ಬೆಂಗಳೂರು (ಆಗಸ್ಟ್.24): ಕೋರೋನಾ ವೈರಸ್ ಸೋಂಕು ಕಾರಣದಿಂದಾಗಿ ಮಿತವ್ಯಯದ ದಾರಿಯನ್ನು ಅನುಸರಿಸಿದ್ದ ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆ ಎಲ್ಲಾ ಹುದ್ದೆಗಳ ಭರ್ತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಆದರೆ ಇದೀಗ ಅದನ್ನು ಪುನರಾರಂಭಿಸುವಂತೆ ಸೂಚನೆಯನ್ನು ನೀಡಿದೆ.
ಈ ಸುದ್ದಿ ಸರ್ಕಾರ ಉದ್ಯೋಗಕ್ಕೆ ಕಾದುಕುಳಿತಿದ್ದ ಉದ್ಯೋಗ ಆಕಾಂಕ್ಷಿಗಳಿಗೆ ಸಂತೋಷವನ್ನುಂಟುಮಾಡಿದೆ. ಇನ್ನು ಕೆಲವೇ ದಿನಗಳಲ್ಲಿ ತಡೆಹಿಡಿಯಲ್ಪಟ್ಟ ಎಲ್ಲಾ ನೇಮಕಾತಿ ಪ್ರಕ್ರಿಯೆಯನ್ನು ಪುನರಾರಂಭ ಗೊಳಿಸಲಾಗುವುದು ಎಂಬುದರ ಬಗ್ಗೆ ಸರ್ಕಾರ ಸುಳಿವನ್ನು ನೀಡಿದೆ.