Ticker

6/recent/ticker-posts
Responsive Advertisement

Uttarakannda: ಮುಂಡಗೋಡ–ಹಾನಗಲ್ ರಸ್ತೆಯಲ್ಲಿ ಭಾರಿ ಗಾಳಿಗೆ ಬೃಹತ್ ಮಾವಿನ ಮರ ಉರುಳಿ; ಒಂದು ಗಂಟೆ ವಾಹನ ಸಂಚಾರ ಸ್ಥಗಿತ

ಮುಂಡಗೋಡ: ಕಳೆದ ಕೆಲವು ದಿನಗಳಿಂದ ತೀವ್ರ ಬೇಸಿಗೆಯ ಬಿಸಿಲಿನಿಂದ ಬಳಲುತ್ತಿದ್ದ ಮುಂಡಗೋಡ ತಾಲ್ಲೂಕಿನ ಜನತೆಗೆ ಭಾನುವಾರ ಸಂಜೆ ಸುರಿದ ಮಳೆ ಸ್ವಲ್ಪ ಮಟ್ಟಿಗೆ ತಂಪು ತಂದಿತು. ಆದರೆ ಮಳೆಯೊಂದಿಗೆ ಬೀಸಿದ ಭಾರಿ ಗಾಳಿಯ ಪರಿಣಾಮವಾಗಿ ಕೆಲವು ಕಡೆ ಅಡಚಣೆಗಳೂ ಉಂಟಾದವು.

ಮುಂಡಗೋಡ ತಾಲ್ಲೂಕಿನ ಪಾಳಾ ಗ್ರಾಮದಿಂದ ಹಾನಗಲ್ ಕಡೆಗೆ ಸಾಗುವ ಮುಖ್ಯ ರಸ್ತೆಯಲ್ಲಿ ದೊಡ್ಡ ಮಾವಿನ ಮರೊಂದು ಗಾಳಿಯ ಆರ್ಭಟಕ್ಕೆ ಉರುಳಿ ರಸ್ತೆಯ ಮಧ್ಯಭಾಗಕ್ಕೆ ಬಿದ್ದಿದೆ. ಇದರಿಂದಾಗಿ ಈ ಮಾರ್ಗದಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತು.

ಮರ ರಸ್ತೆಮಧ್ಯೆ ಬಿದ್ದಿದ್ದರಿಂದ ಎರಡು ಕಡೆಗಳಿಂದ ಬಂದ ವಾಹನಗಳು ಸಾಲುಗಟ್ಟಿ ನಿಂತು ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸಿದರು. ಇದೇ ವೇಳೆ ಗಾಳಿಗೆ ಮುರಿದು ಬಿದ್ದಿದ್ದ ಮಾವಿನ ಮರದ ಕೊಂಬೆಗಳನ್ನು ಕಟ್ಟಿಗೆಗಾಗಿ ಕೊಂಡೊಯ್ಯಲು ಕೆಲ ಸ್ಥಳೀಯರು ಮುಂದಾದ ದೃಶ್ಯವೂ ಕಂಡುಬಂತು.

ಘಟನೆಯ ಮಾಹಿತಿ ತಿಳಿದ ತಕ್ಷಣ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಯಂತ್ರಗಳ ಸಹಾಯದಿಂದ ರಸ್ತೆಗೆ ಅಡ್ಡವಾಗಿ ಬಿದ್ದಿದ್ದ ಬೃಹತ್ ಮರವನ್ನು ಕತ್ತರಿಸಿ ತೆರವುಗೊಳಿಸಿದರು. ಬಳಿಕ ವಾಹನ ಸಂಚಾರ ಮತ್ತೆ ಸುಗಮವಾಗಿ ಆರಂಭವಾಯಿತು.

ತಕ್ಷಣ ಸ್ಪಂದಿಸಿ ರಸ್ತೆ ತೆರವುಗೊಳಿಸಿದ ಅರಣ್ಯ ಇಲಾಖೆಯ ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು