ಇಂದಿನ ಭವಿಷ್ಯ ಮೇ 22, 2020

Today astrology in kannada today horoscope in kannada
ಸಂಗೀತಗಾರರಿಗೆ, ಕಲಾವಿದರಿಗೆ ಹಲವು ಅವಕಾಶಗಳು ದೊರೆಯುವ ಸಮಯ ಇದು. ಅನಿರೀಕ್ಷಿತವಾಗಿ ಧನಾಗಮ ಇದೆ. ಹೊಸ ಗ್ಯಾಜೆಟ್, ಲ್ಯಾಪ್ ಟಾಪ್, ಕ್ಯಾಮೆರಾ ಖರೀದಿ ಮಾಡುವ ಸಾಧ್ಯತೆ ಇದೆ. ಇದಕ್ಕಾಗಿ ಸ್ವಲ್ಪ ಹಣಕ್ಕೆ ಕೊರತೆ ಬಿದ್ದು, ಸಾಲ ಮಾಡುವ ಸಾಧ್ಯತೆಗಳಿವೆ. ಉದ್ಯೋಗ ವಿಚಾರಕ್ಕೆ ಮಹತ್ತರ ತೀರ್ಮಾನ ಕೈಗೊಳ್ಳಲಿದ್ದೀರಿ.
Today astrology in kannada today horoscope in kannada
ಸಂಬಂಧಿಕರು ಕೆಲವು ವಿಚಾರಗಳನ್ನು ನಿಮ್ಮ ಮೇಲೆ ಹೇರುವುದಕ್ಕೆ ಪ್ರಯತ್ನ ಮಾಡಬಹುದು. ಇದರಿಂದ ಮಾನಸಿಕವಾಗಿ ಒತ್ತಡ ಬೀಳಲಿದೆ. ಆದರೆ ದಾಕ್ಷಿಣ್ಯಕ್ಕೆ ಸಿಲುಕಿಕೊಂಡು ಕೆಲವು ಸಂಗತಿಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಒಪ್ಪಿಕೊಂಡ ಕೆಲಸಗಳನ್ನು ನಿಗದಿತ ಅವಧಿಯಲ್ಲಿ ಮುಗಿಸಿಕೊಡಲು ಕಷ್ಟವಾಗುತ್ತದೆ.

Today astrology in kannada today horoscope in kannada
ಮೇಲಧಿಕಾರಿಗಳ ಧೋರಣೆಯಿಂದಾಗಿ ವಿಪರೀತ ಸಿಟ್ಟು ಬರುತ್ತದೆ. ವಾಗ್ವಾದ ನಡೆಯುವ ಸಾಧ್ಯತೆಗಳಿವೆ. ಸಂಗಾತಿ- ಮಕ್ಕಳಿಗೆ ಅಗತ್ಯ ಇರುವ ವಸ್ತುಗಳ ಖರೀದಿಗೆ ಹೆಚ್ಚಿನ ಖರ್ಚು ಮಾಡಲಿದ್ದೀರಿ. ನೀವು ಮಾಡುತ್ತಿರುವ ಕೆಲಸಗಳು ಕೆಲವು ನಿರರ್ಥಕ ಎನಿಸಿ, ಆಸಕ್ತಿಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.

Today astrology in kannada today horoscope in kannada
ತುಂಬ ಚಂಚಲತೆ ಇರುತ್ತದೆ. ಯಾವುದೇ ಖರೀದಿ ವ್ಯವಹಾರಗಳನ್ನು ಮಾಡಬೇಡಿ. ಮುಖ್ಯ ವಸ್ತು, ಅಗತ್ಯ ದಾಖಲೆಗಳನ್ನು ಜೋಪಾನವಾಗಿ ಇಟ್ಟುಕೊಳ್ಳಿ. ಇತರರು ಮಾಡುವ ಆರೋಪಗಳನ್ನು ಗಂಭೀರವಾಗಿ ಆಲೋಚಿಸುವ ಅಗತ್ಯ ಇಲ್ಲ. ಈಗಿನ ತಾತ್ಕಾಲಿಕ ಹಿನ್ನಡೆಗಳಿಂದ ಹೊರಬರಲು ದಾರಿಗಳು ಕಾಣಿಸುತ್ತವೆ.

Today astrology in kannada today horoscope in kannada
ಬಾಯಿ ಬಿಟ್ಟು ಬಣ್ಣಗೇಡು ಎಂಬ ಮಾತಿದೆ. ನೀವಾಗಿಯೇ ಮರ್ಯಾದೆ ಕಳೆದುಕೊಳ್ಳುವ ಸಾಧ್ಯತೆ ಇದೆ. ಪೂರ್ತಿಯಾಗಿ ಮಾಹಿತಿ ಇಲ್ಲದ ವಿಚಾರಗಳ ಬಗ್ಗೆ ಏನಾದರೂ ಹೇಳಲೇಬೇಕು ಎಂಬ ಹಠ ಮಾಡಬೇಡಿ. ಗೊತ್ತಿಲ್ಲದ್ದನ್ನು ಗೊತ್ತಿಲ್ಲ ಎಂದು ಹೇಳುವುದರಲ್ಲಿ ಯಾವ ಅವಮಾನವೂ ಇಲ್ಲ.

Today astrology in kannada today horoscope in kannada
ಮಧುಮೇಹ, ರಕ್ತದೊತ್ತಡದಂಥ ಸಮಸ್ಯೆ ಇರುವವರಿಗೆ ಅದು ಹೆಚ್ಚಾಗುವ ಸಾಧ್ಯತೆ ಇದೆ. ಸಾರ್ವಜನಿಕ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಬಿಡುವಿಲ್ಲದ ದಿನವಾಗಿರುತ್ತದೆ. ಕೆಲವು ದಿನಗಳ ಮಟ್ಟಿಗೆ ಸ್ನೇಹಿತರಿಂದ ಅಥವಾ ಬಂಧುಗಳಿಂದ ಸಾಲ ಪಡೆಯಬೇಕಾದ ಸನ್ನಿವೇಶ ನಿರ್ಮಾಣ ಆಗುತ್ತದೆ.

Today astrology in kannada today horoscope in kannada
ಸಣ್ಣ- ಪುಟ್ಟ ಯಶಸ್ಸಿನಿಂದ ಮೈ ಮರೆಯಬೇಡಿ. ಸೋದರ- ಸೋದರಿಯರ ಸಲಹೆಗಳಿಗೆ ಗೌರವ ನೀಡಿ. ಸ್ವಂತ ಮನೆ ಇರುವವರಿಗೆ ದುರಸ್ತಿಗಾಗಿ ಹೆಚ್ಚಿನ ಖರ್ಚಾಗಬಹುದು. ತಾಯಿಯ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಿ. ವಾಹನ ಚಾಲನೆ ಮಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು.

Today astrology in kannada today horoscope in kannada
ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವವರಿಗೆ ಎಚ್ಚರಿಕೆಯಿಂದ ಇರಬೇಕಾದ ಸಮಯ ಇದು. ಪೋಸ್ಟ್ ಹಾಕುವಾಗ ಅಥವಾ ಪೋಸ್ಟ್ ಗಳನ್ನು ಷೇರು ಮಾಡುವಾಗ ಪರಿಣಾಮಗಳ ಬಗ್ಗೆ ಆಲೋಚಿಸಿ. ಇಲ್ಲದಿದ್ದಲ್ಲಿ ಅನಗತ್ಯ ವಾಗ್ವಾದ, ಮನಸ್ತಾಪ ಆಗುತ್ತದೆ. ಆಪ್ತರ ಜತೆಗೆ ಸಂಬಂಧ ಕಡಿದುಹೋಗುತ್ತದೆ.

Today astrology in kannada today horoscope in kannada
ಯಾರದೋ ಮೇಲಿನ ಸಿಟ್ಟಿಗೆ ಮನೆಯವರ ಜತೆ ಜಗಳ- ವೈಮನಸ್ಯ ಮಾಡಿಕೊಳ್ಳಬೇಡಿ. ಯಾವುದೇ ಸವಾಲು ಎದುರಾದರೂ ತಾಳ್ಮೆಯಿಂದ ಎದುರಿಸಿ. ಕ್ರಿಯೇಟಿವ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗುತ್ತದೆ. ಆದರೆ ಸ್ವಾತಂತ್ರ್ಯ ಕಡಿಮೆ ಇರುತ್ತದೆ. ಆದ್ದರಿಂದ ಜೋಪಾನವಾಗಿ ಮುಂದಕ್ಕೆ ಹೆಜ್ಜೆ ಇಡಿ.

Today astrology in kannada today horoscope in kannada
ಖರ್ಚಿನ ವಿಚಾರದಲ್ಲಿ ಎಚ್ಚರವಾಗಿರಬೇಕು. ಹಲವು ವಿಚಾರಗಳಲ್ಲಿ ಸ್ಪಷ್ಟತೆ ಸಿಗುತ್ತದೆ. ನಿಮ್ಮ ಸಾಮರ್ಥ್ಯದ ಬಗ್ಗೆ ಮೇಲಿನ ಅಧಿಕಾರಿಗಳಿಗೆ ಅರಿವಾಗುತ್ತದೆ. ಭವಿಷ್ಯದ ಉಳಿತಾಯ ಯೋಜನೆಗಳ ಬಗ್ಗೆ ಮುಖ್ಯ ತೀರ್ಮಾನ ಕೈಗೊಳ್ಳಲಿದ್ದೀರಿ. ದೂರ ಪ್ರಯಾಣವೊಂದು ಮಾಡಬೇಕೋ ಬೇಡವೋ ಎಂಬ ಗೊಂದಲ ಇರುತ್ತದೆ.

Today astrology in kannada today horoscope in kannada
ವೃತ್ತಿಪರರಿಗೆ ಹಲವು ಬಗೆಯ ಸವಾಲುಗಳು ಎದುರಾಗುತ್ತವೆ. ಪೊಲೀಸ್, ಸೈನ್ಯ, ಸೆಕ್ಯೂರಿಟಿ ಏಜೆನ್ಸಿಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೆಚ್ಚಿನ ಜವಾಬ್ದಾರಿ ವಹಿಸಲಾಗುತ್ತದೆ. ಕುಟುಂಬ, ಮಕ್ಕಳು, ಸಂಗಾತಿ ಕಡೆಗೆ ಹೆಚ್ಚಿನ ಸಮಯ ನೀಡುವುದಕ್ಕೆ ಆಗುವುದಿಲ್ಲ. ಇದರಿಂದ ಅಸಮಾಧಾನ ಸೃಷ್ಟಿಯಾಗುತ್ತದೆ.

Today astrology in kannada today horoscope in kannada
ರುಚಿಕಟ್ಟಾದ ಊಟ- ತಿಂಡಿ ಸವಿಯುವ ಯೋಗ ಇದೆ. ದೂರದ ಊರುಗಳಿಂದ ಆಹ್ವಾನ ಬರಬಹುದು. ಇನ್ನು ಧಾರ್ಮಿಕ ಚಟುವಟಿಕೆಗಳಿಗೆ, ದಾನ ಕಾರ್ಯಗಳಿಗೆ ಹಣ ನೀಡಲಿದ್ದೀರಿ. ವೈದ್ಯ ವೃತ್ತಿಯಲ್ಲಿ ಇರುವವರಿಗೆ ಸಾಮಾಜಿಕ ಗೌರವ, ಮನ್ನಣೆ ದೊರೆಯಲಿದೆ. ಹೊಸ ವಾಹನ ಖರೀದಿಸುವ ಬಗ್ಗೆ ಆಲೋಚನೆ ಮೂಡಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement