ಕಾರವಾರ: ಅದಾಗಲೇ ಮದುವೆಯಾಗಿರುವ ವಿವಾಹಿತ ಮಹಿಳೆಯನ್ನು ಪಿಕ್ನಿಕ್ಕಿಗೆ ಕರೆದುಕೊಂಡು ಬಂದ ಪ್ರೇಮಿಯೊಬ್ಬನಿಗೆ ಪತಿರಾಯ ನಿಂದ ಚೆನ್ನಾಗಿ ಗೂಸಾ ಬಿದ್ದಿರುವ ಘಟನೆ ಕಾರವಾರದಲ್ಲಿ ನಡೆದಿದೆ.
ಧಾರವಾಡದ ಮೂಲದ ಯುವಕನೊಬ್ಬ ಮದುವೆಯಾಗಿರುವ ತನ್ನ ಪ್ರೇಯಸಿಯನ್ನು ಕಾರವಾರಕ್ಕೆ ಕರೆದುಕೊಂಡು ಬಂದಿದ್ದ. ವಿಷಯವನ್ನು ತಿಳಿದ ಪ್ರೇಯಸಿಯ ಗಂಡ ಕುಟುಂಬದ ಸಮೇತ ಇನ್ನೊಂದು ಕಾರಿನಲ್ಲಿ ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದಾನೆ.
ಬೀಚ ಹತ್ತಿರ ನಿಂತಿದ್ದ ಇಬ್ಬರನ್ನು ನೋಡಿದ ಪತಿರಾಯ ಒಂದೇ ಸಮನೆ ಇಬ್ಬರಿಗೂ ಕೂಡ ಚೆನ್ನಾಗಿ ಥಳಿಸಿದ್ದಾನೆ. ಅದಲ್ಲದೆ ಆತನ ಕುಟುಂಬಸ್ಥರು ಕೂಡ ಅವರಿಬ್ಬರಿಗೂ ಸಾರ್ವಜನಿಕರ ಸಮ್ಮುಖದಲ್ಲಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.