ಸಂಜನಾ ಗಲ್ರಾನಿ ಅವರು ಒಬ್ಬ ರೂಪದರ್ಶಿ ಮತ್ತು ನಾಯಕಿಯಾಗಿದ್ದು 2005ರಲ್ಲಿ ತಮ್ಮ ಮೊಟ್ಟ ಮೊದಲ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.
ಕನ್ನಡ ಚಲನಚಿತ್ರವಾದ ಗಂಡ-ಹೆಂಡತಿ ಚಿತ್ರದಲ್ಲಿ ಅವರು ನಟಿಸಿದ್ದು ಇಡೀ ಚಲನಚಿತ್ರವೇ ಒಂದು ವಿವಾದದಿಂದ ಕೂಡಿತ್ತು. ಅಷ್ಟೇ ಅಲ್ಲದೆ ಕನ್ನಡದಲ್ಲಿ ಇನ್ನೊಂದು ಚಿತ್ರ ದಂಡುಪಾಳ್ಯ2 ಕೂಡ ಅವರು ಮನೋಜ್ಞವಾಗಿ ಅಭಿನಯಿಸಿದ್ದಾರೆ.
ಸಂಜನ ಗಲ್ರಣಿ ಅವರು ಮೂಲತಃ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವರು.ಅವರು ಪಿಯುಸಿನಲ್ಲಿ ಇದ್ದಾಗಲೇ ಅವರಿಗೆ ಅಭಿನಯದ ಆಫರ್ ಬಂದಿತ್ತು. ಅರೆಕಾಲಿಕ ರೂಪದರ್ಶಿಯಾಗಿ ಕೆಲಸವನ್ನು ಮಾಡುತ್ತಾ ತನ್ನ ವ್ಯಾಸಂಗವನ್ನು ಕೂಡ ಮಾಡುತ್ತಾ ಸುಮಾರು 500ಕ್ಕಿಂತ ಹೆಚ್ಚು ಮಾಡೆಲಿಂಗ್ ಜಾಹೀರಾತುಗಳಲ್ಲಿ ಕಾಣಿಸಿಕೊಂಡರು.
ಜಾಹಿರಾತುಗಳಲ್ಲಿ ಅಭಿನಯಿಸಿದ ಅವರಿಗೆ ಬಾಲನಟಿಯಾಗಿ ತೆಲುಗು ಚಿತ್ರದಲ್ಲಿ ಆಫರ್ ಬಂದಿತ್ತು. 2005ರಲ್ಲಿ ಸೊಗಡು ಮತ್ತು ಪಾಂಡುರಂಗ ವಿಠಲ ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿದ್ದರು. ಆನಂತರ ಅವರು ಕನ್ನಡದ ಗಂಡ ಹೆಂಡತಿ ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದರು. ಅಷ್ಟೇ ಅಲ್ಲದೆ ಕನ್ನಡದ ಇನ್ನೊಂದು ಚಿತ್ರ ದಂಡುಪಾಳ್ಯ2 ಅದರಲ್ಲಿಯೂ ಕೂಡ ನಾಯಕಿಯಾಗಿ ನಟಿಸಿದ್ದಾರೆ.
ವಿವಾದಗಳು:
2020 ನೇ ಇಸ್ವಿಯಲ್ಲಿ ಸಿಸಿಬಿ ಕನ್ನಡ ಚಲನಚಿತ್ರವನ್ನು ಒಳಗೊಂಡಂತೆ ಡ್ರಗ್ಸ್ ಪ್ರಕರಣದ ತನಿಖೆಗೆ ಆರಂಭಿಸುತ್ತದೆ. ಅದರಲ್ಲಿ ಸಂಜನಾ ಗಲ್ರಾನಿ ಕೂಡ ಒಬ್ಬರು. ಸ್ವಲ್ಪದರಲ್ಲಿ ಸಿಸಿಬಿ ಅಧಿಕಾರಿಗಳು ಸಂಜನಾ ಗಲ್ರಾನಿ ಅವರನ್ನು ಪ್ರಕರಣದ ಅಡಿಯಲ್ಲಿ ಬಂಧಿಸುತ್ತಾರೆ.
ಚಿತ್ರಕಥೆ:
1.ಸೊಗ್ಗಡು(2005)
2. ಒರು ಕಾದಲ್ ಸೇವೀರ್(2005)
3. ಗಂಡ ಹೆಂಡತಿ
4. ದಂಡುಪಾಳ್ಯ2
ವೆಬ್ ಸರಣಿ:
1) 2020 : ಶಿಟ್ ಹ್ಯಾಪನ್ಸ್ (ತೆಲುಗು)
2) 2019: ಐವರ್ (ತಮಿಳು)
3) ಕನ್ನಡದ ಬಿಗ್ ಬಾಸ್ ನಲ್ಲಿ ಅವರು ಅಭಿನಯಿಸಿದ್ದರು.
4)ಸ್ಮಾರ್ಟ್ ಶೋ (ಮಲಯಾಳಂ ಗೇಮ್ ಶೋ) 5)ಹಿಂದಿ ರಿಯಾಲಿಟಿ ಟಿವಿ ಶೋ ಮುಜ್ಸೆ ಶಾದಿ ಕರೋಗೆ ಸ್ಪರ್ಧಿಯಾಗಿದ್ದರು.
ಪ್ರಶಸ್ತಿ:
ಮತ್ತೆ ಬನ್ನಿ ಪ್ರೀತ್ಸೋಣ ಚಲನಚಿತ್ರದಲ್ಲಿ ನೆಗೆಟಿವ್ ರೋಲ್ ಗಾಗಿ ದಿ ಬೆಂಗಳೂರು ಟೈಮ್ಸ್ ಫಿಲ್ಮ್ ಅವಾರ್ಡ್ಸ್ (2011).
2015 ರಲ್ಲಿ, ಅವರು 104 ಗಂಟೆಗಳ ಕಾಲ ಸೈಕ್ಲಿಂಗ್ ಮಾಡುವ ಮೂಲಕ ಲಿಮ್ಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ಗೆ ಪ್ರವೇಶಿಸಿದರು.
GMASA ನಿಂದ ಸೆಲೆಬ್ರಿಟಿ ಸೋಶಿಯಲ್ ಮೀಡಿಯಾ ಐಕಾನ್ 2016 ಪ್ರಶಸ್ತಿಯನ್ನು ನೀಡಲಾಯಿತು.