ಷೇರು ಮಾರುಕಟ್ಟೆ ವ್ಯವಹಾರ ಮಾಡುವವರು ಬಹಳ ಎಚ್ಚರಿಕೆಯಿಂದ ವ್ಯವಹಾರ ಮಾಡಬೇಕು. ಸಾಕಷ್ಟು ಲಾಭ ಬಂದ ತಕ್ಷಣ ನಗದು ಮಾಡಿಕೊಳ್ಳುವತ್ತ ಅಥವಾ ಹೆಚ್ಚಿನ ನಷ್ಟವಾಗದಂತೆ ಎಚ್ಚರಿಕೆಯನ್ನು ವಹಿಸಿ. ದಾನ- ಧರ್ಮಾದಿ ಕಾರ್ಯಗಳನ್ನು ಮಾಡಲಿದ್ದೀರಿ. ಇದಕ್ಕಾಗಿ ಹಣ ಖರ್ಚು ಮಾಡುವ ಯೋಗ ಇದೆ.
ವ್ಯಾಪಾರ- ವ್ಯವಹಾರಗಳನ್ನು ಮಾಡುತ್ತಿರುವವರಿಗೆ ಹಣಕಾಸಿನ ಅಗತ್ಯಗಳನ್ನು ಪೂರೈಸಿಕೊಳ್ಳಲು ಸೂಕ್ತ ಸಾಲ ಸೌಲಭ್ಯ ದೊರೆಯುವ ಮಾರ್ಗ ಗೋಚರಿಸುತ್ತದೆ. ಸಾಕು ಪ್ರಾಣಿಗಳ ಮಾರಾಟ ಮಾಡಬೇಕಾಗುತ್ತದೆ. ಸ್ವಂತ ಮನೆಗಳು ಇದ್ದಲ್ಲಿ ದುರಸ್ತಿ ಮತ್ತಿತರ ಕಾರ್ಯಗಳಿಗೆ ವೆಚ್ಚ ಮಾಡಬೇಕಾಗುತ್ತದೆ.
ಎದುರಿನ ವ್ಯಕ್ತಿಗೆ ಏನು ಹೇಳುವುದಕ್ಕೆ ನೀವು ಪ್ರಯತ್ನ ಪಟ್ಟರೂ ತಪ್ಫಾದ ಸಂದೇಶವೇ ರವಾನೆ ಆಗುವ ಸಾಧ್ಯತೆ ಹೆಚ್ಚಿದೆ. ಈ ಹಿಂದೆ ನೀವು ಮಾಡಿದ್ದ ಕೆಲಸದ ಕಾರಣಕ್ಕೆ ಈ ದಿನ ನಿಮಗೆ ಕೆಲವು ವಿಚಾರದಲ್ಲಿ ವಿನಾಯಿತಿ ಸಿಗಬಹುದು. ಇಲ್ಲದಿದ್ದಲ್ಲಿ ಸಣ್ಣ- ಪುಟ್ಟ ಶಿಕ್ಷೆಯನ್ನಾದರೂ ಅನುಭವಿಸಬೇಕಾಗುತ್ತದೆ.
ನಿರೀಕ್ಷೆಯಂತೆ ಕೆಲಸ- ಕಾರ್ಯಗಳು ಮುಗಿದರೂ ಹಣಕಾಸಿನ ತೊಡಕು ಇರುತ್ತದೆ. ಕಲಾವಿದರು, ಚಿತ್ರರಂಗದಲ್ಲಿ ಇರುವವರಿಗೆ ಹೊಸ ಅವಕಾಶಗಳು, ಸಾಧ್ಯತೆಗಳು ಗೋಚರವಾಗುತ್ತವೆ. ಧೈರ್ಯದಿಂದ ಮುನ್ನುಗ್ಗಿ ಕೆಲಸಗಳನ್ನು ಮಾಡಿ ಮುಗಿಸಲಿದ್ದೀರಿ. ತಂದೆ- ತಾಯಿಯ ನೆರವು ದೊರೆಯಲಿದೆ.
ನಿಮಗೇ ಅನುಮಾನ ಇರುವಂಥ ಕೆಲಸ- ಕಾರ್ಯಗಳನ್ನು ಮಾಡಿ ಮುಗಿಸುವ ಜವಾಬ್ದಾರಿ ಹೊತ್ತುಕೊಳ್ಳಬೇಡಿ. ಕಾನೂನಿನ ವಿಚಾರಗಳಲ್ಲಿ ಗಂಭೀರವಾಗಿ ನಡೆದುಕೊಳ್ಳಿ. ಶತ್ರುಗಳ ಕಾರಣಕ್ಕೆ ಕೆಲವು ತಪ್ಪುಗಳು ನಿಮ್ಮಿಂದ ಆಗಬಹುದು. ಆದ್ದರಿಂದ ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ, ನೆನಪಿಡಿ.
ಸಣ್ಣ ಪ್ರಯಾಣವಾದರೂ ಮಾಡಬೇಕಾದ ಸನ್ನಿವೇಶ ಸೃಷ್ಟಿಯಾಗುತ್ತದೆ. ಕ್ರೆಡಿಟ್ ಕಾರ್ಡ್ ಬಳಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಮುಂದೆ ಯಾವುದೋ ಹಣ ಬರಬಹುದು ಎಂಬ ಲೆಕ್ಕಾಚಾರದಲ್ಲಿ ಇಟ್ಟ ಹೆಜ್ಜೆಗಳು ತಪ್ಪಾಗಬಹುದು. ಇತರರ ಜವಾಬ್ದಾರಿಯನ್ನು ನೀವು ವಹಿಸಿಕೊಳ್ಳುವ ಮುನ್ನ ಪೂರ್ವಾಪರ ಆಲೋಚಿಸಿ.
ಏಕಾಗ್ರತೆಯನ್ನು ಸಾಧಿಸುವುದು ಬಲು ಕಷ್ಟವಾಗಲಿದೆ. ಪ್ರೀತಿ- ಪ್ರೇಮದಲ್ಲಿ ಇರುವವರ ಮಧ್ಯೆ ಭಿನ್ನಾಭಿಪ್ರಾಯ, ಅನುಮಾನಗಳು ಮೂಡಬಹುದು. ಮದುವೆ ಮಾತು- ಕತೆ ನಡೆಯುತ್ತಿದ್ದಲ್ಲಿ ನಾನಾ ಬಗೆಯ ಅಡೆತಡೆಗಳು ಏರ್ಪಡುವ ಸಾಧ್ಯತೆ ಇದೆ. ಊಟ- ನೀರಿನ ಸೇವನೆ ವಿಚಾರದಲ್ಲಿ ಜಾಗ್ರತೆ ವಹಿಸಿ.
ಸುಲಭಕ್ಕೆ ಸಿಗುವ ಅವಕಾಶವೊಂದನ್ನು ಹೇಗೆ ಬಳಸಿಕೊಳ್ಳಬಹುದು ಎಂಬ ಬಗ್ಗೆ ಸರಿಯಾದ ರೀತಿಯಲ್ಲಿ ಆಲೋಚನೆ ಮಾಡಿ. ಗುರು- ಹಿರಿಯರ ಸಲಹೆ ಅಗತ್ಯವಿದ್ದಲ್ಲಿ ತೆಗೆದುಕೊಳ್ಳಿ. ದೈಹಿಕ ವ್ಯಾಯಾಮ, ಧ್ಯಾನ, ಯೋಗದ ಕಲಿಕೆ ಕಡೆಗೆ ಆಸಕ್ತಿ ಇರುವವರು ಇವುಗಳನ್ನು ಆರಂಭಿಸುವುದಕ್ಕೆ ಸೂಕ್ತ ದಿನ ಇದು.
ಯಾರದೋ ಮಾತನ್ನು ನಂಬಿ, ಕೈಲಿರುವ ಅವಕಾಶವನ್ನು ಬಿಡಬೇಡಿ. ಒಂದು ಕೆಲಸ ಆಗಿಹೋದಂತೆಯೇ ಅನಿಸಿ, ಕೊನೆ ಕ್ಷಣದಲ್ಲಿ ಕೈ ತಪ್ಪಿ ಹೋಗುವ ಸಾಧ್ಯತೆ ಇದೆ. ನಿಮ್ಮ ಮೂಲ ಸ್ವಭಾವದಂತೆ ಎಲ್ಲಕ್ಕೂ ಸರಿ ಎನ್ನುತ್ತಾ ಹೋದರೆ ದೊಡ್ಡ ಮಟ್ಟದ ನಷ್ಟ ಹಾಗೂ ಅವಮಾನ ಎದುರಿಸಬೇಕಾಗುತ್ತದೆ, ಎಚ್ಚರ ಇರಲಿ.
ಉದ್ಯೋಗದಲ್ಲಿನ ಒತ್ತಡ ನಿಧಾನಕ್ಕೆ ಕಡಿಮೆ ಆಗುತ್ತಾ ಬರುತ್ತದೆ. ಆದರೆ ಸಹೋದ್ಯೋಗಿಗಳ ಬಗ್ಗೆ ಸಣ್ಣಗಿನ ಅಸಮಾಧಾನ ನಿಮ್ಮನ್ನು ಕಾಡಬಹುದು. ಎಲ್ಲವನ್ನೂ ನಾನೇ ಮಾಡ್ತೀನಿ ಎಂಬ ಧೋರಣೆ ಸರಿಯಲ್ಲ. ಸಂಗಾತಿ- ಮಕ್ಕಳ ಜತೆಗೆ ಉತ್ತಮ ಸಮಯ ಕಳೆಯುವ ಅವಕಾಶ ಇದೆ.
ಆರೋಗ್ಯದಲ್ಲಿ ಏರುಪೇರು ಕಾಡಬಹುದು. ತುರ್ತಾಗಿ ಹಣ ಹೊಂದಿಸಬೇಕಾದ ಅಗತ್ಯ ಕಂಡುಬರುತ್ತದೆ. ಆಪ್ತರ ಜತೆಗೆ ಬಹಳ ಮುಖ್ಯವಾದ ವಿಚಾರಗಳನ್ನು ಚರ್ಚಿಸಲಿದ್ದೀರಿ. ಆಸ್ತಿ ಮಾರಿ, ಹಣ ಹೊಂದಿಸಬೇಕು ಎಂಬ ಆಲೋಚನೆ ಮೂಡುತ್ತದೆ. ಮನೆಯ ಹಿರಿಯರ ಸಲಹೆ ಪಡೆದು, ಮುಂದಿನ ನಿರ್ಧಾರ ಕೈಗೊಳ್ಳಿ.
ನೀವು ನಿರೀಕ್ಷೆ ಮಾಡದ ರೀತಿಯಲ್ಲಿ ಉದ್ಯೋಗ ಅಥವಾ ವೃತ್ತಿ ಬದುಕಿನಲ್ಲಿ ಬದಲಾವಣೆ ಆಗಲಿದೆ. ಆದಾಯ ಮೂಲ ಜಾಸ್ತಿ ಆಗುವ ಮೂಲಕ ಲಾಭದ ಪ್ರಮಾಣ ಹೆಚ್ಚಾಗಲಿದೆ. ವೈದ್ಯರು, ಚಾರ್ಟರ್ಡ್ ಅಕೌಂಟೆಂಟ್ ಗಳು ಹಾಗೂ ವಾಯುಸೇನೆ ಅಧಿಕಾರಿಗಳಿಗೆ ಪದೋನ್ನತಿ ಯೋಗ ಇದೆ.
Tags:
ದಿನ ಭವಿಷ್ಯ