ಶಿರಸಿ: ಸಿರ್ಸಿಮಕ್ಕಿಯ ಹತ್ತಿರ ಭೀಕರ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ನಿಂತ ಟಿಪ್ಪರ್ ಗೆ ಇಕೋ ಕಾರು ವೇಗವಾಗಿ ಬಂದು ಡಿಕ್ಕಿ ಹೊಡೆದು ಕಾರಿನಲ್ಲಿ ಇದ್ದ ಮೂವರ ಪ್ರಯಾಣಿಕರ ಪೈಕಿ ಒಬ್ಬ ಪ್ರಯಾಣಿಕನ ಕೈ ತುಂಡಾಗಿದ್ದು ಮೂವರ ಸ್ಥಿತಿಯು ಗಂಭೀರವಾಗಿದ್ದು ಪ್ರಾಥಮಿಕ ಚಿಕಿತ್ಸೆಗಾಗಿ ಅಲ್ಲಿಂದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಅಪಘಾತದಲ್ಲಿ ಗಾಯಗೊಂಡವರು ರೇವಣಕಟ್ಟ ಮೂಲದವರು ಎಂದು ತಿಳಿದು ಬಂದಿದೆ.