ಕುಂಬಳೆ, ಆಗಸ್ಟ್ 18: ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಇಬ್ಬರ ಯುವಕರ ಮೃತದೇಹವು ಕಾಸರಗೋಡು ಜಿಲ್ಲೆಯ ಕುಂಬಳೆ ಎಂಬ ಗ್ರಾಮ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ.
ನಾಯ್ಕಾಪುವಿನ ರೋಶನ್ (21 ವರ್ಷ) ಹಾಗೂ ಮಣಿಕಂಠ(19 ವರ್ಷ) ಇವರು ಮತಪಟ್ಟ ದುರ್ದೈವಿಗಳಾಗಿದ್ದಾರೆ. ಇವರಿಬ್ಬರ ಮೃತದೇಹವು ಕುಂಬಳೆ ಕೃಷ್ಣ ನಗರದ ಕಾಡಿನಲ್ಲಿ ಪತ್ತೆಯಾಗಿದೆ. ಮಂಗಳವಾರ ಸಂಜೆಯಿಂದ ಇವರಿಬ್ಬರೂ ಕೂಡ ನಾಪತ್ತೆಯಾಗಿದ್ದರು. ಎರಡು ಬೇರೆಬೇರೆ ಮರಗಳಲ್ಲಿ ಇವರಿಬ್ಬರ ಮತ ದೇಹವು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕುಂಬಳ ತಾಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತ ದೇಹಗಳ ಮಹಜರು ನಡೆಸಿದ ಮೃತ ದೇಹಗಳನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ.
Tags:
ಮಂಗಳೂರು ಜಿಲ್ಲಾ ಸುದ್ದಿಗಳು