ಕುಂದಾಪುರ: ಮೀನುಗಾರಿಕೆಗೆ ತೆರಳಿದ್ದ ಸ್ವಾತಿ ದೋಣಿಯೊಂದು ಸಮುದ್ರದ ಸರಕಸ ಅಲೆಗಳ ಹೊಡೆತಕ್ಕೆ ಸಿಲುಕಿ ಮಗುಚಿ ನಾಲ್ಕು ದಿನದ ಸಾವನ್ನಪ್ಪಿದ್ದು ಹಾಗೂ 7 ಮೀನುಗಾರರನ್ನು ರಕ್ಷಿಸಿದ ಘಟನೆ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಕೊಡೇರಿಯಲ್ಲಿ ರವಿವಾರ ಮಧ್ಯಾಹ್ನ ನಡೆದಿದೆ. ನಾಲ್ಕು ಮಂದಿ ಮೃತರಲ್ಲಿ ಒಬ್ಬನ ಮೃತ ದೇಹ ಸೋಮವಾರ ಪತ್ತೆಯಾಗಿದೆ.
ಪತ್ತೆಯಾದ ಮೃತದೇಹವನ್ನು ಮೀನಾಗರ ನಾಗ ಖಾರ್ವಿಯದ್ದು ಎಂದು ಗುರುತಿಸಲಾಗಿದ್ದು ಇತರೆ ಮೂವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ರವಿವಾರ ದಿನದಂದು ಸಾಗರಶ್ರೀ ಎಂಬ ಮೀನುಗಾರಿಕಾ ನಾಡದೋಣಿಯಲ್ಲಿ ಒಟ್ಟು 11ಮಂದಿ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದರು. ಕೆಲಸವನ್ನು ಮುಗಿಸಿಕೊಂಡು ವಾಪಸವಾಗುತ್ತಿದ್ದ ವೇಳೆ ಕೊಡೇರಿ ಸಮೀಪ ಸಮುದ್ರದ ಭಾರೀ ಅಲೆಗಳ ಹೊಡೆತಕ್ಕೆ ಸಿಲುಕಿತ್ತು. ಆಗ ದೋಣಿಯ ನಿಯಂತ್ರಣವನ್ನು ಕಳೆದುಕೊಂಡು ಅಲ್ಲಿದ್ದ ಕಲ್ಲಿನ ಗೋಡೆಗೆ ರಭಸವಾಗಿ ಡಿಕ್ಕಿ ಹೊಡೆದು ದೋಣಿ ಪಲ್ಟಿಯಾದ ಪರಿಣಾಮವಾಗಿ 4 ಮೀನುಗಾರರು ಸಾವನ್ನಪ್ಪಿದ್ದಾರೆ. ಇದೀಗ ಅವರಲ್ಲಿ ಒಬ್ಬರ ಮೃತ ದೇಹ ಪತ್ತೆಯಾಗಿದ್ದು ಇನ್ನುಳಿದ ಮೂವರು ಮೀನುಗಾರರಾದ ಶೇಖರ, ಲಕ್ಷ್ಮಣ, ಮಂಜುನಾಥ ಅವರಿಗಾಗಿ ಶೋಧ ಕಾರ್ಯ ವನ್ನು ನಡೆಸಲಾಗುತ್ತಿದೆ.
ಉಳಿದ ಏಳು ಮಂದಿಯನ್ನು ರವಿವಾರ ದಿನದಂದು ರಕ್ಷಿಸಿ ಸಾರ್ವಜನಿಕರ ಸಹಕಾರದಿಂದ ದೋಣಿಯನ್ನು ದಡಕ್ಕೆ ತರಲಾಗಿತ್ತು.