ಬೆಂಗಳೂರು, ಡಿ.11: ಬೆಂಗಳೂರಿನ ಕುಂದಲಹಳ್ಳಿ ಗೇಟ್ನ ಸಮೀಪ ಬೇಕರಿ ನಡೆಸುತ್ತಿದ್ದ ಕುಂದಾಪುರ ಮೂಲದ ಮೂವರು ವ್ಯಕ್ತಿಗಳಿಗೆ ಅಲ್ಲಿನ ಸ್ಥಳಿಯ ಪುಡಿ ರೌಡಿಗಳು ಬಂದು ಹಲ್ಲೆಯನ್ನು ನಡೆಸಿದ್ದಾರೆ.
ಬೇಕರಿ ಬಿಸಿನೆಸ್ ಇಂದ ಅಲ್ಲೇ ಪಕ್ಕದಲ್ಲಿ ಇದ್ದ ತಮ್ಮ ಟೀ ಸ್ಟಾಲ್ ಬಿಸಿನೆಸ್ ಗೆ ತೊಂದರೆಯಾಗುತ್ತಿದೆ ಎನ್ನುವ ಕಾರಣದಿಂದ ಈ ಹಲ್ಲೆ ನಡೆದ ನಡೆಸಲಾಗಿದೆ ಎಂದು ಹೇಳಲಾಗಿದೆ. ಹಲ್ಲೆಗೆ ಒಳಗಾದವರು ಬೈಂದೂರು ಮೂಲದ ನವೀನ್ ಕುಮಾರ್, ಪ್ರಜ್ವಲ್ ಮತ್ತು ನಿತಿನ್ ಎಂದು ತಿಳಿದು ಬಂದಿದೆ.
ಹಲ್ಲೆ ನಡೆಸಿರುವ ಪುಡಿ ರೌಡಿಗಳು ಅಶ್ವತ್ಥನಗರದ ನಿವಾಸಿ ಕಾರ್ತಿಕ್, ಅಲ್ಯೂಮಿನಿಯಂ ಫ್ಯಾಬ್ರಿಕೇಟರ್ ಕೆಲಸ ಮಾಡುವ ಸಲ್ಮಾನ್ ಮತ್ತು ಮಾರತ್ತಹಳ್ಳಿಯ ಖಾಸಗಿ ಹೊಟೇಲ್ ಮ್ಯಾನೇಜರ್ ಕಾರ್ತಿಕ್ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂತ್ರಸ್ತರು ನಡೆಸುತ್ತಿದ್ದ ಬೇಕರಿಯಲ್ಲಿ ಜನ ಕಿಕ್ಕಿರಿದು ತುಂಬಿದ್ದರಿಂದ ಟೀ ಸ್ಟಾಲ್ ಮಾಲೀಕ ಮಂಜುನಾಥ್ ಅವರಿಗೆ ಗ್ರಾಹಕರ ಸಂಖ್ಯೆ ಕಡಿಮೆ ಇತ್ತು. ಹೀಗಾಗಿ ಅಂಗಡಿ ಮಾಲೀಕ ಆರೋಪಿಗಳ ನೆರವಿನಿಂದ ಹಣ ನೀಡಿ ಬೈಂದೂರು ಮೂಲದ ಯುವಕರನ್ನು ಓಡಿಸಲು ಸಂಚು ರೂಪಿಸಿದ್ದ. ಗುರುವಾರ ರಾತ್ರಿ ಆರೋಪಿಗಳು ಸಂತ್ರಸ್ತರು ನಡೆಸುತ್ತಿದ್ದ ಬೇಕರಿಯಲ್ಲಿ ಜಗಳವಾಡಿ ಹೆಲ್ಮೆಟ್‌ಗಳಿಂದ ಹೊಡೆದು ಒದ್ದು ಬೇಕರಿ ಉದ್ಯೋಗಿಯೊಬ್ಬರು ಧರಿಸಿದ್ದ 18 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡಿದ್ದರು. ಶೋಕೇಸ್‌ನ ಗಾಜು, ಕುಡಿಯುವ ಗ್ಲಾಸ್‌ಗಳನ್ನು ಒಡೆದು ಎಲ್ಲ ಆಹಾರ ಪೊಟ್ಟಣಗಳನ್ನು ಎಸೆದಿದ್ದಾರೆ.
ದಾಳಿಯನ್ನು ಖಂಡಿಸಿ ದಕ್ಷಿಣ ಕನ್ನಡ ಮೂಲದ ಉದ್ಯಮಿಗಳು ಮತ್ತು ಉದ್ಯಮಿಗಳು ಎಚ್‌ಎಎಲ್ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಈ ವೇಳೆ ಕರಾವೇ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿ ಬೇಕರಿ ನೌಕರರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು. ಇದೇ ವೇಳೆ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಕೂಡ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಒತ್ತಾಯಿಸಿದ್ದಾರೆ. ಆರೋಪಿಗಳು ಪ್ರತಿ ವಾರ ಪೊಲೀಸ್ ಠಾಣೆಗೆ ಹಾಜರಾಗಿ ಸಹಿ ಹಾಕುವಂತೆ ಶೀಘ್ರ ಕ್ರಮ ಕೈಗೊಂಡು ರೌಡಿ ಶೀಟ್ ತೆರೆಯುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.