ಇಂದಿನ ಭವಿಷ್ಯ ಮೇ 20, 2020

Today astrology in kannada today horoscope in kannada
ಯಾವ ವಿಚಾರವನ್ನೂ ಗಂಭೀರವಾಗಿ ತೆಗೆದುಕೊಂಡು, ಮನಸಿಗೆ ಹಚ್ಚಿಕೊಳ್ಳಬೇಡಿ. ಏಕೆಂದರೆ, ಸಣ್ಣ- ಪುಟ್ಟ ಸಮಸ್ಯೆಗಳು ತಲೆ ಹೋಗುವಂತೆ ಭಾಸವಾಗುತ್ತವೆ. ಹಾಗಂದುಕೊಂಡು ಚಿಂತೆ ಹಚ್ಚಿಸಿಕೊಂಡರೆ ಆರೋಗ್ಯಕ್ಕೆ ಸಮಸ್ಯೆ ಹಾಗೂ ನೆಮ್ಮದಿ ಹಾಳು. ಸಾಧ್ಯವಾದಷ್ಟು ಸಂಯಮದಿಂದ ಇರುವುದಕ್ಕೆ ಪ್ರಯತ್ನಿಸಿ.
Today astrology in kannada today horoscope in kannada
ನಗುನಗುತ್ತಾ ದಿನ ಕಳೆಯುವ ಯೋಗ ಇದೆ. ಸಾಂಸಾರಿಕ ಕಷ್ಟ- ನಷ್ಟಗಳನ್ನೆಲ್ಲ ಒಂದು ಕಡೆಯಿಂದ ಬಗೆಹರಿಸಿಕೊಳ್ಳುತ್ತೀರಿ. ಯಾರ ಟೀಕೆ- ಟಿಪ್ಪಣಿಗೂ ಕಿವಿಗೊಡದೆ ವಾಸ್ತವ ನೆಲೆಗಟ್ಟಿನಲ್ಲಿ ಆಲೋಚನೆ ಮಾಡಲಿದ್ದೀರಿ. ಇತರರ ಬಗ್ಗೆ ದಯೆ ತೋರಿಸಿ, ಹಣಕಾಸಿನ ನೆರವು ನೀಡುವ ಸಾಧ್ಯತೆ ಇದೆ.

Today astrology in kannada today horoscope in kannada
ಬೇಗ ಬೇಗ ಕೆಲಸ ಆಗಿಹೋಗಬೇಕು ಎಂಬ ಕಾರಣಕ್ಕೆ ಛಕಾಛಕ್ ನಿರ್ಧಾರಗಳನ್ನು ಕೈಗೊಳ್ಳಲಿದ್ದೀರಿ. ಹಣ ಹೊಂದಿಸಿಕೊಳ್ಳುವುದು, ಸಮಯ ಮೀಸಲಿಡುವುದು ಎಲ್ಲವನ್ನೂ ಮಾಡಲಿದ್ದೀರಿ. ಆದರೆ ಇನ್ನೇನು ಕೆಲಸ ಮುಗಿಯಿತು ಅನ್ನೋ ಹೊತ್ತಿಗೆ ಆಲಸ್ಯ ನಿಮ್ಮನ್ನು ಬಾಧಿಸಲಿದೆ.

Today astrology in kannada today horoscope in kannada
ನೀವು ಯಾರ ಮಾತನ್ನು ಗಂಭೀರವಾಗಿ ಪರಿಗಣಿಸುತ್ತಿದ್ದೀರಿ, ಯಾರ ಮಾತನ್ನು ನಂಬುತ್ತಿದ್ದೀರಿ ಎಂಬ ಕಡೆಗೆ ಗಮನ ನೀಡಿ. ಹೂಡಿಕೆ, ಹಣಕಾಸಿನ ವಿಚಾರದಲ್ಲಿ ತೆಗೆದುಕೊಳ್ಳುವ ನಿರ್ಧಾರದಿಂದ ಆಗುವ ಪರಿಣಾಮವನ್ನು ಯೋಚಿಸಿಕೊಳ್ಳಿ. ಒಂದು ಸಲಕ್ಕೆ ಮುಂದುವರಿದ ಮೇಲೆ ವಾಪಸ್ ಬರಲು ಸಾಧ್ಯವಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ.

Today astrology in kannada today horoscope in kannada
ನೀವೇ ಕಟ್ಟಿ ಬೆಳೆಸಿದ ಸಂಸ್ಥೆ, ಗುಂಪು, ಸಂಘಟನೆಯಲ್ಲಿ ಒತ್ತಡ ಕಾಣಿಸಿಕೊಳ್ಳಬಹುದು. ಮುಖ್ಯವಾಗಿ ಯಾರಿಗೆ ನೀವು ಅತಿಯಾದ ಸಲುಗೆ ನೀಡಿದ್ದೀರೋ ಅವರೇ ಇಕ್ಕಟ್ಟಿಗೆ ಸಿಲುಕಿಸಲಿದ್ದಾರೆ. ಸಾರ್ವಜನಿಕ ಸೇವೆಯಲ್ಲಿ ಇರುವವರು ಮುಖ್ಯ ದಾಖಲೆ- ಪತ್ರಗಳನ್ನು ಒಂದಕ್ಕೆ ಎರಡು ಬಾರಿ ಗಮನಿಸಿ.

Today astrology in kannada today horoscope in kannada
ಎಷ್ಟು ಬೇಡ ಅಂದುಕೊಂಡರೂ ಸಾಲದಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಅದರಲ್ಲೂ ಮಕ್ಕಳ ಒತ್ತಡದಿಂದ ಸಾಲ ಮಾಡಬೇಕಾದ ಸನ್ನಿವೇಶ ಸೃಷ್ಟಿ ಆಗುತ್ತದೆ. ಮುಖ್ಯವಾದ ದಾಖಲೆ- ಪತ್ರಗಳನ್ನು ಜೋಪಾನವಾಗಿ ಇಟ್ಟುಕೊಳ್ಳಿ. ಪ್ರಯಾಣ ಮಾಡುವ ಸಂದರ್ಭದಲ್ಲಿ ಜಾಗ್ರತೆ ಮುಖ್ಯ.

Today astrology in kannada today horoscope in kannada
ಗುರು- ಹಿರಿಯರ ಆಶೀರ್ವಾದ ಬಲದಿಂದ ವ್ಯಾಪಾರ- ವ್ಯವಹಾರಗಳಲ್ಲಿ ಪ್ರಗತಿ ಇದೆ. ಇಷ್ಟು ಸಮಯ ಕಾಡುತ್ತಿದ್ದ ಗೊಂದಲ ನಿವಾರಣೆ ಆಗಲಿದೆ. ಹೊಸದಾಗಿ ಕಾರು- ದ್ವಿಚಕ್ರ ವಾಹನ ಖರೀದಿ ಮಾಡಬೇಕು ಅಂದುಕೊಂಡಿದ್ದಲ್ಲಿ ಸುಲಭವಾಗಿ ಸಾಲ ಸಿಗುವಂಥ ಸಾಧ್ಯತೆಗಳು ಇವೆ.

Today astrology in kannada today horoscope in kannada
ಸ್ನೇಹಿತರ ಸಲುವಾಗಿ ಕೈಯಿಂದ ಹಣ ಕಳೆದುಕೊಳ್ಳುವ ಅಥವಾ ಖರ್ಚು ಮಾಡುವ ಸನ್ನಿವೇಶ ಎದುರಾಗಬಹುದು. ವೃತ್ತಿ- ವ್ಯಾಪಾರದಲ್ಲಿ ಅನಿರೀಕ್ಷಿತ ಬೆಳವಣಿಗೆಗಳು ಆಗಲಿವೆ. ಸ್ವತಂತ್ರ ಆಲೋಚನೆ ಮೂಲಕ ನೀವು ಕಾರ್ಯ ನಿರ್ವಹಿಸುವ ಸಂಸ್ಥೆಗೆ ಲಾಭ ಮಾಡಿಕೊಡಲಿದ್ದೀರಿ.

Today astrology in kannada today horoscope in kannada
ಈ ದಿನ ನಿಮಗೆ ದೃಷ್ಟಿಯ ದೋಷ ಕಾಡಬಹುದು. ಆದ್ದರಿಂದ ಕಪ್ಪು ಬಟ್ಟೆಯನ್ನು ಧರಿಸಬೇಡಿ. ಹೊಸ ಜಾಗದಲ್ಲಿ ಆಹಾರ ಸೇವನೆ ಮಾಡುವಾಗ ಜಾಗ್ರತೆಯಿಂದ ಇರಬೇಕು. ದೈಹಿಕ ದೃಢತೆಗಾಗಿ ನೀವು ಈ ಹಿಂದೆ ಹಾಕಿದ್ದ ಶ್ರಮಕ್ಕೆ ಈಗ ಪ್ರತಿಫಲ ದೊರೆತಂತೆ ಆಗುತ್ತದೆ. ಅಂದುಕೊಂಡ ಕೆಲಸಗಳು ವಿಳಂಬ ಆಗಲಿದೆ.

Today astrology in kannada today horoscope in kannada
ವೃತ್ತಿನಿರತ ಬರಹಗಾರರಿಗೆ, ಪತ್ರಕರ್ತರಿಗೆ, ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಏಕ ಕಾಲಕ್ಕೆ ನಾನಾ ಕೆಲಸಗಳು ಬರುತ್ತವೆ. ಯಾವುದಕ್ಕೆ ಆದ್ಯತೆ ನೀಡಬೇಕು ಎಂದು ಗೊತ್ತಾಗದೆ ಗೊಂದಲಕ್ಕೆ ಸಿಲುಕಿಕೊಳ್ಳುತ್ತೀರಿ. ಪರಿಸ್ಥಿತಿಯನ್ನು ವಿಶ್ಲೇಷಿಸುವ ನಿಮ್ಮ ಸಾಮರ್ಥ್ಯದ ಮೂಲಕ ದೊಡ್ಡ ಸವಾಲನ್ನು ದಾಟಿಕೊಳ್ಳುತ್ತೀರಿ.

Today astrology in kannada today horoscope in kannada
ಜಂಕ್ ಫುಡ್ ಗಳಿಂದ ದೂರ ಇರಿ. ನಾಲಗೆ ಚಪಲಕ್ಕೆ ಬಿದ್ದು, ಆರೋಗ್ಯವನ್ನು ಹಾಳು ಮಾಡಿಕೊಳ್ಳದಿರಿ. ನೇರವಾದ ಮಾತುಗಳ ಮೂಲಕ ಪ್ರಭಾವಿಗಳನ್ನೇ ಎದುರು ಹಾಕಿಕೊಳ್ಳುವ ಸಾಧ್ಯತೆ ಇದೆ. ಒಡವೆಗಳನ್ನು ಜೋಪಾನವಾಗಿ ಎತ್ತಿಟ್ಟುಕೊಳ್ಳಿ. ದೂರದ ಊರುಗಳಲ್ಲಿ ಇರುವ ಬಂಧುಗಳು ನಿಮ್ಮ ಸಹಾಯ ಕೇಳಬಹುದು.

Today astrology in kannada today horoscope in kannada
ಮನೆಯಲ್ಲಿ ಸಂಭ್ರಮದ ವಾತಾವರಣ ಇರಲಿದೆ. ಕುಟುಂಬದಲ್ಲಿ ನಿಮ್ಮ ಮಾತಿಗೆ ಮನ್ನಣೆ ದೊರೆಯಲಿದೆ. ಏನನ್ನೂ ಹೇಳದೆ, ಆಗಬೇಕಾದ ಕೆಲಸಗಳು ಪೂರ್ಣಗೊಳ್ಳಲಿವೆ. ದೂರ ಪ್ರಯಾಣ ಮಾಡಬೇಕೆಂದು ಇರುವವರು ಯಾರನ್ನು ಭೇಟಿ ಮಾಡಬೇಕೆಂದು ಇದ್ದೀರೋ ಅವರು ಲಭ್ಯರಿದ್ದಾರಾ ಎಂಬುದನ್ನು ವಿಚಾರಿಸಿಕೊಂಡು, ಮುಂದಿನ ತೀರ್ಮಾನ ಮಾಡಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement