ಮನೆಯ ಹಿರಿಯ ಮಕ್ಕಳಿಗೆ ಹೆಚ್ಚಿನ ಜವಾಬ್ದಾರಿ, ಖರ್ಚು ಇದೆ. ಶುಭ ಕಾರ್ಯಗಳು ಸೇರಿದಂತೆ ಕುಟುಂಬದ ಇತರ ಖರ್ಚುಗಳ ಹೊಣೆಯನ್ನು ನೀವೇ ಹೊತ್ತುಕೊಳ್ಳಬೇಕಾಗುತ್ತದೆ. ಆಸ್ತಿಹಂಚಿಕೆ ವಿಚಾರವಾಗಿ ದಾಯಾದಿಗಳ ಜತೆಗೆ ಬಿರುಸಿನ ಮಾತುಕತೆ ಆಗುವ ಸಾಧ್ಯತೆ ಇದೆ. ದೂರ ಪ್ರಯಾಣ ಯೋಗ ಇದೆ.
ದಾಕ್ಷಿಣ್ಯಕ್ಕೆ ಸಿಲುಕಿಕೊಂಡು ಊಟ- ತಿಂಡಿಯನ್ನು ಹೆಚ್ಚಿಗೆ ಮಾಡಿ, ಆರೋಗ್ಯ ಸಮಸ್ಯೆ ತಂದುಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ನಾಲಗೆ ಮೇಲೆ ಹಿಡಿತ ಇರಲಿ. ಬೇರೆಯವರು ಮಾಡಿದ ಉತ್ತಮ ಕೆಲಸದ ಶ್ರೇಯವನ್ನು ನೀವು ತೆಗೆದುಕೊಳ್ಳಲು ಯತ್ನಿಸಬೇಡಿ. ಸ್ವಂತ ವ್ಯಾಪಾರ- ವ್ಯವಹಾರದಲ್ಲಿ ಅನಿಶ್ಚಿತತೆ ಎದುರಾಗಬಹುದು.
ಎಲ್ಲರದೂ ಒಂದು ದಾರಿಯಾದರೆ ನಿಮ್ಮದೇ ಇನ್ನೊಂದು ದಾರಿ ಎಂಬಂತೆ ಆಗುತ್ತದೆ. ಈ ಕಾರಣಕ್ಕೆ ಇತರರ ಬೆಂಬಲ ನಿಮಗೆ ದೊರೆಯುವುದಿಲ್ಲ. ಜೀವನದಲ್ಲಿ ಸ್ವಾರಸ್ಯ ಇಲ್ಲದಂತೆ ಭಾಸವಾಗುತ್ತದೆ. ಮಾಡುತ್ತಿರುವ ಉದ್ಯೋಗದಲ್ಲಿ ಆಸಕ್ತಿ ಕಳೆದುಕೊಂಡು, ಕೆಲಸ ಬಿಡುವ ಬಗ್ಗೆ ಆಲೋಚನೆ ಮೂಡಬಹುದು.
ಪ್ರೀತಿಪಾತ್ರರಿಗೆ ಉಡುಗೊರೆ ನೀಡುವ ಸಾಧ್ಯತೆ ಇದೆ. ವೃತ್ತಿಪರರಿಗೆ ಅವಕಾಶಗಳು ದೊರೆಯುವ ಸಾಧ್ಯತೆ ಇದೆ. ಆದರೆ ಕೆಲವು ರಿಸ್ಕ್ ತೆಗೆದುಕೊಳ್ಳದ ಹೊರತು ನೀವು ಅಂದುಕೊಂಡಂತೆ ಕೆಲಸ- ಕಾರ್ಯಗಳು ಆಗುವುದು ಅಸಾಧ್ಯದ ಮಾತು. ಬಂಧುಗಳು- ಸ್ನೇಹಿತರಿಂದ ಹಣಕಾಸಿನ ನೆರವು ಪಡೆಯಬೇಕಾಗಬಹುದು.
ಉದ್ಯೋಗ ವಿಚಾರವಾಗಿ ಬದಲಾವಣೆಗಳನ್ನು ನಿರೀಕ್ಷೆ ಮಾಡಬಹುದು. ಈ ದಿನ ಸ್ವಲ್ಪ್ ಮಟ್ಟಿಗೆ ಒತ್ತಡ ಇರುತ್ತದೆ. ನಿಗದಿತ ಅವಧಿಯೊಳಗೆ ಕೆಲಸ ಪೂರ್ಣಗೊಳಿಸುವುದು ಸವಾಲಾಗುತ್ತದೆ. ನೀವಾಗಿಯೇ ಒಪ್ಪಿಕೊಂಡಂಥ ಕೆಲಸಗಳು ತಡವಾಗುತ್ತವೆ. ಸಮಯಕ್ಕೆ ಸರಿಯಾಗು ಊಟ- ತಿಂಡಿ ಮಾಡದಿದ್ದಲ್ಲಿ ನಾನಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಆನ್ ಲೈನ್ ವ್ಯವಹಾರಗಳನ್ನು ಮಾಡುವಾಗ ಎಚ್ಚರಿಕೆಯಿಂದ ಇರಬೇಕು. ಇನ್ನು ಬೇರೆ ಬ್ಯಾಂಕ್ ಖಾತೆಗೆ ಹಣ ಹಾಕುವಾಗ ಕೂಡ ಜಾಗ್ರತೆಯಿಂದ ವ್ಯವಹಾರ ನಡೆಸಬೇಕು. ಪ್ರೀತಿಪಾತ್ರರ ಜತೆಗೆ ಜಗಳ ಆಗುವ ಸಾಧ್ಯತೆಗಳಿವೆ. ಇತರರ ಚಾಡಿ ಮಾತುಗಳನ್ನು ನಂಬಿ, ಅನುಮಾನ ಪಡಬೇಡಿ.
ಒಂದೇ ಸಲಕ್ಕೆ ಎರಡೆರಡು ಬಗೆಯ ಆಲೋಚನೆ ಮೂಡಲಿದೆ. ಯಾವುದು ಸರಿ ಹಾಗೂ ಯಾವುದು ತಪ್ಪು ಎಂದು ನಿರ್ಧಾರ ಕೈಗೊಳ್ಳುವುದೇ ಸಮಸ್ಯೆಯಾಗಿ ಮಾರ್ಪಡಲಿದೆ. ಯಾರದೋ ಮೇಲಿನ ದ್ವೇಷ ಸಾಧನೆಗಾಗಿ ನಿಮ್ಮ ಸಮಯ ಹಾಗೂ ಹಣವನ್ನು ವ್ಯರ್ಥ ಮಾಡಬೇಡಿ.
ದಾನ- ಧರ್ಮದ ಬಗ್ಗೆ ಮನಸ್ಸು ವಾಲುತ್ತದೆ. ಸಂಗಾತಿ- ಮಕ್ಕಳ ಸಲುವಾಗಿ ಉಳಿತಾಯ ಯೋಜನೆಗಳನ್ನು ಆರಿಸಿಕೊಳ್ಳುತ್ತೀರಿ. ಹೆಚ್ಚುವರಿ ಆದಾಯ ರೂಪಿಸಿಕೊಳ್ಳುವುದಕ್ಕಾಗಿ ದೀರ್ಘಾವಧಿ ಯೋಜನೆಯನ್ನು ರೂಪಿಸಲಿದ್ದೀರಿ. ಬಂಧುಗಳ ನೆರವಿನಿಂದ ನಿಮ್ಮ ಅಗತ್ಯಕ್ಕೆ ಸಾಲ ದೊರೆಯುವ ಸಾಧ್ಯತೆ ಇದೆ.
ಹಳೇ ಪ್ರೇಮ ಪ್ರಕರಣಗಳು ವಿಪರೀತ ಕಾಡಲಿದೆ. ಇದರಿಂದ ಏಕಾಗ್ರತೆಯಿಟ್ಟು ಕೆಲಸ- ಕಾರ್ಯಗಳನ್ನು ಮಾಡುವುದು ಕಷ್ಟವಾಗುತ್ತದೆ. ಯಾವುದಾದರೂ ಸಣ್ಣ ತಪ್ಫಾದರೂ ನಿಮ್ಮಿಂದ ಆಗಿ, ಅದಕ್ಕೆ ಸಲ್ಲದ ಮಾತು- ಅಪವಾದಗಳನ್ನು ಕೇಳಬೇಕಾಗುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಮಾತು ಕಡಿಮೆ ಮಾಡಿ.
ನಿಮ್ಮ್ ಮಾತಿನ ಮೂಲಕ ಹಲವು ಸಮಸ್ಯೆಗಳನ್ನು ನಿವಾರಿಸಿಕೊಳ್ಳುವ ಹಾಗೂ ತಂದುಕೊಳ್ಳುವ ಎರಡೂ ಸಾಧ್ಯತೆ ಈ ದಿನ ಇದೆ. ಆದ್ದರಿಂದ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತೀರಿ, ಅದರಲ್ಲೂ ನಿಮ್ಮ ಮಾತು ಹೇಗಿರುತ್ತದೆ ಎಂಬುದರ ಆಧಾರದ ಮೇಲೆ ಮಾನಸಿಕ ನೆಮ್ಮದಿಯೂ ಆಧಾರವಾಗಿದೆ.
ದೂರ ಪ್ರಯಾಣದ ಬಗ್ಗೆ ಯೋಜನೆ ರೂಪಿಸುತ್ತೀರಿ. ಹಣಕಾಸಿನ ಸ್ಥಿತಿಯನ್ನು ಅವಲೋಕಿಸುತ್ತೀರಿ. ಬಹಳ ಸಮಯದ ನಂತರ ದೊಡ್ಡ ಖರ್ಚಿನ ಬಾಬ್ತು ನಿಭಾಯಿಸಲೇ ಬೇಕಾದ ಹೊಣೆಗಾರಿಕೆ ನಿಮ್ಮ ಮೇಲೆ ಬೀಳಲಿದೆ. ನಿಮ್ಮ ಸಾಂಸಾರಿಕ ರಹಸ್ಯಗಳನ್ನು ಯಾರ ಜತೆಗೂ ಹಂಚಿಕೊಳ್ಳಬೇಡಿ.
ಅಧಿಕಾರ ಕೇಂದ್ರದಲ್ಲಿ ಇರುವವರಿಗೆ ಜವಾಬ್ದಾರಿ ಹೆಚ್ಚಾಗಲಿದೆ. ಪ್ರಭಾವಿಗಳ ಸಂಪರ್ಕಕ್ಕೆ ಬರಲಿದ್ದೀರಿ. ಇದರಿಂದ ಭವಿಷ್ಯದಲ್ಲಿ ನಿಮಗೆ ಅನುಕೂಲ ಆಗಲಿದೆ. ಆದರೆ ಈ ಸಮಯದಲ್ಲಿ ಸ್ವಲ್ಪ ಮಟ್ಟಿಗೆ ಹಿಂಜರಿಕೆ ನಿಮ್ಮನ್ನು ಕಾಡಬಹುದು. ಆದರೆ ಧೈರ್ಯವಾಗಿ ಮುಂದುವರಿದಲ್ಲಿ ಯಶಸ್ಸಿದೆ.
Tags:
ದಿನ ಭವಿಷ್ಯ