ಇಂದಿನ ಭವಿಷ್ಯ ಮೇ 21, 2020

Today astrology in kannada today horoscope in kannada
ವಾಹನ- ವಸ್ತು ಖರೀದಿಗಾಗಿ ಸಾಲ ಮಾಡಿಯಾದರೂ ಖರ್ಚು ಆಗುವ ಯೋಗ ಇದೆ. ಈ ಹಿಂದೆ ಇದ್ದ ಅನಾರೋಗ್ಯ ಸಮಸ್ಯೆಗಳು ಮರುಕಳಿಸುವ ಸಾಧ್ಯತೆ ಇದೆ. ರಿಯಲ್ ಎಸ್ಟೇಟ್ ವ್ಯವಹಾರ ಮಾಡುವವರು ಲಾಭದ ಆಸೆಯಿಂದ ಕಾಗದಪತ್ರಗಳನ್ನು ಪರಾಮರ್ಶಿಸದೆ ಬಿಡಬೇಡಿ. ಈ ಮೂಲಕ ನಿಮ್ಮ ಪಾಲಿನ ಸವಾಲನ್ನು ದಾಟಿ.
Today astrology in kannada today horoscope in kannada
ಪ್ರೇಮಿಗಳಿಗೆ ಪ್ರಣಯದಿಂದ ಕೂಡಿದ ಕ್ಷಣಗಳನ್ನು ಕಳೆಯುವ ಯೋಗ ಇದೆ. ಉಡುಗೊರೆಗಳನ್ನು ನೀಡುವ, ಪಡೆಯುವ ಸಾಧ್ಯತೆಗಳಿವೆ. ಯಾರಿಗೆ ನೆರವಿನ ಅಗತ್ಯ ಇರುತ್ತದೋ ಅಂಥವರಿಗೆ ಸಹಾಯ ಮಾಡಲಿದ್ದೀರಿ. ಗಂಟಲು ನೋವು, ಕೆಮ್ಮು ಇಂಥ ಸಮಸ್ಯೆಗಳು ಕಾಡುವ ಸಾಧ್ಯತೆ ಇದೆ.

Today astrology in kannada today horoscope in kannada
ದೀರ್ಘಾವಧಿ ಸಾಲಗಳನ್ನು ಪಡೆದಿರುವವರಿಗೆ ಒತ್ತಡದ ಸನ್ನಿವೇಶ ನಿರ್ಮಾಣ ಆಗಲಿದೆ. ಮೂರ್ಛೆ ಕಾಯಿಲೆಯಂಥ ಸಮಸ್ಯೆ ಇರುವವರಿಗೆ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕು. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಂಥ ಆಹಾರ ಸೇವನೆ ಮಾಡುವ ಕಡೆಗೆ ಗಮನವನ್ನು ನೀಡಿ.

Today astrology in kannada today horoscope in kannada
ಷೇರು ಮಾರ್ಕೆಟ್ ನಲ್ಲಿ ಹಣ ತೊಡಗಿಸಿರುವವರಿಗೆ ಏರಿಳಿತಗಳನ್ನು ಕಾಣುವ ದಿನ. ನಿಮ್ಮ ಬುದ್ಧಿವಂತಿಕೆ ಹಾಗೂ ಸಂಯಮದ ಮೇಲೆ ಎಷ್ಟು ಆದಾಯ ಎಂಬುದು ನಿರ್ಧಾರ ಆಗುತ್ತದೆ. ಶ್ರೀಮಂತಿಕೆ ಇದೆ ಎಂದು ಜಂಭ ತೋರಿಸಬೇಡಿ. ಈ ದಿನ ನಿಮ್ಮಲ್ಲಿ ಅಂಥದ್ದೊಂದು ಭಾವನೆ ಮೂಡಲಿದೆ. ಅದರಿಂದ ಹೊರಬನ್ನಿ.

Today astrology in kannada today horoscope in kannada
ಕಾರ್ಯದ ಒತ್ತಡದಲ್ಲಿ ಕುಟುಂಬಕ್ಕೆ ಹೆಚ್ಚಿನ ಗಮನ ನೀಡುವುದಕ್ಕೆ ಕಷ್ಟವಾಗುತ್ತದೆ. ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದ ಹಣ ಖರ್ಚಾಗಲಿದೆ. ಹೊಸ ಗ್ಯಾಜೆಟ್, ಫೋನ್ ಖರೀದಿ ಮಾಡುವುದಿದ್ದಲ್ಲಿ ಒಂದಕ್ಕೆ ನಾಲ್ಕು ಸಲ ಆಲೋಚನೆ ಮಾಡಿದ ಮೇಲೆ ಮುಂದಕ್ಕೆ ಹೆಜ್ಜೆ ಇಡಿ. ಕ್ರೆಡಿಟ್ ಕಾರ್ಡ್ ಬಳಕೆಯಲ್ಲಿ ಹಿಡಿತ ಇರಲಿ.

Today astrology in kannada today horoscope in kannada
ಸೂಜಿ ಮೊನೆಯಷ್ಟು ಸಹ ಆಚೀಚೆ ಆಗದಷ್ಟು ಶಿಸ್ತಾಗಿ ಕೆಲಸ ಆಗಬೇಕು ಎಂಬ ನಿಮ್ಮ ಧೋರಣೆ ಎಲ್ಲರಿಗೂ ಸಾಧ್ಯವಿಲ್ಲ. ಇನ್ನೊಬ್ಬರಿಗೆ ವಹಿಸಿದ ಕೆಲಸವನ್ನು ಮಾಡಲು ಬಿಡಿ. ಸುಮ್ಮಸುಮ್ಮನೆ ಮೂಗು ತೂರಿಸಬೇಡಿ. ಇಲ್ಲದಿದ್ದರೆ ಕೆಲಸ ಕೂಡ ನೀವು ಅಂದುಕೊಂಡಂತೆ ಸಾಗುವುದಿಲ್ಲ.

Today astrology in kannada today horoscope in kannada
ಸಂಬಂಧಗಳ ವಿಚಾರದಲ್ಲಿ ಅಳುಕು ಉಂಟಾಗಬಹುದು. ಈ ಹಿಂದೆ ನೀವಾಡಿದ ಮಾತನ್ನು ಮುಂದೆ ಮಾಡಿಕೊಂಡು, ರೇಗಿಸುವ- ಹೀಯಾಳಿಸುವ ಪ್ರಯತ್ನ ಮಾಡಲಾಗುತ್ತದೆ. ಯಾವುದಕ್ಕೂ ಆತಂಕಕ್ಕೆ ಗುರಿ ಆಗಬೇಡಿ. ಇನ್ನು ಹೊಸ ಅವಕಾಶವೊಂದು ನಿಮ್ಮ ಪಾಲಿಗೆ ಬರಲಿದ್ದು, ಆ ಬಗ್ಗೆ ನಿರ್ಧಾರ ಮಾಡುವ ಮುನ್ನ ಸಾಧಕ- ಬಾಧಕಗಳನ್ನು ಆಲೋಚಿಸಿ.

Today astrology in kannada today horoscope in kannada
ಸ್ನೇಹಿತರ ನೆರವಿನಿಂದ ಮಾನಸಿಕ ನೆಮ್ಮದಿ ದೊರೆಯಲಿದೆ. ಉದ್ಯೋಗ ವಿಚಾರದಲ್ಲಿನ ಗೊಂದಲಗಳು ನಿವಾರಣೆ ಆಗಲಿವೆ. ಉದ್ಯಮ- ವ್ಯಾಪಾರದಲ್ಲಿ ಇರುವವರಿಗೆ ಸಾಲ ಪಡೆಯುವ ಅನಿವಾರ್ಯ ಸ್ಥಿತಿ ನಿರ್ಮಾಣ ಆಗಬಹುದು. ವಿಪರೀತ ಬಡ್ಡಿ ಆಸೆ ತೋರಿಸುವ ವಂಚಕರಿಂದ ಎಚ್ಚರವಾಗಿರಿ.

Today astrology in kannada today horoscope in kannada
ರುಚಿಕಟ್ಟಾದ ಊಟ- ತಿಂಡಿ ಸವಿಯುವ ಯೋಗ ಇದೆ. ಸಂಗಾತಿಯ ಮಾತುಗಳಿಂದ ಸ್ವಲ್ಪ ಮಟ್ಟಿಗೆ ಬೇಸರ ಆಗಲಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳಬೇಕಗಬಹುದು. ಪ್ರಭಾವಿಗಳ ಪರಿಚಯದಿಂದ ಅನುಕೂಲ ಒದಗಿ ಬರಲಿದೆ.

Today astrology in kannada today horoscope in kannada
ವಾಹನ ಚಾಲನೆ ವೇಳೆ ಎಚ್ಚರಿಕೆಯಿಂದ ಇರಬೇಕು. ದೂರದ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಮಕ್ಕಳು- ಸಂಗಾತಿಯ ಆರೋಗ್ಯ ಕಾರಣಕ್ಕೆ ಖರ್ಚು ಮಾಡಬೇಕಾಗುತ್ತದೆ. ಸುಲಭವಾಗಿ ಆಗಬೇಕಾದ ಕೆಲಸಗಳನ್ನು ಸಹ ಎರಡೆರಡು ಸಲ ಮಾಡಬೇಕಾಗುತ್ತದೆ. ಮಾತಿನ ಮೇಲೆ ಹಿಡಿತ ಇರಲಿ.

Today astrology in kannada today horoscope in kannada
ಶುಭ ಕಾರ್ಯಗಳನ್ನು ನಿಮ್ಮ ಮುಂದಾಳತ್ವದಲ್ಲಿ ಮಾಡಬೇಕಾದ ಸನ್ನಿವೇಶ ಎದುರಾಗುತ್ತದೆ. ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ಕೂಡ ನಿರ್ವಹಿಸಲಿದ್ದೀರಿ. ಬಹಳ ಕಾಲದಿಂದ ಇರುವ ಕೌಟುಂಬಿಕ ಸಮಸ್ಯೆಗಳನ್ನು ನಿವಾರಣೆ ಮಾಡಲಿದ್ದೀರಿ. ಪಿತ್ರಾರ್ಜಿತ ಆಸ್ತಿ ವಿಚಾರವು ರಾಜೀ- ಸಂಧಾನದ ಮೂಲಕ ಬಗೆಹರಿಯುವ ಸಾಧ್ಯತೆ ಇದೆ.

Today astrology in kannada today horoscope in kannada
ಕ್ರಿಯೇಟಿವ್ ಕ್ಷೇತ್ರದಲ್ಲಿ ಇರುವವರಿಗೆ ಹಲವು ಅವಕಾಶಗಳು ದೊರೆಯಲಿವೆ. ಕಾನೂನು ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಗೌರವ- ಮನ್ನಣೆ ದೊರೆಯಲಿದೆ. ಸ್ವಂತ ವ್ಯಾಪಾರ- ವ್ಯವಹಾರ ಮಾಡುವವರು ದೂರ ಪ್ರಯಾಣ ಮಾಡಬೇಕಾಗುತ್ತದೆ. ಆದರೆ ಇದರಿಂದ ಲಾಭ ಇದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement