ಶಿರಸಿ: ಹುಲಿಕಲ್ ರಸ್ತೆಯ ಕರ್ಕೊಳ್ಳಿ ಬಳಿ ದ್ವಿಚಕ್ರವಾಹನ ಸವಾರನ ಅಜಾಗರೂಕತೆಯ ಚಾಲನೆಯಿಂದ ಪಾದಚಾರಿಯೋರ್ವರು ಮೃತಪಟ್ಟ ಘಟನೆ ನಡೆದಿದೆ. ಘಟನೆ ಸಂಬಂಧ ಶಿರಸಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ:
ಕೃಷ್ಣ ಮರಾಠಿ ಎಂಬಾತ ಅಜಾಗರೂಕತೆಯಿಂದ ಬೈಕನ್ನು ಚಲಾಯಿಸಿಕೊಂಡು ಬಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡ ಪಾದಚಾರಿ ಯನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸಾಗಿಸಲಾಯಿತು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ ಮೃತರು ವೆಂಕಟ್ ಮರಾಠಿ ಎಂದು ತಿಳಿದುಬಂದಿದೆ.