ಮಂಗಳೂರು, ಆಗಸ್ಟ್ 16: ಬೈಕ್ ಸವಾರನೊಬ್ಬ ರಸ್ತೆಯ ಡಿವೈಡರ್ ಗೆ ಡಿಕ್ಕಿ ಹೊಡೆದು ಪವಾಡಸದೃಶವಾಗಿ ದುರ್ಘಟನೆಯಿಂದ ಪಾರಾದ ಘಟನೆ ಮಂಗಳೂರಿನ ಬೊಂದೇಲ್‌ನಲ್ಲಿ ನಡೆದಿದೆ.
ಸವಾರನೊಬ್ಬ ಸ್ಕೂಟಿಯಲ್ಲಿ ರೋಡನ್ನು ಕ್ಲಾಸ್ ಮಾಡಲು ಮುಂದಾಗಿದ್ದ ಸಂದರ್ಭದಲ್ಲಿ ಮುಂದಿನಿಂದ ವಿರುದ್ಧ ದಿಕ್ಕಿನಲ್ಲಿ ಬಂದ ಬೈಕ್ ಅನ್ನು ನೋಡಿ ತನ್ನ ಬೈಕನ್ನು ಮದ್ಯ ರಸ್ತೆಯಲ್ಲಿಯೇ ನಿಲ್ಲಿಸಿದ್ದಾನೆ. ಇದೇ ವೇಳೆಯಲ್ಲಿ ಎದುರಿನಿಂದ ಬರುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಸ್ಕೂಟಿಗೆ ಡಿಕ್ಕಿ ಹೊಡೆದು ಅದರ ಬಳಿಕ ಡಿವೈಡರ್‌ಗೆ ಡಿಕ್ಕಿಯಾಗಿದೆ. ಇದರ ಪರಿಣಾಮವಾಗಿ ಬೈಕ್ ಸವಾರ ರಸ್ತೆಯಲ್ಲಿ ಬಿದ್ದು ಪವಾಡಸದೃಶವಾಗಿ ಚಿಕ್ಕಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ. ಈ ಅಪಘಾತದ ದೃಶ್ಯವು ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Tags:
ಮಂಗಳೂರು ಜಿಲ್ಲಾ ಸುದ್ದಿಗಳು