ಮನೆಯವರ ಜತೆ ಹೆಚ್ಚಿನ ಸಮಯ ಕಳೆಯಲಿದ್ದೀರಿ. ರುಚಿಕಟ್ಟಾದ ಊಟ- ತಿಂಡಿ ಮಾಡುವ ಯೋಗ ಇದೆ. ಸಂಭ್ರಮದ ವಾತಾವರಣ ಇರಲಿದೆ. ಭೂಮಿ ಖರೀದಿ ವಿಚಾರದಲ್ಲಿ ಪ್ರಗತಿ ಕಾಣಿಸುತ್ತದೆ. ಉಳಿತಾಯದ ಹಣವನ್ನು ತೆಗೆಯುವ ಬಗ್ಗೆ ಮನೆಯಲ್ಲಿ ಹಿರಿಯರ ಜತೆಗೆ ಚರ್ಚೆ ನಡೆಸುತ್ತೀರಿ.
ಪಿತ್ರಾರ್ಜಿತ ಆಸ್ತಿ ವಿಚಾರವಾಗಿ ಸೋದರ ಸಂಬಂಧಿಗಳ ಜತೆ ಮಾತುಕತೆ ನಡೆಸಲಿದ್ದೀರಿ. ಯಾರ ಬಳಿ ಸಹಾಯ ಕೇಳಿದ್ದೀರೋ ಅವರಿಂದ ಸೂಕ್ತ ಪ್ರತಿಕ್ರಿಯೆ ಸಿಗದೆ ಬೇಸರ ಆಗಬಹುದು. ವಸ್ತ್ರಾಭರಣ ಖರೀದಿಗಾಗಿ ಹಣ ಖರ್ಚು ಮಾಡುವ ಸಾಧ್ಯತೆ ಇದೆ. ಕ್ರೆಡಿಟ್ ಕಾರ್ಡ್ ಬಳಸುವ ಮುಂಚೆ ಆಲೋಚನೆ ಮಾಡಿ.
ಬಾಕಿ ಕೆಲಸಗಳನ್ನು ಮನೆಯಲ್ಲಿ ಪೂರ್ತಿ ಮಾಡುವುದಕ್ಕೆ ಬಹಳ ಸಮಯ ಹಿಡಿಯುತ್ತದೆ. ಸಣ್ಣ- ಪುಟ್ಟ ವಿಚಾರಗಳಿಗೆ ಸಂಗಾತಿ ಜತೆಗೆ ಭಿನ್ನಾಭಿಪ್ರಾಯ ಮೂಡುತ್ತದೆ. ನಿಮ್ಮದೇ ವೃತ್ತಿಯಲ್ಲಿ ಇರುವ ಅನುಭವಿಗಳಿಂದ ಅನುಭವದ ಪಾಠ ಕಲಿಯಲು ಅವಕಾಶ ದೊರೆಯುತ್ತದೆ. ಉಳಿತಾಯದ ಕಡೆಗೆ ಹೆಚ್ಚಿನ ಗಮನ ನೀಡುವಿರಿ.
ಕೊಟ್ಟ ಮಾತಿನಂತೆ ನಡೆದುಕೊಳ್ಳಲು ಬಹಳ ಶ್ರಮ ಪಡುತ್ತೀರಿ. ಆದ್ದರಿಂದ ಆಲಸ್ಯ ಮಾಡದೆ ನಿಮ್ಮ ಪಾಲಿನ ಜವಾಬ್ದಾರಿಗಳನ್ನು ಪೂರೈಸಿ. ಬ್ಯೂಟಿ ಪಾರ್ಲರ್ ಗೆ ತೆರಳಬೇಕು ಅಂದುಕೊಂಡಿರುವವರು ಅಲ್ಲಿ ಬಳಸುವ ಪ್ರಾಡಕ್ಟ್ ಗಳ ಬಗ್ಗೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಇಲ್ಲದಿದ್ದಲ್ಲಿ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಸ್ನೇಹಿತರ ಅಗತ್ಯಗಳಿಗೆ ಹಣಕಾಸಿನ ನೆರವು ನೀಡುತ್ತೀರಿ. ಒಂದು ವೇಳೆ ನಿಮ್ಮ ಬಳಿ ಹಣ ಇಲ್ಲದಿದ್ದರೂ ಬೇರೆಯವರಿಗೆ ನೀವು ಜಾಮೀನಾಗಿ ನಿಂತು, ಹಣ ಕೊಡಿಸುವ ಸಾಧ್ಯತೆ ಇದೆ. ಪಾರದರ್ಶಕವಾಗಿ ವರ್ತಿಸಿ. ಸಣ್ಣ- ಪುಟ್ಟ ಸುಳ್ಳನ್ನು ಸಹ ಹೇಳಬೇಡಿ. ಸಾರ್ವಜನಿಕ ಜೀವನದಲ್ಲಿ ಅವಮಾನ ಆಗುವ ಸಾಧ್ಯತೆ ಇದೆ.
ವಾಹನ ಚಾಲನೆ ಮಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಸಂಗಾತಿ- ಮಕ್ಕಳ ಜತೆಗೂಡಿ ಮನರಂಜನೆಗಾಗಿ ಹೆಚ್ಚಿನ ಹಣ ಖರ್ಚಾಗಲಿದೆ. ನೀವು ಊಹಿಸಿದಂತೆ ವ್ಯಾಪಾರ- ವ್ಯವಹಾರದಲ್ಲಿ ಬೆಳವಣಿಗೆ ಆಗಲಿದೆ. ಆನ್ ಲೈನ್ ವ್ಯವಹಾರಗಳನ್ನು ಮಾಡುವಾಗ ಸುರಕ್ಷಾ ಕ್ರಮಗಳನ್ನು ಅನುಸರಿಸಿ.
ಸಂಬಂಧಿಕರ ಜತೆಗೆ ಜಗಳ ಆಗುವ ಸಾಧ್ಯತೆ ಇದೆ. ಈ ಹಿಂದೆ ಆರೋಗ್ಯ ಸಮಸ್ಯೆಗಳು ಕಾಡುತ್ತಿದ್ದಲ್ಲಿ ಮರುಕಳಿಸುವ ಸಾಧ್ಯತೆ ಇದೆ. ತೀರಾ ಅಗತ್ಯ ಕಂಡುಬಂದಲ್ಲಿ ವೈದ್ಯರನ್ನು ಕಡ್ಡಾಯವಾಗಿ ಭೇಟಿ ಆಗಿ. ನೀವು ಸಹಾಯ ಮಾಡಿದ್ದಿರಿ ಅನ್ನೋ ಕಾರಣಕ್ಕೆ ನಿಮಗೆ ಕಷ್ಟ ಇರುವ ಸಂದರ್ಭದಲ್ಲಿ ಅವರಿಂದ ಸಹಾಯದ ನಿರೀಕ್ಷೆ ಬೇಡ.
ಚಿನ್ನದ ಮೇಲೆ ಅಥವಾ ಆಸ್ತಿ ಅಡಮಾನ ಮಾಡಿ, ಸಾಲ ಮಾಡಬೇಕು ಅಂತಿರುವವರು ಮನೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿ ಮುಂದುವರಿಯುವುದು ಉತ್ತಮ. ಸಹೋದ್ಯೋಗಿಗಳಿಗೆ ಕೆಲಸ- ಕಾರ್ಯಗಳಲ್ಲಿ ನಿಮ್ಮ ಮಾರ್ಗದರ್ಶನದ ಅಗತ್ಯ ಕಂಡುಬರುತ್ತದೆ. ಮುಕ್ತ ಮನಸ್ಸಿನಿಂದ ಬದಲಾವಣೆಯನ್ನು ಸ್ವೀಕರಿಸಿ.
ಜಂಕ್ ಫುಡ್ ನಿಂದ ಕಡ್ಡಾಯವಾಗಿ ದೂರವಿರಿ. ಮಕ್ಕಳ ಶಿಕ್ಷಣದ ಬಗ್ಗೆ ಚಿಂತೆ ಕಾಡಬಹುದು. ಮದುವೆ ವಯಸ್ಸಿನ ಮಕ್ಕಳಿದ್ದಲ್ಲಿ ಹಲವು ಕಡೆಯಿಂದ ಪ್ರಸ್ತಾವ ಬರಬಹುದು. ಅಂತರಂಗದ ರಹಸ್ಯಗಳನ್ನು ಯಾರ ಜತೆಗೂ ಹಂಚಿಕೊಳ್ಳಬೇಡಿ. ಮನೆಯ ದುರಸ್ತಿ ಅಥವಾ ಪೇಂಟಿಂಗ್ ಮಾಡಿಸುವ ಆಲೋಚನೆ ಬರಬಹುದು.
ಉದ್ಯೋಗದ ಕುಸಿತು ಇಷ್ಟು ಸಮಯ ಕಾಡುತ್ತಿದ್ದ ಒತ್ತಡ ಕಡಿಮೆ ಆಗುವ ಸಾಧ್ಯತೆ ಇದೆ. ನಾನಾ- ನೀನಾ ಎಂದು ಯಾರ ಜತೆಗೂ ಪೈಪೋಟಿಗೆ ಇಳಿಯಬೇಡಿ. ನಿಮ್ಮ ಆಲೋಚನೆ ಹಾಗೂ ಸಮಯಪ್ರಜ್ಞೆಯಿಂದ ಇತರರಿಗೆ ಅನುಕೂಲ ಆಗುವ ಸಾಧ್ಯತೆ ಇದೆ. ವಾಹನ ಮಾರಾಟದ ಬಗ್ಗೆ ಆಲೋಚನೆ ಮಾಡುತ್ತೀರಿ.
ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿ ಇರುವವರು ಪೋಸ್ಟ್- ಕಮೆಂಟ್ ಗಳನ್ನು ಮಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಕಾನೂನು ತೊಡಕುಗಳಿಗೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಯಾವುದೇ ಕೆಲಸ ಮಾಡುವ ಮುನ್ನ ದಾಖಲೆ- ಪತ್ರಗಳನ್ನು ಸೂಕ್ತವಾಗಿ ಗಮನಿಸಿ.
ರಾಜಕೀಯ, ಸಮಾಜ ಸೇವೆ ಕ್ಷೇತ್ರದಲ್ಲಿ ಇರುವವರಿಗೆ ಬಿಡುವಿಲ್ಲದ ದಿನವಾಗಿರುತ್ತದೆ. ನೀವು ಬಹಳ ಸಮಯದಿಂದ ನಿರೀಕ್ಷೆ ಮಾಡುತ್ತಿದ್ದ ಹುದ್ದೆ ಅಥವಾ ಜವಾಬ್ದಾರಿಯೊಂದು ಒದಗಿಬರಬಹುದು. ಆದರೆ ಈ ದಿನ ಕೆಲಸದ ಒತ್ತಡದಿಂದ ದೇಹಾಲಸ್ಯ ಆಗಬಹುದು. ಎಚ್ಚರಿಕೆ ಇರಲಿ.
Tags:
ದಿನ ಭವಿಷ್ಯ