ಕಾರವಾರ ತಾಲೂಕಿನ ಸದಾಶಿವಗಡ ದಲ್ಲಿ ಹುಟ್ಟಿಬೆಳೆದ ಯುವತಿಯೊಬ್ಬಳು ಇದೀಗ ಕರ್ನಾಟಕದಾದ್ಯಂತ ಮನೆಮಾತಾಗಿದ್ದಾರೆ. ಇವರು ಕನ್ನಡ ಚಲನಚಿತ್ರರಂಗದಲ್ಲಿ ಕಥೆ-ಚಿತ್ರಕಥೆ ನಿರ್ಮಾಪಕಿ ಹಾಗೂ ಮುಖ್ಯ ಕಲಾವಿದೆಯಾಗಿ ಮಿಂಚುತ್ತಿದ್ದಾರೆ.
ಇವರ ಹೆಸರು ಮನಿಷ ಇವರು ಮೂಲತಃ ಕಾರವಾರದ ಸದಾಶಿವಗಡದವರು. ಇವರು ತಮ್ಮ ವಿದ್ಯಾಭ್ಯಾಸವನ್ನು ಕಾರವಾರದ ಸೆಂಟರ್ ಮೈಕಲ್ ಹೈಸ್ಕೂಲು ಮತ್ತು ದಿವಾಕರ ಕಾಲೇಜಿನಲ್ಲಿ ಪೂರೈಸಿದ್ದಾರೆ. ವಿದ್ಯಾಭ್ಯಾಸದ ನಂತರ ಕೆಲಸಕ್ಕೆಂದು ವಿದೇಶಕ್ಕೆ ತೆರಳಿ ಅಲ್ಲಿಂದ ಬಂದು ಮುಂಬೈನಲ್ಲಿ ನಿಲ್ಲಿಸಿದ್ದರು..
ಈ ಹಿಂದೆ ಇವರು ರಾಜಸ್ಥಾನಿ ಭಾಷೆಯಲ್ಲಿ ಸಂಗಮ್ ಎಂಬ ಚಲನಚಿತ್ರವನ್ನು ಮಾಡಿ ಅದರಲ್ಲಿ ಪಾತ್ರವನ್ನು ಕೂಡ ಮಾಡಿದ್ದರು ಅದರಂತೆಯೇ ತಮ್ಮ ಮಾತ್ರ ಭಾಷೆ ಕನ್ನಡದಲ್ಲಿ ಕೂಡ ಸಿನಿಮಾ ಮಾಡಬೇಕೆಂದು ಮನಸ್ಸು ಮಾಡಿ ಇದೀಗ ಅವರು 3.5 ಕೋಟಿ ರೂಪಾಯಿ ವೆಚ್ಚದಲ್ಲಿ ಸಿನಿಮಾವೊಂದನ್ನು ತಯಾರಿಸುತ್ತಿದ್ದಾರೆ. ಇವರು ಮುಖ್ಯ ಕಲಾವಿದೆಯಾಗಿ ನಟಿಸಿರುವ “ ನನ್ನ ಗುರಿ ವಾರೆಂಟ್” ಚಲನಚಿತ್ರ ಇದೇ ಬರುವ ಮಾರ್ಚ್ 26ರಂದು ಬಿಡುಗಡೆಯಾಗಲಿದೆ. ಕಾರವಾರದ ಗೀತಾಂಜಲಿ ಥಿಯೇಟರ್ನಲ್ಲಿ ಕೂಡ ಚಲನಚಿತ್ರ ಪ್ರದರ್ಶನಗೊಳ್ಳಲಿದ್ದು ನಾವೆಲ್ಲರೂ ಅವರಿಗೆ ಶುಭ ಹಾರೈಸೋಣ.