ಕೋಲಾರ: ಸಾಲಭಾದೆ ಮತ್ತು ಆಸ್ತಿ ವಿವಾದಕ್ಕೆ ಸಂಬಂಧಿಸಿದ ಕಾರಣಕ್ಕೆ ಅಮ್ಮ ಮತ್ತು ಮಗಳಿಬ್ಬರು ಕೋಲಾರ ತಾಲೂಕಿನ ನರಸಾಪುರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ರ ಘಟನೆ ಮಂಗಳವಾರ ದಿನ ರಾತ್ರಿಯಂದು ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ಬೆಂಗಳೂರಿನ ಹೊರಮಾವು ನಿವಾಸಿಗಳು ಎಂದು ಹೇಳಲಾಗಿದೆ. ತಾಯಿ ನಂದಿತಾ (45) ಹಾಗೂ ಪುತ್ರಿ ಪ್ರಗತಿ (21) ಎಂಬುವವರೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಗಳಾಗಿದ್ದಾರೆ. ಇವರಲ್ಲಿ ನಂದಿತಾ ಅವರ ಪತಿ ಕೇಶವಮೂರ್ತಿ ಅವರು ಮೂರು ತಿಂಗಳ ಹಿಂದೆಯಷ್ಟೇ ಅನಾರೋಗ್ಯದ ಕಾರಣದಿಂದಾಗಿ ಮೃತಪಟ್ಟಿದ್ದರು.
ಪತಿ ಕೇಶವಮೂರ್ತಿ ಅವರು ಹತ್ತಿರದ ಸಂಬಂಧಿಕರು ಗಳ ಬಳಿ 10 ಲಕ್ಷಕ್ಕೂ ಹೆಚ್ಚಿನ ಸಾಲ ಮಾಡಿಕೊಂಡಿದ್ದರು ಮತ್ತು ಅವರ ಮರಣದ ನಂತರ ತೆಗೆದುಕೊಂಡ ಸಾಲವನ್ನು ಹಿಂತಿರುಗಿಸುವಂತೆ ಸಂಬಂಧಿಕರು ನಂದಿತಾ ಅವರನ್ನು ಒತ್ತಾಯಿಸುತ್ತಿದ್ದರು ಹಾಗೂ ಇನ್ನೊಂದೆಡೆ ಕೇಶವಮೂರ್ತಿ ಅವರ ಸೋದರರು ಆಸ್ತಿಯ ವಿಚಾರಕ್ಕೆ ಸಂಬಂಧವಾಗಿ ನಂದಿತಾ ಅವರೊಂದಿಗೆ ಜಗಳವಾಡಿ ಕಿರುಕುಳ ನೀಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸಾಲಗಾರರು ಹಾಗೂ ಸಂಬಂಧಿಕರ ಕಿರುಕುಳದಿಂದ ಬೇಸತ್ತ ತಾಯಿ ಮತ್ತು ಮಗಳಿಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದಲ್ಲದೆ ತಮ್ಮ ಸಾವಿಗೆ ಸಾಲಗಾರರು ಹಾಗೂ ಸಂಬಂಧಿಕರ ಕಿರುಕುಳವೇ ಕಾರಣ ಎಂದು ಬರೆದಿದ್ದಾರೆ. ಪುತ್ರಿ ಪ್ರಗತಿ ಬಿಟೆಕ್ ಓದುತ್ತಿದ್ದರು ಎಂದು ತಿಳಿದುಬಂದಿದೆ.