ಕುಂದಾಪುರ, ಆಗಸ್ಟ್ 19: ಕುಂದಾಪುರದ ಹೊಸ ಅಂಗಡಿ ಚೆಕ್ಪೋಸ್ಟ್ ಅಮಾಸೆಬೈಲು ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ರಾದ ಅನಿಲ್ ಕುಮಾರ್ ಅವರು ಹುಲಿಕಲ್ ಘಾಟ್ ಇಂದ ಹೊಸಂಗಡಿ ಕಡೆಗೆ ಬರುತ್ತಿರುವ ವಾಹನದಲ್ಲಿ ಅಕ್ರಮವಾಗಿ ಗೋಸಾಗಾಟಣೆ ಮಾಡುವುದನ್ನು ಪತ್ತೆಹಚ್ಚಿದ್ದಾರೆ.
ಟ್ರಕ್ ಉತ್ತರಪ್ರದೇಶ ರಾಜ್ಯದ ನೋಂದಣಿ ಹೊಂದಿದ್ದು ಸುಮಾರು 37 ಕೋಣಗಳನ್ನು ಹಿಂಸಾತ್ಮಕವಾಗಿ ಬಂದಿಸಿ ಸಾಗಾಟ ನಡೆಸಲಾಗುತ್ತಿತ್ತು. ಈ ಕೋಣಗಳನ್ನು ವಧೆಗಾಗಿ ಸಾಗಾಟ ನೆ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ. ಪೊಲೀಸರು ಈಗಾಗಲೇ ವಾಹನವನ್ನು ವಶಕ್ಕೆ ಪಡೆದಿದ್ದು ಆರೋಪಿಗಳಾದ ಉತ್ತರ ಪ್ರದೇಶದ ಸಾಹಿರ್ ಜಿಲ್ಲೆಯ ಕಮಲಾಪುರದ ಶಕೀಲ್(35) ಮತ್ತು ಮೀರತ್ ಜಿಲ್ಲೆಯ ಪಕ್ರಿ ಆಲಂ (24)ನ್ನು ಬಂಧಿಸಿ, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
