ಮಕ್ಕಳ ಏಳ್ಗೆಗಾಗಿ ಮತ್ತೊಬ್ಬರ ಬಳಿ ನೀವು ಸಹಾಯ ಕೇಳಬೇಕಾಗುತ್ತದೆ. ಲೆಕ್ಕಾಚಾರವೇ ಹಾಕದ ರೀತಿಯಲ್ಲಿ ದಿಢೀರ್ ಖರ್ಚುಗಳು ಎದುರಾಗುತ್ತವೆ. ಆಯುರ್ವೇದ ವೈದ್ಯರಿಗೆ ಗೌರವ, ಮನ್ನಣೆ ದೊರೆಯುವ ಸಾಧ್ಯತೆ ಇದೆ. ಬಾಕಿ ಬರಬೇಕಾಗಿದ್ದ ಹಣಕ್ಕೆ ವ್ಯವಸ್ಥೆ ಆಗಬಹುದು. ಆದರೆ ಅದಕ್ಕೆ ನಿಮ್ಮ ಪ್ರಯತ್ನ ಅತ್ಯಗತ್ಯವಾಗಿ ಬೇಕು.
ಡೇರಿ ವ್ಯಾಪಾರ ಮಾಡುವವರಿಗೆ ಹಣದ ಹರಿವಿನಲ್ಲಿ ಹೆಚ್ಚಳ ಆಗುವ ಸಾಧ್ಯತೆ ಇದೆ. ಕೆಲವು ಸಮಸ್ಯೆಗಳು ತಾವಾಗಿಯೇ ಹುಡುಕಿಕೊಂಡು ಬರುತ್ತವೆ. ನಿಮ್ಮ ಬುದ್ಧಿವಂತಿಕೆಯಿಂದ ಹಲವು ಕಷ್ಟಗಳನ್ನು ದಾಟುತ್ತೀರಿ. ನಿರ್ಧಾರ ಕೈಗೊಂಡಂತೆ ಯಾವುದೇ ಕೆಲಸವನ್ನೂ ಪೂರ್ತಿಯಾಗಿ ಮಾಡಲು ಸಾಧ್ಯವಾಗಲ್ಲ.
ಸೋಷಿಯಲ್ ಮೀಡಿಯಾದಲ್ಲಿ ನಿಮ್ಮ ತೇಜೋಹಾನಿಗೆ ಪ್ರಯತ್ನಿಸಲಾಗುತ್ತದೆ. ಆದ್ದರಿಂದ ಯಾವುದೇ ಕಾಮೆಂಟ್, ಪೋಸ್ಟ್ ಹಾಕುವ ಮುನ್ನ ಚೆನ್ನಾಗಿ ಆಲೋಚನೆ ಮಾಡಿ. ಸ್ಥೂಲಕಾಯದ ಸಮಸ್ಯೆ ಇರುವವರು ಆಹಾರ- ಪಥ್ಯದ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು. ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡಲ್ಲಿ ಕೂಡಲೇ ವೈದ್ಯರನ್ನು ಭೇಟಿಯಾಗಿ.
ಹಳೇ ಸ್ನೇಹಿತರಿಂದ ನಿಮಗೆ ಅಮೂಲ್ಯವಾದ ಮಾಹಿತಿ ದೊರೆಯುವ ಸಾಧ್ಯತೆ ಇದೆ. ಕಾರಣಾಂತರಗಳಿಂದ ದೂರವಾಗಿದ್ದವರೂ ಹತ್ತಿರ ಆಗಲಿದ್ದಾರೆ. ಹಿತಶತ್ರುಗಳಿಂದ ಎಚ್ಚರವಾಗಿರಬೇಕು. ಚಾಡಿ ಮಾತನ್ನು ನಂಬಬೇಡಿ. ಹೊಸ ವಸ್ತ್ರ ಖರೀದಿಗಾಗಿ ಹೆಚ್ಚಿನ ಖರ್ಚು ಮಾಡುವ ಯೋಗ ಇದೆ.
ಮನೆಯಲ್ಲಿ ಔತಣ ಕೂಟ ಆಯೋಜಿಸುವ ಸಾಧ್ಯತೆ ಇದೆ. ಕುಟುಂಬದವರ ಜತೆ ಸಂತೋಷವಾಗಿ ಕಾಲ ಕಳೆಯಲಿದ್ದೀರಿ. ಮನರಂಜನೆಗಾಗಿ ಹೆಚ್ಚಿನ ಖರ್ಚು ಮಾಡಲಿದ್ದೀರಿ. ರುಚಿಕಟ್ಟಾದ ಊಟ- ತಿಂಡಿ ಸವಿಯುವ ಯೋಗ ಇದೆ. ಆದರೆ ವೇಳಾಪಟ್ಟಿಯು ಅಂದುಕೊಂಡಂತೆ ಆಗದೆ ಸ್ವಲ್ಪ ಮಟ್ಟಿಗೆ ಏರುಪೇರಾಗುತ್ತದೆ.
ಸಿಗರೇಟ್- ಮದ್ಯ ಸೇವನೆ ಅಭ್ಯಾಸ ಇರುವವರಿಗೆ ಕೈಯಿಂದ ಹಣ ಕಳೆದುಕೊಳ್ಳುವ ಯೋಗ ಇದೆ. ಯಾವುದೇ ಕೆಲಸದಲ್ಲಿ ಕಾನೂನು ಪಾಲನೆಗೆ ಗಮನ ನೀಡಿ. ಇಲ್ಲದಿದ್ದಲ್ಲಿ ಅದಕ್ಕೆ ತಕ್ಕ ದಂಡ ತೆರಬೇಕಾಗುತ್ತದೆ. ಮನೆ- ಕಚೇರಿ ಬದಲಾವಣೆ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಆದರೆ ಸೂಕ್ತ ವ್ಯವಸ್ಥೆ ಕಷ್ಟವಾಗಲಿದೆ.
ಸಣ್ಣ- ಪುಟ್ಟ ವಿಚಾರಗಳು ಎಂದು ಯಾವುದನ್ನು ನಿರ್ಲಕ್ಷಿಸಿರುತ್ತೀರೋ ಅಂಥವಕ್ಕೆ ವಿಪರೀತ ಪ್ರಾಮುಖ್ಯ ಬರುತ್ತದೆ. ಸಂಗಾತಿ ಜತೆಗೆ ಮನಸ್ತಾಪ ಆಗುವ ಸಾಧ್ಯತೆ ಇದೆ. ದಾಕ್ಷಿಣ್ಯಕ್ಕೆ ಸಿಲುಕಿಕೊಂಡು ಯಾರಿಗಾದರೂ ಹಣಕಾಸಿನ ವಿಚಾರಕ್ಕೆ ಜಾಮೀನಿಗೆ ನಿಂತರೆ ಮುಂದೆ ಸಮಸ್ಯೆ ಆಗಬಹುದು, ಎಚ್ಚರ.
ಉದ್ಯೋಗ ವಿಚಾರದ ಬಗ್ಗೆ ನಿಮಗಿದ್ದ ಕನಸುಗಳನ್ನು ಈಡೇರಿಸಿಕೊಳ್ಳುವತ್ತ ಹೆಜ್ಜೆ ಹಾಕಲಿದ್ದೀರಿ. ನಿಮ್ಮ ಕ್ರಿಯೇಟಿವಿಟಿಗೆ ಗೌರವ, ಮನ್ನಣೆ ದೊರೆಯಲಿದೆ. ಬಹಳ ಕಾಲದಿಂದ ಮನೆಗೆ ತರಬೇಕು ಅಂದುಕೊಳ್ಳುತ್ತಿದ್ದ ಗೃಹೋಪಯೋಗಿ ವಸ್ತುಗಳನ್ನು ಖರೀದಿ ಮಾಡುವ ಸಾಧ್ಯತೆ ಇದೆ.
ನಿಮ್ಮನ್ನು ವಿಮರ್ಶಿಸುವವರ ಬಗ್ಗೆ ಸಿಟ್ಟು ಮಾಡಿಕೊಂಡರೆ ಪ್ರಯೋಜನ ಇಲ್ಲ. ಸತ್ಯಾಸತ್ಯತೆಯನ್ನು ಅರಿತುಕೊಂಡು, ಬದಲಾವಣೆ ತಂದುಕೊಳ್ಳಲು ಪ್ರಯತ್ನಿಸಿ. ಅಜೀರ್ಣ, ಗ್ಯಾಸ್ಟ್ರಿಕ್ ನಂಥ ಸಮಸ್ಯೆಗಳು ಕಾಡುತ್ತಿದ್ದಲ್ಲಿ ಕೂಡಲೇ ವೈದ್ಯರಲ್ಲಿ ಪರೀಕ್ಷೆ ಮಾಡಿಸಿಕೊಳ್ಳಿ. ವಿಪರೀತಕ್ಕೆ ಹೋಗುವುದಕ್ಕೆ ಅವಕಾಶ ನೀಡಬೇಡಿ.
ಸಂಗಾತಿ- ಮಕ್ಕಳ ಜತೆಗೆ ಸಂತೋಷವಾಗಿ ಕಾಲ ಕಳೆಯುವಿರಿ. ದೇವತಾರಾಧನೆ ಕಡೆಗೆ ಮನಸ್ಸು ವಾಲುತ್ತದೆ. ಮಕ್ಕಳ ಭವಿಷ್ಯದ ಸಲುವಾಗಿ ಹಣ ಹೂಡಲು ಚಿಂತನೆ ನಡೆಸುತ್ತೀರಿ. ಸ್ನೇಹಿತರು- ಬಂಧುಗಳು ಭೇಟಿ ಆಗುವ ಸಾಧ್ಯತೆ ಇದೆ. ಖರ್ಚಿನ ಪ್ರಮಾಣದಲ್ಲಿ ಹೆಚ್ಚಳ ಆಗಲಿದೆ.
ಸ್ವಂತ ಕೆಲಸ ಮಾಡಿಕೊಳ್ಳಲು ಸಮಯ ಸಿಗದಷ್ಟು ಬಿಡುವಿಲ್ಲದ ದಿನವಾಗಿರುತ್ತದೆ. ನಿದ್ರೆ ಇಲ್ಲದೆ ತಲೆನೋವು ಮತ್ತಿತರ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇತರರ ವೈಯಕ್ತಿಕ ವಿಚಾರಗಳಲ್ಲಿ ತಲೆ ಹಾಕಬೇಡಿ. ಇದರಿಂದ ಅವಮಾನದ ಪಾಲಾಗುತ್ತೀರಿ. ಸಾಧ್ಯವಾದಷ್ಟೂ ಮೌನವಾಗಿರಲು ಪ್ರಯತ್ನಿಸಿ.
ಕಾನೂನು, ಕೋರ್ಟ್, ಕಟ್ಟಳೆ ಇಂಥ ವಿಚಾರಗಳ ಸುತ್ತಲೇ ದಿನ ಕಳೆಯುವಂತೆ ಆಗುತ್ತದೆ. ಗುರು- ಹಿರಿಯರ ಆಶೀರ್ವಾದದಿಂದ ಹಲವು ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಸಂತಾನ ಅಪೇಕ್ಷಿತ ದಂಪತಿಗೆ ಶುಭ ಸುದ್ದಿ ಕೇಳುವಂಥ ಯೋಗ ಇದೆ.
Tags:
ದಿನ ಭವಿಷ್ಯ