ಭಟ್ಕಳ, ಆಗಸ್ಟ್ 14: ಸೈಬರ್ ವಂಚಕರು ಬೇರೆಬೇರೆ ಡಿಜಿಟಲ್ ಪ್ಲಾಟ್ಫಾರ್ಮ್ ಗಳ ಮೂಲಕ ಗ್ರಾಹಕರನ್ನು ವಂಚಿಸುತ್ತಿದ್ದಾರೆ. ಇದೀಗ ಕೋವಿಡ್ 19 ಹೆಸರಲ್ಲಿ ಗ್ರಾಹಕರನ್ನು ವಂಚಿಸುವ ಕೆಲವಷ್ಟು ಸೈಬರ್ ಕಿರಾತಕರು ಹುಟ್ಟಿಕೊಂಡಿದ್ದಾರೆ. ಇವರಿಂದ ಸಾರ್ವಜನಿಕರು ಎಚ್ಚರವಾಗಿರಬೇಕು ಎಂದು ಮುಡೇಶ್ವರ ಪೊಲೀಸರು ಮಾಹಿತಿ ಮತ್ತು ಸೂಚನೆಯನ್ನು ನೀಡಿದ್ದಾರೆ.
ಕೋವಿಡ್ 19 ರಲ್ಲಿ ಸೈಬರ್ ಕದೀಮರು ಹೇಗೆ ವಂಚಿಸುತ್ತಿದ್ದಾರೆ?
ಯಾವುದೋ ಒಂದು ಅನಾಮಧೇಯ ನಂಬರಿಂದ ಕಾಲ್ ಮಾಡಿ ನಾವು ಫೋನ್ ಪೇ ಕಡೆಯಿಂದ ಮಾತನಾಡುತ್ತಿರುವುದು. ನಮ್ಮ ಎಲ್ಲಾ ಪೋನಪೆ ಫೋನ್ ಪೇ ವಿಮಾ ನಿಗಮದಿಂದ ₹5000 ಸಿಗುತ್ತಿದೆ ಎಂದು ಹೇಳುತ್ತಾರೆ. ಆ ಹಣವನ್ನು ಪಡೆದುಕೊಳ್ಳಲು ನೀವು ನಾವು ಕಳಿಸುವ To-Pay ಎನ್ನುವ ಲಿಂಕನ್ನು ಕ್ಲಿಕ್ ಮಾಡಬೇಕು.ಹಾಗಿದ್ದರೆ ನಿಮಗೆ ₹5000 ಬರುತ್ತದೆ ಎಂದು ಹೇಳುತ್ತಾರೆ. ಒಂದು ವೇಳೆ ಅಪ್ಪಿತಪ್ಪಿಯೂ ನೀವು ಆ ಲಿಂಕನ್ನು ಕ್ಲಿಕ್ ಮಾಡಿದರೆ ನಿಮ್ಮ ಫೋನಿನಿಂದ ನಿಮ್ಮಲ್ಲಿರುವ ಬ್ಯಾಂಕ್ ಬ್ಯಾಲೆನ್ಸ್ ಕಡಿತವಾಗುತ್ತದೆ.
ಈ ತರನಾಗಿ ಸೈಬರ್ ಕದಿಮರು ವಂಚಿಸುತ್ತಿದ್ದಾರೆ. ಇದರ ಬಗ್ಗೆ ಸಾರ್ವಜನಿಕರು ಆದಷ್ಟು ಸುರಕ್ಷತೆಯಿಂದ ಇರಬೇಕು ಎಂದು ಮುಡೇಶ್ವರ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.
