ಡ್ರಗ್ ಕೇಸಿಗೆ ಸಂಬಂಧಿಸಿದ ವಿಚಾರದಲ್ಲಿ ಬಂಧಿತರಾಗಿರುವ ಸ್ಯಾಂಡಲ್ವುಡ್ ನಟಿ ರಾಗಿಣಿ ದ್ವಿವೇದಿ ಅವರೀಗ ಮೂರು ದಿನಗಳ ಕಾಲ ಪೊಲೀಸ್ ವಶದಲ್ಲಿ ಇರಲಿದ್ದಾರೆ. ನಿನ್ನೆಯಷ್ಟೇ ಬಾರಿ ವಿಚಾರಣೆ ಮಾಡಿದ ಪೊಲೀಸರು ರಾಗಿಣಿ ದ್ವಿವೇದಿ ಅವರನ್ನು ಬಂಧಿಸಿ ಅವರ ವಿರುದ್ಧ ಕಠಿಣ ಕೇಸುಗಳನ್ನು ದಾಖಲು ಮಾಡಿದ್ದಾರೆ. 1985ರ ಎನ್ಡಿಪಿಎಸ್ ಕಾಯ್ದೆಯ ಸೆಕ್ಷನ್ 21(ಬಿ), 21(ಸಿ) ಮತ್ತು 22(ಸಿ) ಸೆಕ್ಷನ್ ಅಡಿಯಲ್ಲಿ ಅವರ ಮೇಲೆ ಕೇಸ್ ದಾಖಲು ಮಾಡಲಾಗಿದೆ ಎಂದು ಹೇಳಲಾಗಿದೆ.
ಮಾದಕ ವಸ್ತುಗಳ ಮಾರಾಟ, ಖರೀದಿ ಮತ್ತು ಸಾಗಣೆಗೆ ಸಂಬಂಧಿಸಿದಂತೆ ಮುಂತಾದ ಅವ್ಯವಹಾರಗಳಿಗೆ ಈ ಮೇಲಿನ ಸೆಕ್ಷನ್ಗಳು ಅಪ್ಲೈ ಆಗುತ್ತದೆ. ಒಂದು ವೇಳೆ ನಟಿ ರಾಗಿಣಿ ದ್ವಿವೇದಿ ಅವರ ಮೇಲಿನ ಆರೋಪ ಸಾಬೀತಾದರೆ ಕಠಿಣ ಶಿಕ್ಷೆ ಕಟ್ಟಿಟ್ಟ ಬುತ್ತಿಯಾಗಿದೆ. ಆರೋಪ ಸಾಬೀತಾದಲ್ಲಿ ಇಪ್ಪತ್ತು ವರ್ಷಗಳ ಜೈಲು ಮತ್ತು 2 ಲಕ್ಷ ದಂಡ ವಿಧಿಸುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಡ್ರಗ್ಸ್ ಪೆಡ್ಲರ್ ಗಳಾದ ರವಿಶಂಕರ್ ಮತ್ತು ರಾಹುಲ್ ಜೊತೆಗೆ ರಾಗಿಣಿ ದ್ವಿವೇದಿ ಅವರು ಕೂಡ ಸಂಬಂಧ ಹೊಂದಿರುವುದು ಇದೆ ಅವರಿಗೆ ಮುಳುವಾಗಿದೆ.
ರವಿಶಂಕರ ಒಬ್ಬ ಆರ್ಟಿಓ ಅಧಿಕಾರಿಯಾಗಿದ್ದು ಆತನ ಅರೆಸ್ಟ್ ಆದಮೇಲೆ ರಾಗಿಣಿ ದ್ವಿವೇದಿ ಕೂಡ ಡ್ರಗ್ಸ್ ಜಾಲದಲ್ಲಿ ಇರುವುದು ಪತ್ತೆಯಾಗಿತ್ತು. ಡ್ರಗ್ಸ್ ಜಾಲ ಅಷ್ಟೇ ಅಲ್ಲದೆ ಹಣಕಾಸಿನ ವ್ಯವಹಾರದಲ್ಲಿ ಕೂಡ ರಾಗಿಣಿ ದ್ವಿವೇದಿ ಅವರ ಕೈವಾಡ ಇರುವುದರ ಬಗ್ಗೆ ಪೊಲೀಸರಿಗೆ ಸಾಕ್ಷಿ ಆಧಾರ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಸಿಸಿಬಿ ಕಚೇರಿಯಲ್ಲಿ ವಿಚಾರಣೆ ನಡೆಯಲಿದ್ದು ಮುಂದೆ ಏನಾಗುತ್ತದೆ ಎಂದು ಕಾದುನೋಡಬೇಕಾಗಿದೆ.