ಕೋರೋಣ ವೈರಸ್ ಸೋಂಕು ತಡೆಗಟ್ಟು ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿಗಳ ನೇಮಕಾತಿ ಮಾಡಿಕೊಳ್ಳಲಾಗಿತ್ತು. ಈ ಸಿಬ್ಬಂದಿಗಳ ನೇಮಕಾತಿ ಕೇವಲ ಆರು ತಿಂಗಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಇದೀಗ ಇನ್ನೂ ಆರು ತಿಂಗಳ ಕಾಲ ಮುಂದುವರಿಸುವಂತೆ ರಾಜ್ಯಸರ್ಕಾರ ಆದೇಶವನ್ನು ಹೊರಡಿಸಿದೆ.
ರಾಜ್ಯ ಸರ್ಕಾರದ ಈ ಆದೇಶದಿಂದಾಗಿ ಗುತ್ತಿಗೆ ಸಿಬ್ಬಂದಿಗಳು ಇನ್ನೂ ಆರು ತಿಂಗಳು ಅಂದರೆ ಪೂರ್ತಿ ಒಂದು ವರ್ಷದ ತನಕ ಕೆಲಸದಲ್ಲಿ ಇರಲಿದ್ದಾರೆ. ಮೊದಲಿನ ಪ್ರಕಾರ ಆರು ತಿಂಗಳು ಅಂದರೆ ಸೆಪ್ಟೆಂಬರ್ ತಿಂಗಳಲ್ಲಿ ಕೆಲಸ ಅಂತ್ಯವಾಗಿತ್ತು. ಆದರೆ ರಾಜ್ಯ ಸರ್ಕಾರದ ಹೊಸ ಆದೇಶದೊಂದಿಗೆ ಈಗ ಡಿಸೆಂಬರ್ ತನಕ ಮುಂದುವರಿಯಲಿದೆ.