ಅಂಕೋಲಾ: ಪಟ್ಟಣದ ಅಗಸೂರು ಪಂಚಾಯತ್ ವ್ಯಾಪ್ತಿಯ ನವ ಗದ್ದೆ ಅರಣ್ಯ ಪ್ರದೇಶದಲ್ಲಿ ಮೂರು ತಿಂಗಳ ತುಂಬು ಗರ್ಭಿಣಿಯಾಗಿದ್ದ ಆರು ವರ್ಷದ ಕಡವೆ ಯೊಂದನ್ನು ಕಿರಾತಕರು ನಾಡ ಬಂದೂಕಿನಲ್ಲಿ ಬೇಟೆಯಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಮೂವರು ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ನಾಗೇಂದ್ರ ಕನ್ಯಾ ಗೌಡ, ಬ್ರಿಜೇಶ್ ಗೋಪಾಲ ನಾಯಕ, ಹನುಮಾ ಜಟ್ಟ ಗೌಡ ಇವರು ಬಂಧಿತ ಆರೋಪಿಗಳಾಗಿದ್ದಾರೆ. ಪ್ರಕರಣದಲ್ಲಿ ಉಪಯೋಗಿಸಿದ ನಾಡ ಬಂದೂಕು ವೆಂಕಟರಮಣ ನಾಯಕ ಅವರಿಗೆ ಸೇರಿದ್ದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.