ಹುಬ್ಬಳ್ಳಿ: ಕನ್ನಡ ಚಿತ್ರರಂಗದ ಕಲಾವಿದೆ ಮತ್ತು ಮಾಜಿ ಸಚಿವರು ಕೂಡ ಆಗಿರುವ ಉಮಾಶ್ರೀಯವರ ಕಾರು ಮತ್ತು ಇನ್ನೊಂದು ಕಾರಿನ ನಡುವೆ ನಡೆದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವೈದ್ಯೆರೊಬ್ಬರು ಶನಿವಾರದಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ನವಂಬರ್ 20ರಂದು ರಾತ್ರಿ ಸಮಯದಲ್ಲಿ ಗದಗ ರಸ್ತೆಯ ಬಂಡಿವಾಡ ಎಂಬಲ್ಲಿ ಎರಡು ಕಾಡಿನ ಮಧ್ಯೆ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ಶೋಭಾ ಕಟ್ಟಿ ಮತ್ತು ಚಾಲಕ ಸಂದೀಪ ವಿಭೂತಿಮಠ ಎನ್ನುವವರು ಸ್ಥಳದಲ್ಲಿಯೇ ಮತ ರಾಗಿದ್ದರು. ಅದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಡಾ.ಸ್ಮಿತಾ ಕಟ್ಟಿ ಎನ್ನುವವರು ಗಂಭೀರ ಸ್ಥಿತಿಯಲ್ಲಿದ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೂಡ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ತಾಯಿ ಶೋಭಾ ಕಟ್ಟಿ ಅವರನ್ನು ಕಳೆದುಕೊಂಡ ಬೆನ್ನಲ್ಲೇ ಮಗಳು ಕೂಡ ಇಹ ಲೋಕವನ್ನು ತ್ಯಜಿಸಿದ್ದಾರೆ. ಇದರಿಂದಾಗಿ ಉಮಾಶ್ರೀ ಮಾಲಿಕತ್ವದ ಕಾರಿಗೆ 3 ಮಂದಿ ಬಲಿ ಆದಂತಾಗಿದೆ.
