ಸೊರಬದಿಂದ ತನ್ನ ಊರಾದ ಅಂಕೋಲಕ್ಕೆ ಬಸ್ಸಿನಲ್ಲಿ ಬರುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಹೊನ್ನಾವರದ ಮೂಡ್ಕಣಿ ಬಸ್ ನಿಲ್ದಾಣದ ಬಳಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಅಂಕೋಲಾ ತಾಲೂಕಿನ ಹಾರವಾಡ ಗ್ರಾಮದ ಒಕ್ಕಲು ಕೇರಿಯ ಚೆನ್ನಯ್ಯ ಗೌಡ ಎಂದು ಹೇಳಲಾಗಿದೆ.
ಯಾವುದೋ ಕಾರ್ಯನಿಮಿತ್ತವಾಗಿ ಮಾರ್ಚ್ 2ರಂದು ಇವರು ಶಿವಮೊಗ್ಗ ಜಿಲ್ಲೆಯ ಸೊರಬಕ್ಕೆ ತೆರಳಿದ್ದರು. ಮಾರ್ಚ್ 4 ನೇ ತಾರೀಖಿನಂದು ಸೊರಬದಿಂದ ಹಿಂತಿರುಗಿ ಮನೆಗೆ ಬಸ್ಸಿನಲ್ಲಿ ಮರಳುತ್ತಿದ್ದಾಗ ತೀವ್ರ ಅನಾರೋಗ್ಯದ ಕಾರಣದಿಂದ ಬಸ್ ಹೊನ್ನಾವರದ ಮೂಡ್ಕಣಿ ಸಮೀಪದ ಬಸ್ ನಿಲ್ದಾಣ ತಲುಪಿದಾಗ ಮತಪಟ್ಟಿದ್ದಾರೆ. ಘಟನೆ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.