ಮಂಗಳೂರು, ಆಗಸ್ಟ್ 19: ಮಂಗಳೂರಿನ ಗುರುಪುರದಲ್ಲಿ ಹಿಂದೆ ಗುಡ್ಡ ಕುಸಿತದ ಪರಿಣಾಮವಾಗಿ ಇಬ್ಬರು ಮಕ್ಕಳು ಮೃತಪಟ್ಟಿದ್ದರು. ಇಂತಹ ಘಟನೆ ಇನ್ನೊಂದು ಬಾರಿ ಮರುಕಳಿಸದಂತೆ ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ ಮುನ್ನೆಚ್ಚರಿಕೆಯನ್ನು ವಹಿಸಲಾಗುತ್ತಿದೆ.
ಗುಡ್ಡ ಕುಸಿತವಾದ ಸ್ಥಳದಲ್ಲಿದ್ದ 73 ಕುಟುಂಬಗಳನ್ನು ಈಗಾಗಲೇ ಸ್ಥಳಾಂತರ ಮಾಡಲಾಗಿದ್ದು ಅವರಿಗೆ ಬಾಡಿಗೆಯ ರೂಪವಾಗಿ ತಿಂಗಳಿಗೆ ಎರಡು ಸಾವಿರದ ಐದುನೂರು ರೂಪಾಯಿಗಳನ್ನು ನೀಡಲಾಗುತ್ತಿದೆ. ತಾಲೂಕಿನ ಮೂರು ಕಡೆಯಲ್ಲಿ ಸುಮಾರು 69 ಮನೆಗಳನ್ನು ಅಪಾರ್ಟ್ಮೆಂಟ್ ರೂಪದಲ್ಲಿ ನಿರ್ಮಾಣ ಮಾಡಿ ಕೊಡಲಾಗುವುದು ಎಂಬ ಸುದ್ದಿ ತಿಳಿದು ಬಂದಿದೆ.
Tags:
ಮಂಗಳೂರು ಜಿಲ್ಲಾ ಸುದ್ದಿಗಳು