ಕಾರವಾರ, ಆಗಸ್ಟ್ 15: ಗಣೇಶೋತ್ಸವ ಸಂಭ್ರಮವನ್ನು ಹೆಚ್ಚುಕಡಿಮೆ ಕರೊನಾ ವೈರಸ್ ಸೋಂಕು ಕಸಿದುಕೊಂಡು ಬಿಟ್ಟಿದೆ. ಕರೋನಾವೈರಸ್ ಸೋಂಕಿನ ಪರಿಣಾಮ ಈ ಸಲ ಗಣೇಶ ಮೂರ್ತಿಗಳನ್ನು ಜನನಿಬಿಡ ಸಾರ್ವಜನಿಕ ಪ್ರದೇಶಗಳಲ್ಲಿ ಸ್ಥಾಪನೆ ಮಾಡುವ ಹಾಗಿಲ್ಲ.
ಕೋರೋಣ ವೈರಸ್ ಸೋಂಕು ನಿಯಂತ್ರಣದ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೊಸ ಸುತ್ತೋಲೆಯ ಆದೇಶವನ್ನು ಹೊರಡಿಸಿದೆ.
ಈ ಆದೇಶದ ಪ್ರಕಾರ ಮನೆ ಮತ್ತು ದೇವಸ್ಥಾನಗಳಲ್ಲಿ ಮಾತ್ರ ಗಣೇಶಮೂರ್ತಿಯ ಪ್ರತಿಷ್ಠಾಪನೆಗೆ ಅವಕಾಶವಿರುತ್ತದೆ. ಇದರ ಬಗ್ಗೆ ಕಾರವಾರ ಜಿಲ್ಲಾಧಿಕಾರಿ ಡಾ ಹರೀಶ್ ಕುಮಾರ್ ಅವರು ಅಧಿಕೃತ ಮಾಹಿತಿಯನ್ನು ನೀಡಿದ್ದಾರೆ.
ಗಣೇಶ ಹಬ್ಬದ ಸಂದರ್ಭದಲ್ಲಿ ಯಾರು ಗುಂಪುಗುಂಪಾಗಿ ಸೇರದೆ ಸೋಶಿಯಲ್ ಡಿಸ್ಟೆನ್ಸ್ ಮೆಂಟೇನ್ ಮಾಡುವ ಮೂಲಕ ಈ ಸಾರಿ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಬೇಕು ಎಂದು ಅವರು ಕೇಳಿಕೊಂಡಿದ್ದಾರೆ.
ಮಾರ್ಗಸೂಚಿಯಲ್ಲಿ ಇರುವ ಕೆಲವು ಪ್ರಮುಖ ಅಂಶಗಳು?
1) ಗಣೇಶ ಮೂರ್ತಿಯನ್ನು ಗಲ್ಲಿ, ರಸ್ತೆ, ಓಣಿ ಮುಂತಾದ ಜನನಿಬಿಡ ಪ್ರದೇಶದಲ್ಲಿ ಪ್ರತಿಷ್ಠಾಪನೆ ಮಾಡಬಾರದು.
2) ನದಿ, ಕೆರೆ, ಕೊಳ, ಬಾವಿ ಮತ್ತು ಕಲ್ಯಾಣಿಗಳಲ್ಲಿ ಗಣೇಶ ಮೂರ್ತಿಯ ವಿಸರ್ಜನೆಯನ್ನು ಮಾಡಬಾರದು. ಮನೆಗಳಲ್ಲಿ ಸ್ಥಾಪಿಸಿದ ವಿಗ್ರಹಗಳನ್ನು ಅವರವರ ಮನೆ ಆವರಣದಲ್ಲಿಯೇ ವಿಸರ್ಜನೆ ಮಾಡಬೇಕು
3) ಗಣೇಶ ಚತುರ್ಥಿ ಹಬ್ಬವನ್ನು ಆಚರಿಸುವ ಪ್ರತಿಯೊಂದು ದೇವಸ್ಥಾನಗಳಲ್ಲಿ ಪ್ರತಿನಿತ್ಯ ಸ್ಯಾನಿಟೈಝೇಷನ್ ಕಡ್ಡಾಯವಾಗಿರಬೇಕು.
