ಯಲ್ಲಾಪುರ: ತೋಟದ ಬಳಿ ಕೆಲಸಮಾಡುವಾಗ ಮಣ್ಣು ಕುಸಿದು ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಯಲ್ಲಾಪುರದ ಇಡಗುಂದಿ ಯಲ್ಲಿ ನಡೆದಿದೆ. ತೋಟವೂ ಸಂತೆ ಬೈಲಿನ ಮಂಜುನಾಥ್ ಭಟ್ ಎನ್ನುವವರ ಮಾಲೀಕತ್ವಕ್ಕೆ ಸೇರಿದ್ದು ಏಳು ಮಂದಿ ಇವರ ತೋಟದ ಕೆಲಸಕ್ಕೆಂದು ತೆರಳಿದ್ದರು.
ತೋಟದಲ್ಲಿ ಮಣ್ಣು ಹಾಕುವ ಸಂದರ್ಭದಲ್ಲಿ ಕಾರ್ಮಿಕರ ಮೇಲೆ ಮಣ್ಣು ಕುಸಿದಿದೆ. ಈ ಘಟನೆಯಲ್ಲಿ ಯಲ್ಲಾಪುರ ತಾಲೂಕಿನ ಕಿರವತ್ತಿ ಸಮೀಪದ ಗೌಳಿವಾಡದ ಭಾಗ್ಯ ಲಕ್ಷ್ಮಿ ( 38 ವರ್ಷ) ಸಂತೋಷ್ ( 18 ವರ್ಷ) ಹಾಗೂ ಮಾಲು ( 21 ವರ್ಷ) ಎಂಬುವವರು ಮೃತರಾಗಿದ್ದಾರೆ. ಇನ್ನುಳಿದ ಕಾರ್ಮಿಕರು ಅಪಾಯದಿಂದ ಪಾರಾಗಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಲಾಗಿದ್ದು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣದ ಕುರಿತು ಪ್ರಕರಣ ದಾಖಲಾಗಿದೆ.