ವಿಶಾಖಪಟ್ಟಣಂ: ವಿಶಾಖಪಟ್ಟಣದ ಗಣಪತಿನಗರ ಎಂಬಲ್ಲಿ ಮನೆಯೊಂದರ ಮೇಲೆ ಭಾರೀ ಗಾತ್ರದ ಬಂಡೆ ಉರುಳಿಬಿದ್ದು ಮನೆಯಲ್ಲಿದ್ದ ಗರ್ಭಿಣಿ ಹೆಂಗಸು ಮತ್ತು ಆಕೆಯ ಮೂರು ವರ್ಷದ ಮಗು ದಾರುಣ ರೀತಿಯಲ್ಲಿ ಮತಪಟ್ಟಿದ್ದಾರೆ.
ನನ್ನಿಂದ ಕೊರೊನಾ ಹರಡಬಾರದು: ಇಟಲಿಯಲ್ಲೇ ಉಳಿದ ಶಿರಸಿಯ ಕನ್ನಡತಿ
ಮೃತ ದುರ್ದೈವಿ ಗಳನ್ನು ಕೆ. ರಾಮಲಕ್ಷ್ಮಿ ಹಾಗೂ ಆಕೆಯ ಮಗ ಜ್ಞಾನೇಶ್ವರ ಬಾಬು ಎಂದು ಗುರುತಿಸಲಾಗಿದೆ. ಮನೆಯೂ ಬೆಟ್ಟದ ಹತ್ತಿರದಲ್ಲಿ ಇದ್ದಿದ್ದರಿಂದ ಬಂಡೆ ಉರುಳಿ ಈ ದುರ್ಘಟನೆ ಸಂಭವಿಸಿದೆ.
ಬೆಟ್ಟದಿಂದ ಉರುಳಿಕೊಂಡು ಬಂದ ಬೃಹತ್ ಗಾತ್ರದ ಬಂಡೆಯೊಂದು ಅವರ ಮನೆ ಮೇಲೆ ಹಾದು ಹೋಗಿದೆ. ಇದರಿಂದಾಗಿ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದೆ. ಈ ಘಟನೆಯಿಂದ ತಾಯಿ ಮತ್ತು ಮಗು ಇಬ್ಬರೂ ಸಾವನ್ನಪ್ಪಿದರೆ ಆಕೆಯ ಗಂಡ ಮತ್ತು ಅತ್ತೆ ಮಾತ್ರ ಅಪಾಯದಿಂದ ಪಾರಾಗಿದ್ದಾರೆ.