ಫೈಟರ್ ಮತ್ತು ಸ್ಟಂಟ್ ಮಾಸ್ಟರ್ ಆಗಿದ್ದ ವಿವೇಕ್ ಅವರು ದುರ್ಘಟನೆಯಲ್ಲಿ ಸಾವಿಗೀಡಾಗಿದ್ದಾರೆ. ಲವ್ ಯು ರಚ್ಚುಎಂಬ ಸಿನಿಮಾದ ಚಿತ್ರೀಕರಣದಲ್ಲಿ ಒಂದರಲ್ಲಿ ಸ್ಟಂಟ್ ಮಾಡುತ್ತಿದ್ದಾಗ ಅಕಸ್ಮಾತಾಗಿ ವಿದ್ಯುತ್ ತಂತಿಗೆ ತಗುಲಿ ಸಾವಿಗೀಡಾಗಿದ್ದಾರೆ.
ಆಗಷ್ಟೇ ಕೂರೋಣ ಎರಡನೇ ಅಲೆ ಮುಗಿದ ತಕ್ಷಣ ಬಿಡದಿಯ ಜೋಗರದೊಡ್ಡಿ ಎಂಬಲ್ಲಿ ಲವ್ ಯೂ ರಚ್ಚು ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆಯಲ್ಲಿ 28 ವರ್ಷದ ವಿವೇಕ್ ಸ್ಟಂಟ್ ಮಾಡುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ತಂತಿಯ ಸಂಪರ್ಕಕ್ಕೆ ಬಂದು ಶಾಕ್ ಹೊಡೆದು ಸ್ಥಳದಲ್ಲಿಯೇ ಮೃತರಾಗಿದ್ದಾರೆ.
ಘಟನೆಯ ನಂತರ ಚಿತ್ರೀಕರಣವನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದ್ದು ಚಿತ್ರ ನಿರ್ದೇಶಕರಾದ ಶಂಕರ್ ಹಾಗೂ ನಿರ್ಮಾಪಕರಾದ ಗುರು ದೇಶಪಾಂಡೆ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.