ಸಂಗೀತ ಸುಧೆಯನ್ನು ಹರಿಸುವ ಮೂಲಕ ಇಡೀ ರಾಷ್ಟ್ರದಾದ್ಯಂತ ತನ್ನ ಹೆಸರನ್ನು ಪಸರಿಸಿದ ಗಾನಗಂಧರ್ವ ಎಂದೇ ಖ್ಯಾತರಾದ ಎಸ್.ಪಿ ಬಾಲಸುಬ್ರಣ್ಯಂ ಅವರು ಇಂದು ನೆನಪು ಮಾತ್ರ. ಹೌದು ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಇಂದು ಚೆನ್ನೈ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಕಳೆದ ಹಲವು ದಿನಗಳಿಂದ ಅನಾರೋಗ್ಯಕ್ಕೆ ಈಡಾಗಿ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.
ಕೇವಲ ಚಿತ್ರಕ್ಕೆ ಹಾಡನ್ನು ಮಾತ್ರ ಹಾಡದೆ ಹಲವು ಚಿತ್ರಗಳಲ್ಲಿ ಅವರು ಪೋಷಕ ನಟರಾಗಿ ಕೂಡ ಅಭಿನಯಿಸಿದ್ದಾರೆ. ಆದರೆ ಇವತ್ತಿನ ದಿನ ಅವರು ಬರೀ ನೆನಪು ಮಾತ್ರ.