ಕನ್ನಡದ ನವರಸ ನಾಯಕ ಜಗ್ಗೇಶ್ ಅವರು ಕೂಡ ತುಳು ಭಾಷಾಅಭಿಯಾನಕ್ಕೆ ಬೆಂಬಲವನ್ನು ನೀಡಿದ್ದು ಟ್ವೀಟ್ ಮೂಲಕ “ ನಾನು ಕೂಡ ನಿಮ್ಮೊಂದಿಗೆ ತುಳು ಭಾಷೆ ಅಭಿಯಾನಕ್ಕೆ” ಬರುತ್ತೇನೆ ಎಂದು ಹೇಳಿದ್ದಾರೆ.
ಇದೇ ಬರುವ ಆಗಸ್ಟ್ 16ರಂದು ಜೈ ತುಳುನಾಡು ಸಂಘಟನೆ ತುಳು ಭಾಷೆಯನ್ನು ನೂತನ ಶಿಕ್ಷಣ ನೀತಿ 202020ಕ್ಕೆ ಸೇರಿಸುವಂತೆ ಜನಪ್ರತಿನಿಧಿಗಳ ಗಮನವನ್ನು ಸೆಳೆಯಲು “ಎಜುಕೇಶನ್” ಎಂಬ hashtag ನೊಂದಿಗೆ ಅಭಿಯಾನವನ್ನು ನಡೆಸಲು ಆಯೋಜಿಸಿದೆ.
ಸರ್ಕಾರಕ್ಕೆ ತುಳು ಭಾಷೆಯ ಮಹತ್ವವನ್ನು ಸಾರಲು ಮತ್ತು ಸರ್ಕಾರವನ್ನು ಇದರ ಬಗ್ಗೆ ಎಚ್ಚರಿಸಲು ಎಲ್ಲರೂ ಎಜುಕೇಶನ್ ಎಂಬ hashtag ನೊಂದಿಗೆ ಅಭಿಯಾನಕ್ಕೆ ಬೆಂಬಲವನ್ನು ನೀಡಿದ್ದಾರೆ. ಇನ್ನುಳಿದಂತೆ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ತುಳು ಭಾಷಿಕರಿಗೆ ತುಳು ಮಾಧ್ಯಮದ
ಲ್ಲಿಯೇ ಶಿಕ್ಷಣ ಸಿಗುವಂತಾಗಬೇಕು ಎಂಬ ನಿಟ್ಟಿನಲ್ಲಿ ಈ ಅಭಿಯಾನವನ್ನು ಆಯೋಜಿಸಲಾಗುತ್ತಿದೆ.
Tags:
ಉಡುಪಿ ಜಿಲ್ಲಾ ಸುದ್ದಿಗಳು