ಬ್ರಹ್ಮಾವರ, ನ.6: ಮಹಿಳೆಯೊಬ್ಬರು ಇಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೀಡಾದ ಮಹಿಳೆಯನ್ನು ಬಿನ್ಸಿ ಶೈಜು ಥಾಮಸ್ (30) ಎಂದು ಗುರುತಿಸಲಾಗಿದೆ.
ಈಕೆ ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು October 26 ರಂದು ರಾತ್ರಿ 10 ಗಂಟೆ ಸುಮಾರಿಗೆ ಇಲಿ ವಿಷ ಸೇವಿಸಿದ್ದಾರೆ. ಈಕೆಯ ಪತಿ ಕೆ ಜೆ ಥಾಮಸ್ ವ್ಯಾಪಾರದ ನಿಮಿತ್ತ ದುಬೈನಲ್ಲಿದ್ದಾರೆ. ಈಕೆ ತನ್ನ ಮಗಳೊಂದಿಗೆ ಗಂಡನ ಮನೆಯ ಮೊದಲ ಮಹಡಿಯಲ್ಲಿ ವಾಸಿಸು ತಿದ್ದರು ಹಾಗೂ ಆಕೆಯ ಅತ್ತೆ ನೆಲ ಮಹಡಿಯಲ್ಲಿ vasisu ವಾಸಿಸುತಿದ್ದರು.
ಅಕ್ಟೋಬರ್ 31 ರಂದು ತೀವ್ರ ವಾಂತಿ ಭೇದಿಯಿಂದ ಅಸ್ವಸ್ಥಳಾಗಿದ್ದು, ಚಿಕಿತ್ಸೆಗಾಗಿ ಬ್ರಹ್ಮಾವರ ಜೀವನ್ ಜ್ಯೋತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಆಕೆಯ ಆರೋಗ್ಯ ಹದಗೆಟ್ಟಿದ್ದು, ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ನ.3ರಂದು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
Tags:
ಉಡುಪಿ ಜಿಲ್ಲಾ ಸುದ್ದಿಗಳು