ವೈದ್ಯ ವೃತ್ತಿಯಲ್ಲಿ ಇರುವವರಿಗೆ ಸಮಾಜದಲ್ಲಿ ಮನ್ನಣೆ ದೊರೆಯಲಿದೆ. ವಾಹನ ಖರೀದಿ ಮಾಡುವ ಆಲೋಚನೆ ಮೂಡಲಿದೆ. ದೂರದ ಊರುಗಳಲ್ಲಿ ಇರುವ ಬಂಧುಗಳು ಸಹಾಯಕ್ಕಾಗಿ ಕೇಳಬಹುದು. ನೀವಾಗಿ ಉತ್ಸಾಹದಿಂದ ವಹಿಸಿಕೊಂಡ ಕೆಲಸ ಅಂದುಕೊಂಡ ವೇಗದಲ್ಲಿ ಮುಂದಕ್ಕೆ ಸಾಗದೆ ಚಿಂತೆಗೆ ಗುರಿಯಾಗುತ್ತೀರಿ.
ಅಕೌಂಟ್ಸ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುವವರಿಗೆ ಮರೆವು ಕಾಡಲಿದೆ. ಇದರಿಂದ ಇಷ್ಟು ಸಮಯ ನೀವು ಉಳಿಸಿಕೊಂಡು ಬಂದಿದ್ದ ವರ್ಚಸ್ಸು, ಹೆಸರಿಗೆ ಧಕ್ಕೆ ಆಗಬಹುದು. ನೀವಾಗಿಯೇ ಕೇಳದ ಹೊರತು ನಿಮ್ಮ ಪಾಲಿಗೆ ಸಿಗಬೇಕಾದದ್ದು ಏನೂ ಸಿಗುವುದಿಲ್ಲ. ಆದ್ದರಿಂದ ಮುಕ್ತವಾಗಿ ಮಾತನಾಡಿ.
ಪಾರದರ್ಶಕವಾಗಿ ಇರಲು ಪ್ರಯತ್ನಿಸಿ. ಸಂಗಾತಿ- ಮಕ್ಕಳ ಜತೆಗೆ ಸಂತೋಷವಾಗಿ ಇರುವುದಕ್ಕೆ ಅವಕಾಶ ದೊರೆಯಲಿದೆ. ನಾಲಗೆ ಮೇಲೆ ಹಿಡಿತ ಇರಲಿ. ರಹಸ್ಯವಾಗಿರಲಿ ಎಂದು ಸ್ನೇಹಿತರು- ಸಂಬಂಧಿಗಳು ಹಂಚಿಕೊಂಡ ಸಂಗತಿಗಳನ್ನು ಬೇರೆ ಯಾರ ಜತೆಗೂ ಹಂಚಿಕೊಳ್ಳಬೇಡಿ. ಇದರಿಂದ ಅವಮಾನದ ಪಾಲಾಗುತ್ತೀರಿ.
ಕೂಡಿಟ್ಟಿದ್ದ ಉಳಿತಾಯದ ಹಣವನ್ನು ಅಗತ್ಯ ಕೆಲಸಗಳಿಗಾಗಿ ತೆಗೆಯಬೇಕಾದ ಸನ್ನಿವೇಶ ಸೃಷ್ಟಿ ಆಗಬಹುದು. ಯಾರದೋ ಮೇಲಿನ ಸಿಟ್ಟನ್ನು ಮತ್ಯಾರ ಮೇಲೋ ತೋರಿಸಬೇಡಿ. ಇದರಿಂದ ಸಂಬಂಧ ಹಾಳಾಗಬಹುದು, ಎಚ್ಚರ. ಶೀತ, ಕಫ, ಕೆಮ್ಮು ಈ ರೀತಿಯ ಅನಾರೋಗ್ಯ ಸಮಸ್ಯೆಗಳು ಕಾಡಬಹುದು.
ಕೆಲಸ- ಕಾರ್ಯದ ಒತ್ತಡ ವಿಪರೀತ ಹೆಚ್ಚಾಗಲಿದೆ. ನಿಮ್ಮ ಮಾತಿನ ಪ್ರಭಾವದಿಂದ ಇತರರಿಗೆ ಅನುಕೂಲ ಆಗಲಿದೆ. ದೇವತಾ ಕಾರ್ಯಗಳನ್ನು ನಡೆಸುವ ಸಲುವಾಗಿ ಸಿದ್ಧತಾ ಕಾರ್ಯಗಳನ್ನು ನಡೆಸಲಿದ್ದೀರಿ. ದಾಕ್ಷಿಣ್ಯಕ್ಕೆ ಸಿಲುಕಿಕೊಂಡು ನಿಮ್ಮ ತಂದೆ ಕಡೆಯ ಸಂಬಂಧಿಕರಿಗೆ ಹಣ ನೀಡಬೇಕಾದ ಸನ್ನಿವೇಶ ಸೃಷ್ಟಿ ಆಗಬಹುದು.
ಯಾರಿಂದಲೂ ಮಾಡಲು ಸಾಧ್ಯವಿಲ್ಲದ ಕೆಲಸಗಳನ್ನು ಚಾಕಚಕ್ಯತೆಯಿಂದ ಮಾಡಿ ಮುಗಿಸಲಿದ್ದೀರಿ. ವ್ಯಾಪಾರ- ವ್ಯವಹಾರ ಮಾಡುತ್ತಿರುವವರಿಗೆ ದೂರದ ಊರುಗಳಿಂದ ಶುಭ ವಾರ್ತೆ ಕೇಳಿಬರಲಿದೆ. ನೀವು ಈ ಹಿಂದೆ ಪಟ್ಟ ಶ್ರಮಕ್ಕೆ ಈಗ ಪ್ರತಿಫಲ ದೊರೆಯಲಿದೆ. ಅನುಮಾನದ ಸ್ವಭಾವ ಕಡಿಮೆ ಮಾಡಿಕೊಳ್ಳಿ.
ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಲಿವೆ. ವಾಹನ ಚಾಲನೆ ಮಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಸಣ್ಣ- ಪುಟ್ಟ ವ್ಯಾಪಾರ, ವ್ಯವಹಾರ ಮಾಡಿಕೊಂಡಿರುವವರಿಗೆ ಸಾಲಗಾರರ ಒತ್ತಡ ಹೆಚ್ಚಾಗಲಿದೆ. ಅನಿರೀಕ್ಷಿತ ಖರ್ಚು ಕಾಣಿಸಿಕೊಂಡು, ಅದಕ್ಕಾಗಿ ಮತ್ತೆ ಸಾಲ ಮಾಡಬೇಕಾಗುತ್ತದೆ.
ಇಷ್ಟು ಸಮಯ ಯಾವ ವ್ಯಕ್ತಿ, ಮಾಹಿತಿಗಾಗಿ ಹುಡುಕಾಡುತ್ತಿದ್ದರೋ ಆ ಬಗ್ಗೆ ಸುಳಿವು ಸಿಗಲಿದೆ. ಬಹಳ ಕಷ್ಟವಾದ ಕೆಲಸಗಳನ್ನೂ ಸುಲಭವಾಗಿ ಮಾಡಿ ಮುಗಿಸುವ ನಿಮ್ಮ ಸಾಮರ್ಥ್ಯವನ್ನು ಮೇಲಧಿಕಾರಿಗಳು ಮೆಚ್ಚಿಕೊಳ್ಳಲಿದ್ದಾರೆ. ಮನೆಗೆ ದುಬಾರಿ ವಸ್ತುಗಳನ್ನು ತರುವ ಯೋಗ ಇದೆ.
ತಮಾಷೆಗಾದರೂ ಇತರರ ಬಗ್ಗೆ ಏನೂ ಮಾತನಾಡಬೇಡಿ. ಇದರಿಂದ ದೊಡ್ಡ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ನಿಮ್ಮ ಅಂತರಂಗದ ವಿಚಾರಗಳನ್ನು, ಪ್ರೀತಿ- ಪ್ರೇಮ ಇತ್ಯಾದಿ ಸಂಬಂಧಗಳ ಬಗ್ಗೆ ಯಾರಿಗೂ ತಿಳಿಸಬೇಡಿ. ಇದರಿಂದ ನಿಮ್ಮ ವರ್ಚಸ್ಸಿಗೆ ಧಕ್ಕೆ ಆಗುವ ಸಾಧ್ಯತೆ ಇದೆ.
ಸರ್ಕಾರಿ ಕೆಲಸದಲ್ಲಿ ಇರುವವರಿಗೆ ಉತ್ತಮ ಅವಕಾಗಳು ದೊರೆಯುವ ಸೂಚನೆ ದೊರೆಯಲಿದೆ. ರಾಜಕಾರಣಿಗಳಿಗೆ ಹಿತಶತ್ರುಗಳ ಕಾಟ ಇದೆ. ಮಹಿಳೆಯರ ವಿಚಾರದಲ್ಲಿ ಅಂತರ ಕಾಪಾಡಿಕೊಳ್ಳಿ. ನಿಮ್ಮ ನಡವಳಿಕೆ ಇತರರಿಗೆ ಅನುಮಾನಕ್ಕೆ ಎಡೆ ಮಾಡಿಕೊಡಬಹುದು. ನೀವಾಗಿಯೇ ಅದಕ್ಕೆ ಅವಕಾಶ ನೀಡಬೇಡಿ.
ಲೇವಾದೇವಿ ವ್ಯವಹಾರ ಮಾಡುವವರು ಹಣ ವಾಪಸ್ ವಸೂಲಿ ಹೇಗೆ ಮಾಡಬೇಕು ಎಂಬ ಬಗ್ಗೆ ಯೋಜನೆ ರೂಪಿಸಿ. ಸ್ನೇಹಿತರು- ಸಂಬಂಧಿಕರು ಒತ್ತಾಯ ಮಾಡಿದರು ಎಂಬ ಕಾರಣಕ್ಕೆ ಅಳತೆ ಮೀರಿ ಊಟ- ತಿಂಡಿ ಮಾಡಿದರೆ ಆರೋಗ್ಯಕ್ಕೆ ಸಮಸ್ಯೆ ಆಗುತ್ತದೆ. ಕ್ರಿಯೇಟಿವ್ ಕ್ಷೇತ್ರದಲ್ಲಿ ಇರುವವರಿಗೆ ಏಳ್ಗೆ ಇದೆ.
ಪೊಲೀಸ್, ರಕ್ಷಣಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಒಂದಿಲ್ಲ ಒಂದು ಸಮಸ್ಯೆ ಕಾಡಬಹುದು. ಯಾರಲ್ಲೂ ಹೇಳಿಕೊಳ್ಳಲಾಗದ ಮಾನಸಿಕ ತುಮುಲ ಕಾಡಲಿದೆ. ಹಣದ ಹರಿವಿಗೆ ತಡೆಯಾಗಲಿದ್ದು, ದಿನದ ಮಟ್ಟಿಗೆ ನಾನಾ ಬಗೆಯ ಚಿಂತೆಗೆ ಕಾರಣವಾಗಲಿದೆ. ಆಸ್ತಿ - ಭೂಮಿ ವ್ಯವಹಾರಗಳಲ್ಲಿ ಪ್ರಗತಿ ಇದೆ.
Tags:
ದಿನ ಭವಿಷ್ಯ