ಗುಜರಾತ್ ನ ಗಿರ್ ಸೋಮನಾಥ್ ಎಂಬಲ್ಲಿ ಸಿಂಹಗಳ ಗುಂಪೊಂದು ಸುತ್ತುವರಿದ ಅಂಬುಲೆನ್ಸ್ ನಲ್ಲಿ ಹೆರಿಗೆ ಯಾಗಿರುವ ವಿಲಕ್ಷಣ ಘಟನೆಯೊಂದು ನಡೆದಿದೆ.
ತಡರಾತ್ರಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು ಆಗ ಅಂಬುಲೆನ್ಸ್ ಅನ್ನು ಕರೆಸಿ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಅಂಬುಲೆನ್ಸ್ ಕಾಡಿನ ದಾರಿಯ ಮಧ್ಯೆ ಸಾಗುವಾಗ ನಾಲ್ಕು ಸಿಂಹಗಳು ಬಂದು ದಾರಿಯಲ್ಲಿ ನಿಂತು ಅಂಬುಲೆನ್ಸ್ ಅನ್ನು ಸುತ್ತುವರಿದು ನಿಂತುಕೊಂಡಿತ್ತು.
ಆಗ ಡ್ರೈವರ್ ಏನು ಮಾಡಬೇಕೆಂದು ತೋಚದೆ ಅಂಬುಲೆನ್ಸ್ ಅನ್ನು ಅಲ್ಲಿಯೇ ನಿಲ್ಲಿಸಿದ್ದಾನೆ. ಅದೇ ಸಮಯದಲ್ಲಿ ಗರ್ಭಿಣಿ ಹೆಂಗಸಿಗೆ ನಲ್ಲಿಯೇ ನೋವು ಹೆಚ್ಚಾಗಿ ಕಾಣಿಸಿಕೊಂಡಾಗ ಆಂಬುಲೆನ್ಸ್ ನಲ್ಲಿ ಇದ್ದ ತುರ್ತು ಆರೋಗ್ಯ ಸಿಬ್ಬಂದಿಗಳು ಹೆರಿಗೆಯನ್ನು ಅಲ್ಲಿಯೇ ಮಾಡಿಸಿದ್ದಾರೆ. ಆನಂತರ ಸುಮಾರು 20 ನಿಮಿಷಗಳ ಕಾಲ ಸಿಂಹಗಳು ಅಲ್ಲಿಂದ ಕಾಲ್ಕಿತ್ತ ನಂತರ ತಾಯಿ ಮತ್ತು ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ತಾಯಿ ಮತ್ತು ಮಗು ಆಸ್ಪತ್ರೆಯಲ್ಲಿ ಆರೋಗ್ಯವಾಗಿದ್ದಾರೆ.