ಇತ್ತೀಚಿಗಷ್ಟೇ ಕೇರಳದಲ್ಲಿ ಒಬ್ಬ ಚಾಲಕ ತನ್ನ ಕಾರನ್ನು ಬ್ರಿಜ್ ಒಂದರ ಇಕ್ಕಟ್ಟಿನ ಸ್ಥಳದಲ್ಲಿ ಪಾರ್ಕ್ ಮಾಡುವುದರ ಮೂಲಕ ತನ್ನ ಚಾಲನಾ ಕೌಶಲ್ಯತೆಯನ್ನು ಮೆರೆದಿದ್ದ. ಆತನ ಕಾರ್ ಪಾರ್ಕಿಂಗ್ ವಿಡಿಯೋ ತುಂಬಾನೇ ವೈರಲ್ ಆಗಿತ್ತು.
ಇದೀಗ ಆತನಿಂದ ಪ್ರೇರಣೆಗೊಂಡ ಸೆಡಾನ್ ಕಾರು ಚಾಲಕನೊಬ್ಬ ತನ್ನ ಸೆಡಾನ್ ಕಾರನ್ನು ಕೇರಳದ ಚಾಲಕ ಪಾರ್ಕ್ ಮಾಡಿದ್ದ ಇಕ್ಕಟ್ಟಿನ ಬ್ರಿಜ್ ಮೇಲೆ ತಾನು ಕೂಡಾ ಪಾರ್ಕ್ ಮಾಡಲು ಹೋಗಿದ್ದಾನೆ.
ಸೆಡಾನ್ ಕಾರು ಚಾಲಕ ಕಾರನ್ನು ಪಾರ್ಕ್ ಮಾಡಲು ಪಡುತ್ತಿರುವ ಹರಸಾಹಸವನ್ನು ಸ್ಥಳೀಯರು ವಿಡಿಯೋ ಮಾಡಿ ಯೂಟ್ಯೂಬ್ನಲ್ಲಿ ಹರಿಯಬಿಟ್ಟಿದ್ದಾರೆ.