ಕಾರವಾರ, ಅಕ್ಟೋಬರ್ 15: ಬೈಕೊಂದು ನಿಯಂತ್ರಣವನ್ನು ಕಳೆದುಕೊಂಡು ನೀನು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತಪಟ್ಟ ಬೈಕ್ ಸವಾರನನ್ನು ಆನಂದ್ ಎಂದು ಗುರುತಿಸಲಾಗಿದೆ. ಇವರು ಮುಂಡಗೋಡ ಮೂಲದವರು.
ಈ ದುರ್ಘಟನೆಯು ನಗರದ ಲಂಡನ್ ಬ್ರಿಡ್ಜ್ ಬಳಿ ನಡೆದಿದ್ದು ದುರ್ಘಟನೆಯಲ್ಲಿ ಬೈಕಿನ ಮತ್ತೊಬ್ಬ ಸವಾರ ಕೂಡ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಕಾರವಾರ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ.
ನಗರದಲ್ಲಿ ಸುರಿಯುತ್ತಿರುವ ಅತಿಯಾದ ಮಳೆಯ ಕಾರಣ ಬೈಕ್ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗುತ್ತಿದೆ. ಇಬ್ಬರು ಬೈಕ್ ಸವಾರ ಮತ್ತು ಸಹ ಸವಾರರು ಕಾರವಾರ ನಗರಕ್ಕೆ ಕೆಲಸದ ನಿಮಿತ್ತ ಆಗಮಿಸುವಾಗ ಈ ದುರ್ಘಟನೆ ಸಂಭವಿಸಿದೆ.
