ಭಾರತದ ಜೊತೆ ಶಾಂತಿಯುತ ಸಹಬಾಳ್ವೆಗೆ ನಾವು ಸಿದ್ಧ: ತಾಲಿಬಾನ್ ಈ ನಡೆಯಿಂದ ಪಾಪೀ ಪಾಕಿಸ್ತಾನಕ್ಕೆ ದಿಗ್ಬ್ರಮೆ

ಭಾರತದ ಜೊತೆ ಶಾಂತಿಯುತ ಸಹಬಾಳ್ವೆಗೆ ನಾವು ಸಿದ್ಧ: ತಾಲಿಬಾನ್ ಈ ನಡೆಯಿಂದ ಪಾಪೀ ಪಾಕಿಸ್ತಾನಕ್ಕೆ ದಿಗ್ಬ್ರಮೆ



ಪಾಕಿಸ್ತಾನವು ಈಗಾಗಲೇ ಆಕ್ರಮಿಸಿಕೊಂಡಿರುವ ಜಮ್ಮು ಮತ್ತು ಕಾಶ್ಮೀರದ ಕೆಲವೊಂದು ಪ್ರದೇಶಗಳನ್ನು ಖಾಲಿ ಮಾಡುವಂತೆ ಭಾರತವು ಪಾಕಿಸ್ತಾನಕ್ಕೆ ಆಗ್ರಹಿಸಿತ್ತು. ಗಿಲ್ಗಿಟ್-ಬಾಲ್ಟಿಸ್ತಾನ್ ಕುರಿತು ಪಾಕಿಸ್ತಾನದ ಸುಪ್ರೀಂಕೋರ್ಟ್ ನೀಡಿದ ಆದೇಶವನ್ನು ವಿರೋಧಿಸಿ ಭಾರತೀಯ ವಿದೇಶಾಂಗ ಸಚಿವಾಲಯವು ಪಾಕಿಸ್ತಾನಕ್ಕೆ ಪಿಓಕೆ ಖಾಲಿ ಮಾಡುವಂತೆ ಸೂಚಿಸಿತ್ತು.


ಇತ್ತೀಚಿನ ಮಾಹಿತಿಯ ಪ್ರಕಾರ ಪಾಕಿಸ್ತಾನದ ಸುಪ್ರೀಂ ಕೋರ್ಟ್ ನೀಡಿದ ಆದೇಶದ ಪ್ರಕಾರ ಈ ಪ್ರದೇಶಗಳಲ್ಲಿ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಲು ಅನುಗುಣವಾಗುವಂತೆ 2018ರ ಗಿಲ್ಗಿಟ್-ಬಾಲ್ಟಿಸ್ತಾನ್ ಆದೇಶಕ್ಕೆ ತಿದ್ದುಪಡಿಯನ್ನು ಮಾಡಲು ಅನುಮತಿಯನ್ನು ನೀಡಿತು.


ಭಾರತೀಯ ವಿದೇಶಾಂಗ ಸಚಿವಾಲಯ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಪಾಕಿಸ್ತಾನ ಸುಪ್ರೀಂಕೋರ್ಟ್ನ ಈ ಆದೇಶವನ್ನು ವಿರೋಧಿಸಿ ಪಿಓಕೆ, ಗಿಲ್ಗಿಟ್-ಬಾಲ್ಟಿಸ್ತಾನ್ ತಕ್ಷಣವೇ ಕಾಲಿ ಮಾಡುವಂತೆ ಹೇಳಿತ್ತು. ಇಷ್ಟೇ ಅಲ್ಲದೆ ಭಾರತದ ಹವಾಮಾನ ಇಲಾಖೆಯು ಮೊನ್ನೆಮೊನ್ನೆಯಷ್ಟೇ ಗಿಲ್ಗಿಟ್-ಬಾಲ್ಟಿಸ್ತಾನ್ ಮತ್ತು ಮುಜಫರಾಬಾದ್ ನ ಹವಾಮಾನವನ್ನು ತನ್ನ ಹವಾಮಾನ ಪ್ರಕಟಣೆಯಲ್ಲಿ ತಿಳಿಸೋಕೆ ಶುರುಮಾಡಿತ್ತು. ಇದರಿಂದ ಕಂಗಾಲಾದ ಪಾಪೀ ಪಾಕಿಸ್ತಾನಕ್ಕೆ ಇನ್ನೊಂದು ಸಂಕಷ್ಟ ಎದುರಾಗಿದೆ.

ಭಾರತದೊಂದಿಗೆ ಸಕಾರಾತ್ಮಕ ಸಂಭಂದವನ್ನು ಬೆಳೆಸುವುದಕ್ಕೆ ನಾವು ಉತ್ಸುಕರಾಗಿದ್ದೇವೆ ಮತ್ತು ಭಾರತದ ಈ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ ಎಂದು ತಾಲಿಬಾನ್ ಸಂಘಟನೆ ಪ್ರಕಟಣೆಯನ್ನು ಹೊರಡಿಸಿದೆ. ಅಪಘಾನಿಸ್ತಾನದಲ್ಲಿ ಶಾಂತಿಯುತ ಸರ್ಕಾರವನ್ನು ಸ್ಥಾಪಿಸಲು ಭಾರತದ ಸಹಕಾರ ಅಗತ್ಯವಿದೆ. ಅದಕ್ಕಾಗಿ ನಾವು ಭಾರತದ ಜೊತೆ ಶಾಂತಿಯುತ ಸ್ನೇಹ ಸಂಬಂಧವನ್ನು ಬೆಳೆಸಲು ತಯಾರಾಗಿದ್ದೇವೆ ಎಂದು ತಾಲಿಬಾನ್ ಹೇಳಿಕೊಂಡಿದೆ.


ತನ್ನ ಉಗ್ರ ಕೃತ್ಯಗಳಿಂದ ಪದೇಪದೇ ಭಾರತ ಮತ್ತು ಪಾಕಿಸ್ತಾನದಲ್ಲಿ ಶಾಂತಿಯನ್ನು ಕದಡಲು ಹವಣಿಸುತ್ತಿದ್ದ ತಾಲಿಬಾನ್ ಈಗ ತನ್ನ ನಿಲುವನ್ನು ಬದಲಿಸಿ ರುವುದನ್ನು ನೋಡಿದ ಪಾಕಿಸ್ತಾನಕ್ಕೆ ದಿಗ್ಭ್ರಮೆಯಾಗಿದೆ. ಜಗತ್ತಿನ ಎಲ್ಲಾ ಶಕ್ತಿಗಳು ಜೊತೆ ಹೋಗುತ್ತಿರುವುದನ್ನು ನೋಡಿ ಮತ್ಸರವು ಕೂಡ ಉಂಟಾಗಿದೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement