ಬಂಟ್ವಾಳ, ಆಗಸ್ಟ್ 17: ಬಂಟ್ವಾಳದ ಮಣಿನಾಲ್ಕೂರು ಗ್ರಾಮ ಪಂಚಾಯಿತಿಯಲ್ಲಿ ಸ್ವಾತಂತ್ರ್ಯದಿನದ ಮರುದಿನದಂದು ತ್ರಿವರ್ಣ ಧ್ವಜವನ್ನು ತಲೆಕೆಳಗಾಗಿ ಹಾರಿಸಿ ಧ್ವಜವನ್ನು ರಾತ್ರಿಯವರೆಗೂ ಇಳಿಸದೆ ಹಾರಿಸಿದ ಘಟನೆ ನಡೆದಿದ್ದು ಇದರ ಬಗ್ಗೆ ಸ್ಥಳೀಯ ಸಂಘಟನೆಯ ಕಾರ್ಯಕರ್ತರು ಗ್ರಾಮೀಣ ಪೊಲೀಸ್ ಠಾಣೆಗೆ ಮೌಖಿಕವಾಗಿ ದೂರನ್ನು ನೀಡಿದ್ದಾರೆ.
ಅಗಸ್ಟ್ 16 ಸೋಮವಾರದ ದಿನ ದಿನದಂದು ಬೆಳಿಗ್ಗೆ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಮಣಿನಾಲ್ಕೂರು ಎಂಬ ಗ್ರಾಮ ಪಂಚಾಯತಿಯಲ್ಲಿ ಧ್ವಜವನ್ನು ಹಾರಿಸಲಾಗಿದೆ ಹಸಿರು ಬಣ್ಣದ ಮೇಲೆ ಮತ್ತು ಕೇಸರಿ ಬಣ್ಣ ಕೆಳಗೆ ಬರುವಂತೆ ಅದನ್ನು ತಲೆಕೆಳಗಾಗಿ ಹಾರಿಸಲಾಗಿತ್ತು. ಉಳಿದಂತೆ 8:00 ಗಂಟೆಯಾದರೂ ಕೂಡ ಧ್ವಜವನ್ನು ಕೆಳಗಿಳಿಸಿರಲಿಲ್ಲ ಎಂದು ಸ್ಥಳೀಯ ಸಾರ್ವಜನಿಕರು ಗ್ರಾಮೀಣ ಪೊಲೀಸರಿಗೆ ಸ್ಥಳೀಯರು ಹೇಳಿದ್ದಾರೆ.
ಧ್ವಜವನ್ನು ಕೆಳಗೆ ಇಳಿಸಿದ ಇರುವುದನ್ನು ಕಂಡ ಸ್ಥಳೀಯರು ಎಲ್ಲರೂ ಒಟ್ಟಾಗಿ ಕೆಳಗಿಳಿಸಿದ್ದಾರೆ.
ಧ್ವಜ ಸಂಹಿತೆಯ ಸ್ಪಷ್ಟ ಉಲ್ಲಂಘನೆಯ ಘಟನೆಯ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಿದ ನಂತರ ಹೆಚ್ಚಿನ ಮಾಹಿತಿ ತಿಳಿದು ಬರಲಿದೆ.