ಕೆ ಹೆಜ್ಜೆ ಇಡಿ.
ಮನೆಯ ಮಾರಾಟಕ್ಕೆ ಇಟ್ಟಿರುವವರಿಗೆ ಖರೀದಿದಾರರು ದೊರಕುವ ಯೋಗ ಇದೆ. ಆದರೆ ಈ ಸಂದರ್ಭದಲ್ಲಿ ಕೆಲವು ಹಿತಶತ್ರುಗಳು ಅಡ್ಡಗಾಲು ಆಗುವ ಸಾಧ್ಯತೆ ಇದೆ. ಆದ್ದರಿಂದ ವ್ಯವಹಾರ ಮುಂದಿನ ಹಂತಕ್ಕೆ ಹೋಗಿ, ಪಕ್ಕಾ ಆಗುವ ತನಕ ಯಾರಿಗೂ ಈ ಬಗ್ಗೆ ತಿಳಿಸದಿರುವುದು ಉತ್ತಮ.
ಸ್ಥಳ ಬದಲಾವಣೆ ಅಥವಾ ಬೇರೆ ಊರಿಗೆ ಪ್ರಯಾಣ ಮಾಡಬೇಕಾದ ಸನ್ನಿವೇಶ ಎದುರಾಗುತ್ತದೆ. ಕೂಡಿಟ್ಟ ಹಣದಲ್ಲಿ ಸ್ವಲ್ಪ ಭಾಗವನ್ನು ತೆಗೆಯಬೇಕಾಗಿ ಬರಬಹುದು. ಉದ್ಯೋಗಕ್ಕೆ ಸಂಬಂಧಿಸಿದಂತೆ ಹೊಸ ಕೋರ್ಸ್ ಕಲಿಯಬೇಕು ಎಂಬ ಸೂಚನೆ ಬರಬಹುದು. ಇದಕ್ಕಾಗಿ ಸಿದ್ಧತೆ ನಡೆಸಬೇಕಾಗುತ್ತದೆ.
ನಿಮ್ಮ ಕೈ ಕೆಳಗೆ ಕೆಲಸ ಮಾಡುವವರ ಅಭಿಪ್ರಾಯವನ್ನೂ ಗಂಭೀರವಾಗಿ ಪರಿಗಣಿಸಿ. ಕಾನೂನಿಗೆ ಮೀರಿದ ಅಥವಾ ವಿರುದ್ಧವಾದ ಯಾವುದೇ ಕೆಲಸಕ್ಕೂ ಕೈ ಹಾಕಬೇಡಿ. ಅತಿಯಾದ ಲಾಭದ ಆಸೆ ತೋರಿಸಿ, ಕೆಲವರು ನಿಮ್ಮನ್ನು ದಾರಿ ತಪ್ಪಿಸುವ ಸಾಧ್ಯತೆಗಳಿವೆ. ದುಷ್ಟ ಜನರ ಸಹವಾಸದಿಂದ ದೂರವಿರಿ.
ನಿಮ್ಮ ನಿರ್ಧಾರಗಳು ಫಲ ನೀಡಲು ಆರಂಭಿಸುತ್ತವೆ. ಈ ಹಿಂದೆ ಪಟ್ಟಿದ್ದ ಶ್ರಮಕ್ಕೆ ಸೂಕ್ತ ಸ್ಥಾನ- ಮಾನ, ಗೌರವ ನೀಡಲಾಗುತ್ತದೆ. ಕುಟುಂಬದಲ್ಲಿ ಶುಭ ಕಾರ್ಯ ನಡೆಸುವ ಬಗ್ಗೆ ಚರ್ಚೆಗಳಾಗಬಹುದು. ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ ಕೇಳುವ ಯೋಗ ಇದೆ. ಆಸ್ತಿ ಖರೀದಿ ವ್ಯವಹಾರದಲ್ಲಿ ಕೊಂಚ ಗೊಂದಲ ಕಾಣಿಸಿಕೊಳ್ಳಬಹುದು.
ನಾಲಗೆ ಮೇಲೆ ಹತೋಟಿ ಇರಲಿ. ಗುರು- ಹಿರಿಯರು, ತಂದೆ- ತಾಯಿಗಳು ಹೇಳಿದ ಮಾತುಗಳನ್ನು ಕೇಳಿಸಿಕೊಳ್ಳಿ. ನಿಮಗೆ ತಕರಾರು, ಆಕ್ಷೇಪಗಳಿದ್ದಲ್ಲಿ ಗೌರವದಿಂದಲೇ ತಿಳಿಸಿ. ಅದನ್ನು ಬಿಟ್ಟು, ಜೋರು ಧ್ವನಿಯಲ್ಲಿ ಮಾತನಾಡಬೇಡಿ. ಇದರಿಂದ ಸಂಬಂಧ ಹಾಳಾಗುವ ಜೊತೆಗೆ ನಷ್ಟ ಅನುಭವಿಸಬೇಕಾಗುತ್ತದೆ.
ಮದುವೆ ವಿಚಾರಗಳ ಬಗ್ಗೆ ಮನೆಯಲ್ಲಿ ಮಾತುಕತೆ ಆಗುತ್ತಿದ್ದಲ್ಲಿ ಗೊಂದಲಗಳು ಕಾಣಿಸುತ್ತವೆ. ಬೇಕು ಮತ್ತು ಬೇಡ ಎಂಬ ಚರ್ಚೆಯಲ್ಲಿ ಬೇಸರ, ಅಸಮಾಧಾನಕ್ಕೆ ಕಾರಣ ಆಗಬಹುದು. ಆದರೆ ಇದು ತಾತ್ಕಾಲಿಕ ಮಾತ್ರ. ತಾಳ್ಮೆಯಿಂದ ಆಲೋಚಿಸಿ, ಚರ್ಚಿಸಿದಲ್ಲಿ ಎಲ್ಲವೂ ಬಗೆಹರಿಯಲಿದೆ.
ಸ್ತ್ರೀಯರ ಬಗ್ಗೆ ಗೌರವದಿಂದ ನಡೆದುಕೊಳ್ಳಿ. ಎಲ್ಲ ನನಗೇ ಗೊತ್ತು ಎಂಬ ಧೋರಣೆ ಬೇಡ. ವಾಹನ, ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳ ಖರೀದಿಗೆ ಹಣ ಖರ್ಚು ಮಾಡುವ ಸಾಧ್ಯತೆ ಇದೆ. ಇದಕ್ಕಾಗಿ ಕ್ರೆಡಿಟ್ ಕಾರ್ಡ್ ಬಳಸಬಹುದು ಅಥವಾ ಸಾಲ ಮಾಡಬೇಕಾಗಿ ಬರಬಹುದು.
ಮನೆಯಲ್ಲಿ ರುಚಿಕಟ್ಟಾದ ಅಡುಗೆ ಮಾಡುವ ಸಾಧ್ಯತೆ ಇದೆ. ಬಂಧುಗಳು, ಸ್ನೇಹಿತರು ಮನೆಗೆ ಬರಬಹುದು. ಹತ್ತಿರದ ಪ್ರಯಾಣಗಳನ್ನು ಆಯೋಜಿಸಬಹುದು. ಒಟ್ಟಾರೆ ಬಿಡುವು ಇಲ್ಲದಷ್ಟು ಕೆಲಸ ಈ ದಿನ ಇರುತ್ತದೆ. ಆಂಜನೇಯ ಸ್ವಾಮಿ ಸ್ಮರಣೆ ಮಾಡಿ. ಆರೋಗ್ಯ ಸಮಸ್ಯೆಗಳು ಸ್ವಲ್ಪ ಮಟ್ಟಿಗೆ ನಿವಾರಣೆ ಆಗುತ್ತದೆ.
ಧಾರ್ಮಿಕ ಕಾರ್ಯಕ್ರಮಗಳಿಗೆ ಹಣ ಖರ್ಚು ಮಾಡುವ ಯೋಗ ಇದೆ. ಉದ್ಯೋಗ ಅವಕಾಶಗಳ ಬಗ್ಗೆ ಹತ್ತಿರ ಸ್ನೇಹಿತರು ತಿಳಿಸಬಹುದು. ಪ್ರೀತಿಪಾತ್ರರ ಜತೆಗೆ ಸುಮಧುರವಾದ ಕ್ಷಣಗಳನ್ನು ಕಳೆಯುವ ಯೋಗ ಇದೆ. ಆದಾಯ ಮೂಲಗಳನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಿದ್ದೀರಿ.
Tags:
ದಿನ ಭವಿಷ್ಯ