ಇಪ್ಪತ್ತರ ವಯಸ್ಸಿನ ಯುವತಿಯೊಬ್ಬರು ಪೋಷಕರ ಎದುರಲ್ಲೇ ಭೀಮಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವತಿಯ ಹೆಸರು ಐಶ್ವರ್ಯ ಶ್ರೀಪಾಲ ಕಬ್ಬಿನ ( 20 ವರ್ಷ ವಯಸ್ಸು). ಈಕೆ ಮೂಲತಃ ಧಾರವಾಡದ ನವಲಗುಂದ ಪಟ್ಟಣದ ನಿವಾಸಿಯಾಗಿದ್ದಾರೆ. ಪಾಲಕರ ಜೊತೆ ದೇವಸ್ಥಾನಕ್ಕೆ ಹೋಗಿ ಬಂದು ಮನೆಗೆ ಹೋಗುವ ವೇಳೆ ಈ ದುರ್ಘಟನೆ ನಡೆದಿದೆ.
ವಿಜಯಪುರದ ಆಲಮೇಲ ಮತ್ತು ಕಲಬುರ್ಗಿ ಜಿಲ್ಲೆಯ ಅಫಜಲ್ ತಾಲ್ಲೂಕ್ ನಡುವೆ ಬರುವ ಭೀಮಾನದಿಯ ಹತ್ತಿರ ವಾಹನ ನಿಲ್ಲಿಸಿ ತಾನು ನದಿಗೆ ನಾಣ್ಯವನ್ನು ಎಸೆದು ಬರುವುದಾಗಿ ಪೋಷಕರ ಹತ್ತಿರ ಹೇಳಿದ್ದಾಳೆ. ವಾಹನದಿಂದ ಇಳಿದು ನೇರವಾಗಿ ಭೀಮಾ ನದಿಗೆ ಧುಮುಕಿ ಪೋಷಕರ ಕಣ್ಣೆದುರಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಗಳನ್ನು ಕಳೆದುಕೊಂಡ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಆತ್ಮಹತ್ಯೆಗೆ ಯಾವುದೇ ನಿಖರ ಕಾರಣ ತಿಳಿದುಬಂದಿಲ್ಲ.