ಶಿವಮೊಗ್ಗ ಜಿಲ್ಲೆಯ ಗರ್ತಿಕೆರೆ ಎಂಬಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು ಕಾರಿನಿಂದ ಕೆಳಗಿಳಿದ ಮೂವರು ಸಾವನ್ನಪ್ಪಿದ್ದಾರೆ. ಆತಂಕದಿಂದ ಕಾರಿನಿಂದ ಹೊರಗೆ ಬರದೆ ಅಲ್ಲೇ ಕುಳಿತವರಿಗೆ ಯಾವುದೇ ರೀತಿಯ ಅಪಾಯ ಸಂಭವಿಸಿಲ್ಲ.
ಘಟನೆ ಹೇಗಾಯ್ತು?
ಹೊಸನಗರ ಮಾರ್ಗವಾಗಿ ರಿಪ್ಪನ್ ಪೇಟೆ ಗೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದಾಗ ಯಾವುದೇ ರೀತಿಯ ಅಪಾಯ ಸಂಭವಿಸಿರಲಿಲ್ಲ ಆದರೆ ಕಾರು ಚಾಲಕ ಕೆಳಗಿಳಿದು ನೋಡಲು ಹೋದಾಗ ದಿಡೀರನೆ ಕುಸಿದು ಬಿದ್ದಿದ್ದಾರೆ. ಅವರ ಹಿಂದೆಯೇ ಅವರ ತಾಯಿ ಕಲಾವತಿ ಮತ್ತು ಮೊಮ್ಮಗ ಶಶಾಂಕ್ ಎನ್ನುವವರು ಕೂಡ ಕಾರಿನಿಂದ ಕೆಳಗಿಳಿದು ನೋಡಲು ಹೋಗಿದ್ದಾರೆ ಅವರು ಕೂಡ ಕುಸಿದು ಬಿದ್ದಿದ್ದಾರೆ.
ಕಾರಿನಲ್ಲಿದ್ದ ಮೂವರ ರಕ್ಷಣೆ
ಕಾರಿನಿಂದ ಹೊರಗೆ ಹೋಗಿ ಕುಸಿದು ಬಿದ್ದಿದ್ದರಿಂದ ಆತಂಕಕ್ಕೀಡಾದ ಇನ್ನೂ ಮೂವರು ಮಂದಿ ಕಾರಿನಿಂದ ಹೊರಗೆ ಬರದೆ ಕಾರಿನೊಳಗೆ ಉಳಿದುಕೊಂಡಿದ್ದಾರೆ. ಇದರಿಂದಾಗಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ. ನಂತರ ಸ್ಥಳಕ್ಕೆ ಬಂದ ಪೊಲೀಸರು ಮತ್ತು ಮೆಸ್ಕಾಂ ಅಧಿಕಾರಿಗಳು ಕಾರಿನಲ್ಲಿದ್ದವರನ್ನು ( ಕಲಾವತಿ ಅವರ ಮಗಳು ಅಂಬಿಕಾ, ಅಂಬಿಕಾ ಅವರ ಪತಿ ರವಿಭಟ್, ಇವರ ಮಗ ಗಣೇಶ್) ರಕ್ಷಿಸಿದ್ದಾರೆ.
ಕರೆಂಟ್ ಶಾಕ್ ಶಂಕೆ
ಕಾರು ವಿದ್ಯುತ್ ಕಂಬಕ್ಕೆ ಗುದ್ದಿದಾಗ ವಿದ್ಯುತ್ ಪ್ರವಹಿಸಿದ ಶಂಕೆ ವ್ಯಕ್ತವಾಗಿದೆ. ಇದರಿಂದಾಗಿ ಕಾರಿನಿಂದ ಹೊರಗೆ ಬಂದ ಮೂವರು ಸಾವಿಗೀಡಾಗಿರಬಹುದು ಎಂದು ಹೇಳಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರವೇ ನಿಖರ ಕಾರಣ ತಿಳಿದು ಬರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಈ ಘಟನೆಯ ಕುರಿತು ರಿಪ್ಪನ್‍ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಾಂತ್ರಿಕ:-ರಾಘವೇಂದ್ರ ಭಟ್
Mo:-9538386688 ಇವರು ನಿಮ್ಮ ಸರ್ವ ಸಮಸ್ಯೆಗಳಿಗೆ ಅಖಂಡ ಮಂಡಲ ಕೇರಳ ಭಗವತಿಪೂಜಾ ದೈವ ಶಕ್ತಿಯಿಂದ ನಿಮ್ಮ ಸಮಸ್ಯೆಗಳಾದ ಮದುವೆ, ದಾಂಪತ್ಯ, ಸಂತಾನ ಸಮಸ್ಯೆ, ಮಕ್ಕಳು ನಿಮ್ ಮಾತು ಕೇಳದಿದ್ದರೆ, ಸ್ತ್ರೀ-ಪುರುಷ ಪ್ರೇಮ ವಿಚಾರ, ಪ್ರೀತಿಯಲ್ಲಿ ನಂಬಿ ಮೋಸ ಹೋದರೆ, ಭೂಮಿ ವಿಚಾರ, ಇಷ್ಟಪಟ್ಟವರು ನಿಮ್ಮಂತ ಆಗಲು, ಈಗಲೇ ಕರೆಮಾಡಿ