ಈ ಹೊಸ ಬಸ್ ಸೇವೆಯಿಂದ ಚಿತ್ರದುರ್ಗ, ದಾವಣಗೆರೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಹಲವು ಪ್ರದೇಶಗಳ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ದೊರೆಯಲಿದೆ. ರಾತ್ರಿ ಸಮಯದಲ್ಲಿ ಸುಖಕರ ಪ್ರಯಾಣ ಮಾಡಲು ಸ್ಲೀಪರ್ ವ್ಯವಸ್ಥೆ ಇರುವುದರಿಂದ ದೂರ ಪ್ರಯಾಣ ಮಾಡುವವರಿಗೆ ಇದು ಉತ್ತಮ ಆಯ್ಕೆಯಾಗಲಿದೆ.
ಬಸ್ ವೇಳಾಪಟ್ಟಿ ಹೇಗಿದೆ?
ಬೆಂಗಳೂರುದಿಂದ ಪಲ್ಲಕ್ಕಿ ಸ್ಲೀಪರ್ ಬಸ್ ರಾತ್ರಿ 8.15ಕ್ಕೆ ಹೊರಟು, ಮಾರ್ಗ ಮಧ್ಯೆ ನಿಲ್ದಾಣಗಳನ್ನು ತಲುಪುತ್ತಾ ಬೆಳಗ್ಗೆ 8 ಗಂಟೆಗೆ ಕಾರವಾರ ತಲುಪಲಿದೆ.
ಕಾರವಾರದಿಂದ ಬಸ್ ಸಂಜೆ 7.30ಕ್ಕೆ ಹೊರಟು,
✨ರಾತ್ರಿ 8.15ಕ್ಕೆ ಅಂಕೋಲಾ,
✨8.50ಕ್ಕೆ ಗೋಕರ್ಣ,
✨10.45ಕ್ಕೆ ಶಿರಸಿ ತಲುಪಿದ ಬಳಿಕ ಮುಂದುವರಿದು ಬೆಳಗ್ಗೆ 7.30ಕ್ಕೆ ಬೆಂಗಳೂರಿಗೆ ಆಗಮಿಸಲಿದೆ.
ಈ ಬಸ್ಗಳು ಅಂಕೋಲಾ – ಗೋಕರ್ಣ – ಶಿರಸಿ – ದಾವಣಗೆರೆ – ಚಿತ್ರದುರ್ಗ ಮಾರ್ಗವಾಗಿ ಸಂಚಾರ ನಡೆಸಲಿವೆ.
ಪ್ರಯಾಣಿಕರು ಮುಂಗಡವಾಗಿ ತಮ್ಮ ಆಸನವನ್ನು ಕಾಯ್ದಿರಿಸಲು ಆನ್ಲೈನ್ ಟಿಕೆಟ್ ಬುಕ್ಕಿಂಗ್ ಸೌಲಭ್ಯ ಒದಗಿಸಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಹೊಸ ಸೇವೆಯಿಂದ ಕರಾವಳಿ ಹಾಗೂ ಉತ್ತರ ಕರ್ನಾಟಕ ಭಾಗದ ಜನರಿಗೆ ಬೆಂಗಳೂರು ಸಂಪರ್ಕ ಇನ್ನಷ್ಟು ಸುಲಭವಾಗಲಿದೆ.
0 ಕಾಮೆಂಟ್ಗಳು
Don't use abusive language. If any one found to be using abusive language straight away it will be reported to cyber police.
ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.