ಕುಮಟಾ, ಸೆಪ್ಟೆಂಬರ್ 06: ಕುಮಟಾ ತಾಲೂಕಿನ ಹೋಂ ಸ್ಟೇ ಒಂದರಲ್ಲಿ ಪ್ರವಾಸಿಗರಾಗಿ ಬಂದಿದ್ದ ಪ್ರವಾಸಿಗನೋರ್ವ ಸಮುದ್ರದಲ್ಲಿ ಕೊಚ್ಚಿಹೋದ ಘಟನೆ ರವಿವಾರದಂದು ನಡೆದಿದೆ.
ನೀರಿನಲ್ಲಿ ಕೊಚ್ಚಿ ಹೋದ ಯುವಕನನ್ನು ಆನಂದ (29) ಹುಲಿದುರ್ಗ ಮೂಲದವನು ಎಂದು ಗುರುತಿಸಲಾಗಿದೆ. ಈತ ಗೆಳೆಯರ ಜೊತೆ ಪ್ರವಾಸಕ್ಕೆಂದು ಬಂದು ಬಾಡದ ಪರ್ಣಕುಟೀರ ಎಂಬ ಹೋಂಸ್ಟೇನಲ್ಲಿ ತಂಗಿದ್ದರು.
ರವಿವಾರ ದಿನದಂದು, ಸಮುದ್ರಕ್ಕೆ ಈಜಲು ತಿಳಿದಾಗ ನೀರಿನ ರಭಸಕ್ಕೆ ಸಿಲುಕಿ ಕೊಚ್ಚಿ ಕೊಂಡು ಹೋಗಿದ್ದಾನೆ ಎಂದು ತಿಳಿದುಬಂದಿದೆ. ಸ್ನೇಹಿತರು ರಕ್ಷಣಗೆ ಮುಂದಾದರೂ ಸಹ ಸಮುದ್ರದ ನೀರಿನ ಗಾಢ ಸೆಳೆತಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದಾನೆ. ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.