ವಿಜಯವಾಡ: ಆಂಧ್ರಪ್ರದೇಶದ ವಿಜಯವಾಡದ ತಡಿಗಡಪ ಎಂಬಲ್ಲಿ ಮೂಲದ 60 ವರ್ಷದ ವ್ಯಕ್ತಿಯೋರ್ವ ಕನಕ ದುರ್ಗ ಸೇತುವೆಯಿಂದ ಕೃಷ್ಣ ನದಿಗೆ ಹರೀಶ್ ಆತ್ಮಹತ್ಯೆಯನ್ನು ಮಾಡಿಕೊಂಡಿರುವ ಘಟನೆ ಮಂಗಳವಾರದಂದು ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ದುರ್ಗಾ ಪ್ರಸಾದ್ ಎಂದು ಗುರುತಿಸಲಾಗಿದೆ. ಈತ ತನ್ನ ಸಹೋದರನ ಮಗನನ್ನು ತನ್ನ ಜೊತೆಯಲ್ಲಿ ಕರೆದುಕೊಂಡು ಹೋಗಿದ್ದಾನೆ. ಅದರ ಬಳಿಕ ತಾನು ನದಿಗೆ ಪೂಜೆ ಸಲ್ಲಿಸುತ್ತೇನೆ ಆ ದೃಶ್ಯವನ್ನು ರೆಕಾರ್ಡ್ ಮಾಡು ಎಂದು ಹೇಳಿ ಆತನ ಕೈಗೆ ಮೊಬೈಲನ್ನು ಹಿಡಿಸಿದ್ದಾನೆ. ಮೊಬೈಲ್ ಜೊತೆಗೆ ಚಿಕ್ಕದೊಂದು ಪತ್ರವೊಂದನ್ನು ಕೂಡ ನೀಡುತ್ತಾನೆ. ಆನಂತರ ಸೇತುವೆಯ ಮೇಲೆ ನಿಂತು ಪೂಜೆಯನ್ನು ಮಾಡುತ್ತಾ ತನ್ನ ಮಗನಿಗೆ ಸ್ವಲ್ಪ ದೂರಕ್ಕೆ ಸರಿಯುವಂತೆ ಹೇಳಿ ಆತ ದಿಡೀರನೆ ನದಿಗೆ ಹಾರುತ್ತಾನೆ.
ಆಗಲೇ ಜೋರಾದ ಮಳೆಯಿಂದ ತುಂಬಿ ಹರಿಯುತ್ತಿದ್ದ ನದಿಯಲ್ಲಿ ಆತ ಕಣ್ಣೆದುರಲ್ಲೇ ನೀರಿನ ಅಲೆಯಲ್ಲಿ ಕೊಚ್ಚಿಕೊಂಡು ಹೋಗುತ್ತಾನೆ. ಆ ನಂತರ ಸ್ಥಳಕ್ಕೆ ಬಂದ ಪೊಲೀಸರು ಮಗನ ಕೈಯಲ್ಲಿದ್ದ ಪತ್ರವನ್ನು ನೋಡಿದಾಗ ಅದರಲ್ಲಿ ಅನಾರೋಗ್ಯ ವಿರುವುದರಿಂದ ನಾನು ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ಡೆತ್ನೋಟ್ ಬರೆದಿರುತ್ತದೆ.