ಗುಂಟೂರು: ಆಂಧ್ರಪ್ರದೇಶ ರಾಜ್ಯದಲ್ಲಿ ಗುಂಟೂರು ಮೂಲದ ಸಾಫ್ಟ್ ವೇರ್ ಇಂಜಿನಿಯರ್ ಮಗು ಸಮೇತ ಆತ್ಮಹತ್ಯೆ ಮಾಡಿಕೊಂಡಿದ್ದರು ( ಮನೋಜ್ಞ (29) ಮತ್ತು ಮಗಳು ತುಳಸಿ (9 ತಿಂಗಳು).
ಆದರೆ ಈ ಆತ್ಮಹತ್ಯೆ ಸ್ಫೋಟಕ ತಿರುವು ಒಂದು ಸಿಕ್ಕಿದೆ. ಆತ್ಮಹತ್ಯೆ ಮಾಡಿಕೊಂಡ ಬಳಿಕ ನಡೆದ ಪೋಸ್ಟ್ಮಾರ್ಟಮ್ ಪರೀಕ್ಷೆಯಲ್ಲಿ ಆತ್ಮಹತ್ಯೆಗೂ ಮುನ್ನ ಅಂದರೆ 36 ರಿಂದ 48 ಗಂಟೆಗಳ ಮುಂಚೆಯೇ ಮನೋಜ್ಞ ತಲೆಗೆ ಆದ ಗಂಭೀರ ಗಾಯ ದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮರಣೋತ್ತರ ಪರೀಕ್ಷೆ ಬಂದನಂತರ ಸಂಶಯಾಸ್ಪದ ಆತ್ಮಹತ್ಯೆ ಪ್ರಕರಣ ಇದೀಗ ಕೊಲೆ ಎಂಬ ಸಂಶಯ ಮೂಡಿಸಿದೆ. ಮನೋಜ್ಞ ಗಂಡ ಹಾಗೂ ಆಕೆಯ ಅತ್ತೆ ಈ ಕೊಲೆ ಮಾಡಿರಬಹುದು ಎಂದು ಮನೋಜ್ಞ ಕುಟುಂಬಸ್ಥರು ದೂರಿದ್ದಾರೆ.