ಉಡುಪಿ: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಎಕ್ಸಲೆನ್ಸ್ ಕೇಂದ್ರ ಸ್ಥಾಪನೆ

Udupi: Establishment of Toyota Kirloskar Center of Motor Excellence


ಉಡುಪಿ, ಮೇ 8: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಉಡುಪಿಯ ನಿಟ್ಟೆ ಮಹಾಲಿಂಗ ಅಡ್ಯಂತಾಯ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (ಎನ್‌ಎಂಎಎಂಐಟಿ) ಸೆಂಟರ್ ಆಫ್ ಎಕ್ಸಲೆನ್ಸ್ (ಸಿಒಇ) ಸ್ಥಾಪಿಸಿದೆ.

ಎಂಜಿನ್, ಪವರ್‌ಟ್ರೇನ್ ಹಾಗೂ ಅದರ ಕಾರ್ಯನಿರ್ವಹಣೆಯ ಬಗ್ಗೆ ವಿದ್ಯಾರ್ಥಿಗಳಿಗೆ ಅನುಭವವನ್ನು ನೀಡುವ ಗುರಿಯನ್ನು ಹೊಂದಿರುವ ಈ ಕೇಂದ್ರವು ವಿದ್ಯಾರ್ಥಿಗಳಿಗೆ ಸುಧಾರಿತ ತಂತ್ರಜ್ಞಾನಗಳು ಮತ್ತು ಅದರ ಅನ್ವಯಗಳ ಬಗ್ಗೆ ಕಲಿಯಲು ಅವಕಾಶ ನೀಡಲಿದೆ.

ಉದ್ಘಾಟನೆಯ ಸಂದರ್ಭದಲ್ಲಿ ಕುಲಪತಿ ವಿನಯ ಹೆಗ್ಡೆ, ಡಾ.ಎಂ.ಎಸ್.ಮೂಡಿತಾಯ, ಪ್ರೊ-ಉಪಕುಲಪತಿ, ನಿಟ್ಟೆ (ಡೀಮ್ಡ್ ವಿಶ್ವವಿದ್ಯಾಲಯ), ಎನ್‌ಎಂಎಎಂಐಟಿ ಪ್ರಾಂಶುಪಾಲ ಡಾ.ನಿರಂಜನ್ ಎನ್.ಚಿಪ್ಲುಂಕರ್, ಟಿಕೆಎಂನ ಹಿರಿಯ ಉಪಾಧ್ಯಕ್ಷ, ನಿರ್ದೇಶಕ ಮತ್ತು ಮುಖ್ಯ ಸಂವಹನ ಅಧಿಕಾರಿ ಸುದೀಪ್ ಎಸ್.ದಳವಿ ಮತ್ತಿತರರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳ ಕೌಶಲ್ಯ ಮಟ್ಟವನ್ನು ಹೆಚ್ಚಿಸುವ ಮತ್ತು ಸಮಗ್ರ ಕಲಿಕೆಯ ಮೂಲಕ ಆಟೋಮೋಟಿವ್ ಉದ್ಯಮಕ್ಕೆ ತರಬೇತಿ ಪಡೆದ ಮತ್ತು ಸಮರ್ಥ ಕಾರ್ಯಪಡೆಯನ್ನು ಒದಗಿಸುವ ಟೊಯೊಟಾದ ಗುರಿಯಿಂದ ಸ್ಫೂರ್ತಿ ಪಡೆದ ಸಂಸ್ಥೆ, ತಜ್ಞ ತರಬೇತುದಾರರು, ಸೌಲಭ್ಯಗಳು ಮತ್ತು ಸಲಕರಣೆಗಳನ್ನು ಒದಗಿಸುವ ಮೂಲಕ ಉತ್ತಮ ಗುಣಮಟ್ಟದ ಕೌಶಲ್ಯ ಶಿಕ್ಷಣ ನೀಡಲು ಪಠ್ಯಕ್ರಮವನ್ನು ಹೊಂದಿರುತ್ತದೆ. ಕ್ಯಾಂಪಸ್ ಒಳಗೆ ಸ್ಥಾಪಿಸಲಾದ ಸಿಒಇ ಟೊಯೋಟಾ ಎಂಜಿನ್, ಟ್ರಾನ್ಸ್ಮಿಷನ್ ಮತ್ತು ಪವರ್‌ಟ್ರೇನ್ ಕಟ್ ಸೆಕ್ಷನ್ ಮತ್ತು ಡು-ಇಟ್-ಯುವರ್ಸೆಲ್ಫ್ ಮಾದರಿಗಳಾಗಿ ಹೊಂದಿರುತ್ತದೆ.


ವಿಶ್ವದರ್ಜೆಯ ಮೂಲಸೌಕರ್ಯ ಮತ್ತು ಕೌಶಲ್ಯ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸುವಲ್ಲಿ ಟೊಯೊಟಾದ ಬೆಂಬಲದ ಬಗ್ಗೆ ಮಾತನಾಡಿದ ನಿಟ್ಟೆ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಎನ್.ವಿನಯ ಹೆಗ್ಡೆ ಅವರು, ಟೊಯೊಟಾದಂತಹ ಕಾರ್ಪೊರೇಟ್ ಮತ್ತು ಎನ್‌ಎಂಎಎAಐಟಿಯAತಹ ಸಂಸ್ಥೆಯ ನಡುವಿನ ಸಹಯೋಗವು ಪರಸ್ಪರ ಪ್ರಯೋಜನಕಾರಿಯಾಗಿದೆ, ಏಕೆಂದರೆ ಎರಡೂ ಸಂಸ್ಥೆಗಳು ಪ್ರಸ್ತುತ ಕೈಗಾರಿಕಾ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವ ಹೊಸ ತಂತ್ರಜ್ಞಾನಗಳ ಅಭಿವೃದ್ಧಿಗೆ ಕೊಡುಗೆ ನೀಡಬಹುದು.  ಈ ಸಹಯೋಗವನ್ನು ಮತ್ತಷ್ಟು ಬಲಪಡಿಸಲು ನಿಟ್ಟೆ ಆಡಳಿತ ಮಂಡಳಿಯು ಸಂಪೂರ್ಣ ಬೆಂಬಲ ನೀಡಲಿದೆ” ಎಂದರು.


ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ಟಿಕೆಎಂನ ಹಿರಿಯ ಉಪಾಧ್ಯಕ್ಷ, ನಿರ್ದೇಶಕ ಮತ್ತು ಮುಖ್ಯ ಸಂವಹನ ಅಧಿಕಾರಿ ಸುದೀಪ್ ಎಸ್ ದಾಲ್ವಿ, "ಬೆಳೆಯುತ್ತಿರುವ ವಾಹನ ಉದ್ಯಮದ ಅಗತ್ಯಗಳನ್ನು ಪೂರೈಸಲು ನುರಿತ ಎಂಜಿನಿಯರಿಂಗ್ ಸಂಪನ್ಮೂಲಗಳ ಲಭ್ಯತೆಯನ್ನು ಈ ಕೇಂದ್ರ ಖಚಿತಪಡಿಸಲಿದೆ. ಸೆಂಟರ್ ಆಫ್ ಎಕ್ಸಲೆನ್ಸ್ ಪ್ರಾಯೋಗಿಕ ಕಲಿಕೆಯನ್ನು ಉತ್ತೇಜಿಸುವ ಗುರಿ ಹೊಂದಿದೆ. ಇದರಿಂದ ವಿದ್ಯಾರ್ಥಿಗಳು ಪರಿಕಲ್ಪನೆಗಳು ಮತ್ತು ಸುಧಾರಿತ ತಂತ್ರಜ್ಞಾನಗಳ ಉತ್ತಮ ತಿಳುವಳಿಕೆಯನ್ನು ಬೆಳೆಸಿಕೊಳ್ಳಬಹುದು” ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement