ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಹಾವು ಕಚ್ಚಿ ಆಸ್ಪತ್ರೆ ಸೇರಿ ಇದೀಗ ಗುಣಮುಖವಾಗಿ ಬಿಡುಗಡೆಗೊಂಡಿದ್ದಾರೆ.
ಸಲ್ಮಾನ್ ಖಾನ್ ಅವರು ತಮ್ಮ ತೋಟದ ಮನೆಯಲ್ಲಿ ಸುತ್ತಾಡುತ್ತಿರುವಾಗ ಹಾವು ಕಂಡುಬಂದಿದೆ.ತಕ್ಷಣ ಅವರು ಅದನ್ನು
ಕೋಲಿನಿಂದ ಎತ್ತಿಕೊಂಡು ಹೊರಗೆ ತರಲು ಪ್ರಯತ್ನಿಸಿದ್ದಾರೆ. ಕೋಲಿನಿಂದ ಹಿಡಿದುಕೊಂಡು ಹೊರಗೆ ತರುತ್ತಿರುವಾಗ ಅದು ಕೈ ಮೇಲೆ ಆಕ್ರಮಣ ಮಾಡಿ ಅದರಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಒಮ್ಮಿಂದೊಮ್ಮೇಲೆ ಮೂರು ಬಾರಿ ಕಚ್ಚಿದೆ ಎಂದು ಹೇಳಲಾಗಿದೆ.
ಅದೊಂದು ವಿಷಪೂರಿತ ಹಾವಾಗಿದ್ದು ಆಸ್ಪತ್ರೆಯಲ್ಲಿ ಸುಮಾರು 6 ಗಂಟೆಗಳ ಕಾಲ ಚಿಕಿತ್ಸೆ ಪಡೆದು ಈಗ ಆರೋಗ್ಯವಂತನಾಗಿ ವಾಪಸಾಗಿದ್ದಾನೆ ಎಂದು ಸಲ್ಮಾನ್ ಖಾನ್ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
Tags:
ಸಿನಿಮಾ ಸುದ್ದಿಗಳು