ಕಾಸರಗೋಡು, ಜು. 14: ತಂಗಿಗೆ ವಿಷಯವನ್ನು ಉಣಿಸಿ ಕೊಲೆಗೈದ ಆರೋಪಿ ಆಲ್ಬಿನ್ ನನ್ನು ಪೊಲೀಸರು ವಶಪಡಿಸಿಕೊಂಡು ಇಂದು ಸಂಜೆ ಕಾಸರಗೋಡು ಪ್ರಥಮ ದರ್ಜೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಮತ್ತು 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ.
ಈತ 22 ವರ್ಷ ವಯಸ್ಸಿನವನಾಗಿದ್ದು 16ವರ್ಷದ ತಂಗಿ ಆನ್ ಮೇರಿಗೆ ವಿಷಯವನ್ನು ತಿನ್ನಿಸಿ ಕೊಲೆಗೈದಿದ್ದಾನೆ. ಮಾದಕ ವ್ಯಸನಿಯಾಗಿದ್ದ ಇವನ ಮೇಲೆ ಕುಟುಂಬದವರಿಗೆ ಅನುಮಾನ ಬಂದು ಬುದ್ಧಿವಾದ ಹೇಳಿದ್ದರು. ಇದರಿಂದ ಸಿಟ್ಟಾದ ಈತನು ಕುಟುಂಬದವರೆಲ್ಲರಿಗೂ ವಿಷವನ್ನು ಉಣಿಸಿ ಕೊಲೆಗೈದು ಸಾಮೂಹಿಕ ಆತ್ಮಹತ್ಯೆ ಎಂದು ಬಿಂಬಿಸಲು ಹೊರಟಿದ್ದ. ಕುಟುಂಬದ ಎಲ್ಲರನ್ನೂ ಕೊಲೆಗೈದು 4 1/2 ಎಕರೆ ಆಸ್ತಿಯನ್ನು ಮಾರಾಟ ಮಾಡಿ ಐಷಾರಾಮಿ ಜೀವನವನ್ನು ನಡೆಸಲು ಹೊಂಚು ಹಾಕುತ್ತಿದ್ದ.
Tags:
ಮಂಗಳೂರು ಜಿಲ್ಲಾ ಸುದ್ದಿಗಳು
